Sunday, September 8, 2024

Latest Posts

ಯಾರೇ ಆಗಲಿ ಈ 7 ತಪ್ಪುಗಳನ್ನು ಎಂದಿಗೂ ಮಾಡಬೇಡಿ..

- Advertisement -

ಮನುಷ್ಯ ಆದವನು ಜೀವನದಲ್ಲಿ ತಪ್ಪು ಮಾಡೋದು ಸಹಜ. ಹಾಗೆ ತಪ್ಪೇ ಮಾಡದ ಮನುಷ್ಯರಿರೋಕ್ಕೆ ಸಾಧ್ಯವೇ ಇಲ್ಲ. ಆದ್ರೆ ಗರುಡ ಪುರಾಣದ ಪ್ರಕಾರ ಯಾರೇ ಆಗಲಿ 7 ತಪ್ಪುಗಳನ್ನು ಮಾಡಲೇಬಾರದಂತೆ. ಹಾಗಾದ್ರೆ ಅದ್ಯಾವುದು 7 ತಪ್ಪುಗಳು ಅಂತಾ ತಿಳಿದುಕೊಳ್ಳೋಣ ಬನ್ನಿ..

ಮೊದಲನೇಯ ತಪ್ಪು, ಕೊಳಕು ಬಟ್ಟೆ ಧರಿಸುವುದು. ಕೊಳಕು ಬಟ್ಟೆ ಧರಿಸಿದ ವ್ಯಕ್ತಿಯನ್ನ ಯಾರೂ ಗೌರವಿಸುವುದಿಲ್ಲ. ಅವನ ಜೊತೆ ಮಾತನಾಡುವುದಿರಲಿ, ಅವನನ್ನು ಯಾರೂ ಹತ್ತಿರ ಸೇರಿಸಿಕೊಳ್ಳುವುದಿಲ್ಲ. ಅವನಿಗೆ ಮಾನಸಿಕ ಖಿನ್ನತ ಉಂಟಾಗುತ್ತದೆ. ಅಂಥವರಿಗೆಂದೂ ಯಶಸ್ಸು ಸಿಗುವುದಿಲ್ಲ. ಹಾಗಾಗಿ ಎಂದಿಗೂ ಸ್ವಚ್ಛವಾದ ಬಟ್ಟೆ ಧರಿಸಿ.

ಮೊದಲ ಬಾರಿ ನವರಾತ್ರಿ ವೃತ ಮಾಡಿದವರು ಯಾರು ಗೊತ್ತಾ..?- ಭಾಗ 1

ಎರಡನೇಯ ತಪ್ಪು, ನೈವೇದ್ಯ ಮಾಡದೇ ಊಟ ಮಾಡುವುದು. ನೀವು ಮಾಡಿದ ಅಡುಗೆಯನ್ನು ದೇವರ ಮುಂದಿಟ್ಟು, ಕೈಮುಗಿದು ಧನ್ಯವಾದ ಹೇಳಿ ಊಟ ಮಾಡಿ. ಹೀಗೆ ಮಾಡುವುದರಿಂದ ದೇವರ ಕೃಪೆ ನಿಮ್ಮ ಮೇಲಿರುತ್ತದೆ. ಇಲ್ಲವಾದಲ್ಲಿ, ಊಟ ಮಾಡುವಾಗ ದೇವರನ್ನು ನೆನಪಿಸಿಕೊಂಡರೂ ಸಾಕು.

ಮೂರನೇಯ ತಪ್ಪು, ಧರ್ಮದ ಬಗ್ಗೆ ಅರಿವಿಲ್ಲದಿರುವುದು. ನಮ್ಮ ಧರ್ಮದ ಬಗ್ಗೆ ನಮಗೆ ಅರಿವಿರಬೇಕು. ನಮ್ಮ ಧರ್ಮವನ್ನು ನಾವು ಗೌರವಿಸಬೇಕು. ಆಗ ಪರೋಕ್ಷವಾಗಿ ಧರ್ಮ ನಮ್ಮನ್ನು ಕಾಪಾಡುತ್ತದೆ. ಧರ್ಮದ ಬಗ್ಗೆ ಇರುವ ಪುಸ್ತಕವನ್ನು ಓದಬೇಕು. ಪೂಜ ಪಾಠಗಳ ಬಗ್ಗೆ ಅರಿವಿರಬೇಕು.

