ಯೋಗ ಮಾಡಿದ್ರೆ, ನಮ್ಮ ದೇಹದ ಮೈಕಟ್ಟು ಚೆನ್ನಾಗಿರತ್ತೆ. ನಮ್ಮ ಆರೋಗ್ಯ ಕೂಡ ಉತ್ತಮವಾಗಿರತ್ತೆ ಅನ್ನೋದು ಗೊತ್ತು. ಆದ್ರೆ ಯೋಗ ಮಾಡುವುದು ಗೊತ್ತಿಲ್ಲದೇ, ತಪ್ಪು ತಪ್ಪಾದ ವಿಧಾನದಲ್ಲಿ ಯೋಗ ಮಾಡಿದ್ರೆ, ನಮ್ಮ ಆರೋಗ್ಯಕ್ಕೆ ಕುತ್ತು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಯೋಗ ಮಾಡುವಾಗ ಮಾಡಬಾರದ 5 ತಪ್ಪುಗಳು ಯಾವುದು ಎಂದು ತಿಳಿಯೋಣ ಬನ್ನಿ..
ಮೊದಲನೇಯ ತಪ್ಪು, ವಾರ್ಮ್ ಅಪ್ ಮಾಡದೇ, ಯೋಗ ಮಾಡಲು ಶುರು ಮಾಡುವುದು. ವಾರ್ಮ್ ಅಪ್ ಮಾಡುವುದರಿಂದ ನಮ್ಮ ಕಾಲು ಮೂಳೆಗಳ ಜಾಯಿಂಟ್ ಓಪೆನಿಂಗ್ ಆಗತ್ತೆ. ಹೀಗೆ ಮಾಡಿದ ಮೇಲೆ ಯೋಗ ಮಾಡಿದಾಗ, ನಮ್ಮ ಕೈ ಕಾಲುಗಳಿಗೆ ಪೆಟ್ಟು ಬೀಳುವುದು ತಪ್ಪುತ್ತದೆ. ಕೆಲವೊಮ್ಮೆ ಕೆಲವರು ಡೈರೆಕ್ಟ್ ಆಗಿ ಯೋಗ ಮಾಡಲು ಶುರು ಮಾಡಿದಾಗ, ಕಾಲು ಉಳುಕುತ್ತದೆ. ಹಾಗಾಗಿ ವಾರ್ಮ್ ಅಪ್ ಮಾಡಿಯೇ ಯೋಗ ಶುರು ಮಾಡಿ.
ಎರಡನೇಯ ತಪ್ಪು, ಯೋಗಾಸನ ಮಾಡಿದಾಗ, ರಿವರ್ಸ್ ಯೋಗಾಸನ ಮಾಡಬೇಕು. ನೀವು ಯಾವುದೇ ಆಸನವನ್ನು ಮಾಡಿದಾಗ, ಅದರ ರಿವರ್ಸ್ ಯೋಗ ಮಾಡುವುದನ್‌ನ ಮರಿಯಬೇಡಿ. ಉದಾಹರಣೆಗೆ ನೀವು ಮುಂದೆ ಬಾಗಿ ಆಸನ ಮಾಡಿದರೆ, ನಂತರ ಒಮ್ಮೆಯಾದರೂ ಹಿಂದೆ ಬಾಗಿ ಯೋಗಾಸನ ಮಾಡಿ. ನೀವು ಹಿಂದೆ, ಮುಂದೆ ಬಾಗಿ ಯೋಗಾಸನ ಮಾಡಿದ್ರೆ, ಅಕ್ಕ ಪಕ್ಕ ತಿರುಗಿ ಒಮ್ಮೆ ಯೋಗ ಮಾಡಿ. ಈ ರೀತಿ ರಿವರ್ಸ್ ಯೋಗಾಸನ ಮಾಡಿದಾಗ, ಅದು ನಿಮಗೆ ಜಾಯಿಂಟ್ ಪೇನ್ ಆಗದಂತೆ ತಡೆಯುತ್ತದೆ.
