Thursday, April 3, 2025

Latest Posts

ನಿಮಗೆ, ಜ್ವರ ಅಥವಾ ನೆಗಡಿ, ಕೆಮ್ಮು ಬಂದಾಗ, ಈ ತಪ್ಪುಗಳನ್ನ ಮಾಡಲೇಬೇಡಿ..

- Advertisement -

ಜ್ವರ, ನೆಗಡಿ, ಕೆಮ್ಮು ಬಂದರೆ, ಅಷ್ಟು ಸುಲಭವಾಗಿ ಹೋಗೋದಿಲ್ಲಾ. 2 ರಿಂದ 3 ದಿನ ಬೇಕೆ ಬೇಕು. ಆದ್ರೆ ಹೀಗೆ 2 ದಿನದೊಳಗೇ ಕೆಮ್ಮು, ನೆಗಡಿ ಹೋಗದಿದ್ರೆ, ಆಸ್ಪತ್ರೆಗೆ ಹೋಗಲಾಗತ್ತೆ. ಆದ್ರೆ ನೀವು ಸರಿಯಾದ ರೀತಿಯಲ್ಲಿ ಇದಕ್ಕೆ ಮನೆಯಲ್ಲೇ ಚಿಕಿತ್ಸೆ ತೆಗೆದುಕೊಂಡರೆ, ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇರೋದಿಲ್ಲಾ. ಹಾಗಾದ್ರೆ ಜ್ವರ, ನೆಗಡಿ, ಕೆಮ್ಮು ಬಂದಾಗ, ಯಾವ ತಪ್ಪುಗಳನ್ನು ಮಾಡಬಾರದು ಅಂತಾ ತಿಳಿಯೋಣ ಬನ್ನಿ..

ಮೊದಲನೇಯ ತಪ್ಪು, ಆಹಾರ ಸೇವಿಸೋದು. ಹೌದು, ಇದು ನಿಮಗೆ ಆಶ್ಚರ್ಯಪಡಿಸಬಹುದು. ಆದ್ರೆ ಇದು ನಿಜ. ನಮಗೆ ಜ್ವರ, ನೆಗಡಿ, ಕೆಮ್ಮು ಬಂದಾಗ, ನಾವು ಉಪವಾಸ ಮಾಡಬೇಕು. ಬಿಸಿ ನೀರಿನ ಸೇವನೆಯನ್ನಷ್ಟೇ ಮಾಡಬೇಕು. ಉಪವಾಸ ಮಾಡಿದ್ದಲ್ಲಿ, ಆದಷ್ಟು ಬೇಗ ನಾವು ಸುಧಾರಿಸುತ್ತೇವೆ. ಈ ವೇಳೆ ನೀವು ಎಳನೀರು, ಸೂಪ್, ಜ್ಯೂಸ್‌ನಂಥ ದ್ರವ ಪದಾರ್ಥ ಸೇವನೆ ಮಾಡಬಹುದು. ನಿರಾಹಾರ ಉಪವಾಸವೇ ಮಾಡಬೇಕೆಂದಿಲ್ಲ. ಆದ್ರೆ ಕೆಲವರಿಗೆ ಉಪವಾಸ ಮಾಡುವ ತಾಕತ್ತು ಇರೋದಿಲ್ಲಾ. ಅಂಥವರು ಸೂಪ್ ಸೇವನೆಯನ್ನಾದ್ರೂ ಮಾಡಲೇಬೇಕು.

ಎರಡನೇಯ ತಪ್ಪು, ಪೂರ್ತಿಯಾಗಿ ರೆಸ್ಟ್ ಮಾಡದೇ ಇರುವುದು. ನಿಮಗೆ ಹುಷಾರಿಲ್ಲದಿದ್ದಾಗ, ನೀವು ಆಫೀಸಿಗೆ, ಶಾಲಾ- ಕಾಲೇಜಿಗೆ ರಜೆ ಹಾಕುತ್ತೀರಿ. ಆದ್ರೆ ಹಾಗೆ ರಜೆ ಹಾಕಿ, ಮನೆಯಲ್ಲಿ ಸುಮ್ಮನೆ ನಿದ್ರಿಸುವುದೋ, ಅಥವಾ ಸುಮ್ಮನೆ ಕುಳಿತುಕೊಂಡರೆ ಉತ್ತಮ. ಆದ್ರೆ ರಜೆ ಹಾಕಿ, ಟಿವಿ ನೋಡಿದೆ, ಮೊಬೈಲ್‌ನಲ್ಲಿ ಗೇಮ್ ಆಡಿದೆ, ಮೂವಿ ನೋಡಿದೆ, ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ಅದು ಸಂಪೂರ್ಣ ವಿಶ್ರಾಂತಿಯಾಗುವುದಿಲ್ಲ. ಮತ್ತು ನೀವು ಹೀಗಿದ್ದಲ್ಲಿ, ನೀವು ಬೇಗ ಗುಣಮುಖರಾಗಲು ಸಾಧ್ಯವಿಲ್ಲ. ಹಾಗಾಗಿ ಪೂರ್ತಿಯಾಗಿ ರೆಸ್ಟ್ ಮಾಡಬೇಕು.

ಮೂರನೇಯ ತಪ್ಪು, ಜ್ವರ ಬಂದ ತಕ್ಷಣ ಗುಳಿಗೆ ತೆಗೆದುಕೊಳ್ಳುವುದು. ಜ್ವರ ಬಂದು ಒಂದು ದಿನವಾದ್ರೂ ನೀವು ಅದನ್ನ ಅನುಭವಿಸಬೇಕು. ಯಾಕಂದ್ರೆ ವರ್ಷಕ್ಕೆ ಒಮ್ಮೆಯಾದರೂ ಜ್ವರ ಬರಬೇಕಂತೆ. ಹಾಗೆ ಬಂದಾಗಲೇ, ನಮ್ಮ ದೇಹ ಶುದ್ಧವಾಗುತ್ತದೆ. ಹಾಗಾಗಿ ಜ್ವರ ಬಂದಾಗ ತಕ್ಷಣ ಗುಳಿಗೆ ತೆಗೆದುಕೊಳ್ಳದೇ, ಆ ಜ್ವರವನ್ನ ಒಂದು ದಿನ ಅನುಭವಿಸಿ. ನಂತರ ಮನೆ ಮದ್ದು ಮಾಡಿ. ಏನಾದರೂ ನಿಮ್ಮ ಜ್ವರ ಹೋಗದಿದ್ದಲ್ಲಿ, ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಿರಿ.

ಈ ತಪ್ಪು ಮಾಡದಿದ್ರೆ ನಿಮ್ಮ ಸೌಂದರ್ಯ ಇನ್ನೂ ಚೆಂದವಾಗತ್ತೆ..

ರವಾ ಥಾಲಿಪಟ್ಟನ್ನ ಒಮ್ಮೆ ಈ ರೀತಿ ಮಾಡಿ ನೋಡಿ..

ರಾತ್ರಿ ಊಟದ ವಿಷಯದಲ್ಲಿ ನೀವು ಮಾಡುವ 3 ತಪ್ಪುಗಳಿವು..

- Advertisement -

Latest Posts

Don't Miss