ಮೊದಲ ಬಾರಿ ನವರಾತ್ರಿ ವೃತ ಮಾಡಿದವರು ಯಾರು ಗೊತ್ತಾ..?- ಭಾಗ 2

ನಾಲ್ಕನೇಯ ತಪ್ಪು, ಸ್ವಚ್ಛವಾಗಿಲ್ಲದಿರುವುದು. ಮನುಷ್ಯ ಸರಿಯಾಗಿ ಸ್ನಾನ ಮಾಡಿ, ಹಲ್ಲುಜ್ಜಿದರೆ, ಆರೋಗ್ಯವಂತನಾಗಿರುತ್ತಾನೆ. ಅದನ್ನು ಬಿಟ್ಟು, ಆಲಸ್ಯ ಮಾಡಿದರೆ, ಅವನನ್ನು ಯಾರೂ ಹತ್ತಿರ ಸೇರಿಸಿಕೊಳ್ಳುವುದಿಲ್ಲ. ರೋಗಗ್ರಸ್ತನಾಗುತ್ತಾನೆ. ಅಂಥ ವ್ಯಕ್ತಿಯನ್ನು ಲಕ್ಷ್ಮೀ ಎಂದಿಗೂ ಇಷ್ಟ ಪಡುವುದಿಲ್ಲ. ಹಾಗಾಗಿ ಪ್ರತಿದಿನ ಸ್ನಾನಾದಿಗಳನ್ನು ಮಾಡಿ, ಸ್ವಚ್ಛವಾಗಿರಿ.

ಐದನೇಯ ತಪ್ಪು, ಯಾವಾಗಲೂ ಆಲಸ್ಯದಿಂದಿರುವುದು. ನಿದ್ದೆ ಮಾಡುವುದು. ಬೆಳಿಗ್ಗೆ ಬೇಗ ಏಳಬೇಕು, ರಾತ್ರಿ ಬೇಗ ಮಲಗಬೇಕು. ಅದನ್ನು ಬಿಟ್ಟು ಬೆಳಿಗ್ಗೆ ಲೇಟಾಗಿ ಎದ್ದು, ತಿಂಡಿ ತಿಂದು ಮತ್ತೆ ಮಲಗಿ, ಊಟ ಮಾಡಿ ಮತ್ತೆ ಮಲಗಿ, ಸಂಜೆ ಹೊತ್ತು ಮಲಗಿಕೊಂಡೇ ಇದ್ದರೆ, ನಿಮ್ಮ ಮನೆಗೆ ದರಿದ್ರ ಆವರಿಸುವುದು ಗ್ಯಾರಂಟಿ. ಹಾಗಾಗಿ ಆಲಸ್ಯ ಬಿಡಿ.

ಇಂಥ ಸಮಯದಲ್ಲಿ ಊಟ ಮಾಡುವವರು ಎಂದಿಗೂ ರೋಗಗ್ರಸ್ತರಾಗಿರುತ್ತಾರೆ..?

ಆರನೇಯ ತಪ್ಪು, ನಿಮಗಿಂತ ಹಿರಿಯರಿಗೆ ಅಗೌರವ ತೋರುವುದು. ಮನೆಯಲ್ಲಿ ಅಥವಾ ಹೊರಗೆ ನಿಮಗಿಂತ ಹಿರಯರ ಬಳಿ ಜಗಳವಾದರೆ, ತಪ್ಪು ನಿಮ್ಮದಾಗಿದ್ದಲ್ಲಿ ಕ್ಷಮೆ ಕೇಳಿ. ತಪ್ಪು ಅವರದ್ದಾಗಿದ್ದಲ್ಲಿ, ಮೌನವಾಗಿರಿ. ಅದನ್ನು ಬಿಟ್ಟು ಎದುರುತ್ತರ ನೀಡುವುದು, ದನಿಏರಿಸಿ ಮಾತನಾಡಬೇಡಿ. ಇದು ಉತ್ತಮರ ಲಕ್ಷಣವಲ್ಲ.

ಏಳನೇಯ ತಪ್ಪು, ಅಗತ್ಯಕ್ಕಿಂತ ಹೆಚ್ಚು ಊಟ ಮಾಡುವುದು. ಗರುಡ ಪುರಾಣದ ಪ್ರಕಾರ, ಅಗತ್ಯಕ್ಕಿಂತ ಹೆಚ್ಚು ಊಟ ಮಾಡುವನು ಎಂದಿಗೂ ಉದ್ಧಾರವಾಗುವುದಿಲ್ಲ. ಯಾಕಂದ್ರೆ ಅವನಲ್ಲಿ ಆಲಸ್ಯ ಬರುತ್ತದೆ. ಅನಾರೋಗ್ಯ ಉಂಟಾಗುತ್ತದೆ. ಹಾಗಾಗಿ ಅವನು ದರಿದ್ರನಾಗಿಯೇ ಇರುತ್ತಾನೆ ಹೊರತು ಅವನೆಂದೂ ಯಶಸ್ವಿಯಾಗಲು ಸಾಧ್ಯವೇ ಇಲ್ಲ.

- Advertisement -

Latest Posts

Don't Miss