ಮೂರನೇಯ ತಪ್ಪು, ಯೋಗಾ ಕ್ಲಾಸಿಗೆ ಹೋಗದೇ, ಅಥವಾ ಯೋಗ ಗುರುವಿಲ್ಲದೇ ನೀವೇ ಯೋಗ ಕಲಿಯುವುದು. ಈಗ ಯೂಟ್ಯೂಬ್ ನೋಡಿಯೇ ಹಲವರು ಯೋಗ ಮಾಡಲು ಶುರು ಮಾಡುತ್ತಿದ್ದಾರೆ. ಆದ್ರೆ ನೀವು ಯೋಗಾ ಕ್ಲಾಸಿಗೆ ಹೋಗಿ, ಯೋಗ ಗುರುವಿನ ಸಹಾಯದಿಂದ ಯೋಗ ಕಲಿತಾಗಲೇ, ಸರಿಯಾಗಿ ಯೋಗ ಮಾಡಲು ಸಾಧ್ಯವಾಗೋದು. ಹಾಗಾಗಿ ಬೇಕಾದ ಹಾಗೆ ಯೋಗ ಮಾಡುವ ಬದಲು, ಗುರುವಿನ ಸಹಾಯದಿಂದ ಯೋಗ ಮಾಡಿ.ಇಲ್ಲವಾದಲ್ಲಿ, ನಿಮ್ಮ ಆರೋಗ್ಯ ಅಭಿವೃದ್ಧಿಯಾಗುವ ಬದಲು, ಹಾಳಾಗುತ್ತದೆ.
ನಾಲ್ಕನೇಯ ತಪ್ಪು, ನಿಮ್ಮ ಕೈಲಾಗದಿದ್ದರೂ, ಆಸನವನ್ನು ಹಲವು ಹೊತ್ತು ಹಾಗೆ ಇರಿಸುವುದು. ಹೆಚ್ಚೆಂದರೆ 15ರಿಂದ 20 ಸೆಕೆಂಡ್ ಯಾವುದೇ ಆಸನವನ್ನು ನೀವು ಹೋಲ್ಡ್ ಮಾಡಬಹುದು. ಆದ್ರೆ ನಿಮ್ಮಿಂದ ಅದು ಸಾಧ್ಯವಾಗದಿದ್ದರೂ ಹೆಚ್ಚು ಸಮಯ ಆಸನ ಹಿಡಿದಿಟ್ಟುಕೊಂಡರೆ, ಅದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಆಸನವನ್ನು ಹೆಚ್ಚು ಹೊತ್ತು ಹಾಗೆ ಹಿಡಿದಿಟ್ಟುಕೊಳ್ಳಬೇಡಿ.
ಐದನೇಯ ತಪ್ಪು, ನೀವು ಯೋಗ ಮಾಡುವವರಾಗಿದ್ದರೆ, ಟೀ, ಕಾಫಿ ಸೇವನೆ ಬಿಟ್ಟುಬಿಡಿ. ಧೂಮಪಾನ, ಮದ್ಯಪಾನದ ಅಭ್ಯಾಸವಿದ್ದರೆ ಅದನ್ನೂ ಬಿಟ್ಟುಬಿಡಿ. ನೀವು ಟೀ, ಕಾಫಿ ಕುಡಿದು, ಕೂಲ್ ಡ್ರಿಂಕ್ಸ್ ಕುಡಿದು, ಯೋಗ ಮಾಡಿದ್ರೆ, ಆ ಯೋಗದಿಂದ ನಿಮಗೇನು ಪ್ರಯೋಜನವಾಗುವುದಿಲ್ಲ. ಅಲ್ಲದೇ ಹೊಟ್ಟೆ ತುಂಬಿಸಿ, ಯೋಗ ಮಾಡಬೇಡಿ. ನೀವು ಯೋಗಕ್ಕೂ ಮೊದಲು ಕೊಂಚ ಡ್ರೈಫ್ರೂಟ್ಸ್ ತಿನ್ನಬಹುದು. ನೀರು ಕುಡಿಯಬಹುದು. ಆದ್ರೆ ಅದು ಕೂಡ ಲೈಟ್ ಆಗಿಯೇ ಕುಡಿಯಬೇಕು. ಹೊಟ್ಟೆ ತುಂಬುವಷ್ಟು ನೀರು ಕುಡಿಯಬಾರದು.
ಒಂದೇ ವಾರದಲ್ಲಿ ನಿಮ್ಮ ಕೂದಲು ಉದುರುವ ಸಮಸ್ಯೆಯನ್ನ ಹೀಗೆ ಕಡಿಮೆ ಮಾಡಿ..
ನಪುಂಸಕತೆ, ಡಯಾಬಿಟೀಸ್, ಕೂದಲು, ಸೌಂದರ್ಯ ಸಮಸ್ಯೆ ಎಲ್ಲದಕ್ಕೂ ಈ ವಸ್ತುವನ್ನು ಬಳಸಿ.. ಭಾಗ 2