ನಾವು ಮಾಡುವ ಪ್ರತಿಯೊಂದು ಕೆಲಸವೂ ಕೂಡ, ನಮ್ಮ ಆರೋಗ್ಯಕ್ಕೆ ಸಂಬಂಧಪಟ್ಟಿರುತ್ತದೆ. ಬೆಳಿಗ್ಗೆ ಎದ್ದು, ಮನೆಕೆಲಸ ಮಾಡಿ, ತಿಂಡಿ ತಿನ್ನುವುದರಿಂದ ಹಿಡಿದು ರಾತ್ರಿ ಮಲಗುವವರೆಗೂ ಮಾಡುವ ಕೆಲಸಗಲು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರತ್ತೆ. ಹಾಗಾಗಿ ನಾವು ಪ್ರತಿಯೊಂದು ಕೆಲಸವನ್ನು ಅಚ್ಚುಕಟ್ಟಾಗಿ, ಗಮನವಿಟ್ಟು ಮಾಡಬೇಕು. ಅದರಲ್ಲೂ ಬಟ್ಟೆ ಧರಿಸುವ ವಿಷಯದಲ್ಲಿ ಹೆಚ್ಚು ಗಮನ ಕೊಡಬೇಕು. ಯಾಕಂದ್ರೆ ಬಟ್ಟೆ ಧರಿಸುವಾಗ ನಾವು ಮಾಡುವ ತಪ್ಪಿನಿಂದಲೂ, ನಮ್ಮ ಆರೋಗ್ಯ ಹಾಳಾಗತ್ತೆ. ಅದು ಹೇಗೆ ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ತಪ್ಪು ಟೈಟ್ ಆಗಿರುವ ಬಟ್ಟೆ ಧರಿಸುವುದು. ಟೈಟ್ ಆಗಿರುವ ಬಟ್ಟೆ ನಿಮ್ಮ ಫಿಗರನ್ನು ಎದ್ದು ಕಾಣುವಂತೆ ಮಾಡಬಹುದು. ಆದ್ರೆ, ಅದರಿಂದ ಆರೋಗ್ಯ ಹಾಳಾಗತ್ತೆ. ಟೈಟ್ ಟೀ ಶರ್ಟ್ಸ್, ಟೈಟ್ ಜೀನ್ಸ್, ಟೈಟ್ ಅಂಡರ್ ವಿಯರ್ಸ್ ಇವೆಲ್ಲವೂ ನಿಮ್ಮ ದೇಹದಲ್ಲಿ ರಕ್ತ ಸಂಚಾರವನ್ನು ಸ್ಲೋ ಆಗುವಂತೆ ಮಾಡತ್ತೆ. ಇದರಿಂದ ದೇಹದಲ್ಲಿ ಆಕ್ಸಿಜನ್ ಪ್ರಮಾಣ 5ರಿಂದ 6 ಪರ್ಸೆಂಟ್ ಕಡಿಮೆಯಾಗತ್ತೆ. ಹಾಗಾಗಿ ಟೈಟ್ ಆಗಿರುವ ಬಟ್ಟೆ ಧರಿಸಬೇಡಿ.
ಎರಡನೇಯ ತಪ್ಪು ಸಿಂಥೆಟಿಕ್ ಬಟ್ಟೆಗಳನ್ನ ಧರಿಸೋದು. ಯಾಕಂದ್ರೆ ಇದರಲ್ಲಿ ಕೆಮಿಕಲ್ಸ್ ಇರುತ್ತದೆ. ನೀವು ಹೆಚ್ಚು ಹೊತ್ತು ಈ ಬಟ್ಟೆ ಧರಿಸಿದಷ್ಟು, ಆ ಕೆಮಿಕಲ್‌ಗಳು ನಿಮ್ಮ ದೇಹ ಸೇರುತ್ತದೆ. ಹಾಗಾಗಿ ಸಿಂಥೆಟಿಕ್ ಬಟ್ಟೆ ಬದಲು, ಕಾಟನ್ ಬಟ್ಟೆ ಧರಿಸಿ. ಖಾದಿ, ಲೆನಿನ್ ಬಟ್ಟೆ ಧರಿಸಿ. ಇದು ದೇಹಕ್ಕೂ ಹಿತವಾಗಿರತ್ತೆ, ಆರೋಗ್ಯಕ್ಕೂ ಒಳ್ಳೆಯದು.
ಮೂರನೇಯ ತಪ್ಪು ಅಂಡರ್ ವಾಯರ್ ಬ್ರಾ ಧರಿಸೋದು. ಇದು ನೀವು ಚೆಂದಾಗಣಿಸುವಂತೆ ಮಾಡಬಹುದು. ಆದ್ರೆ ಇದರಿಂದ ನಿಮ್ಮ ಸ್ತನಕ್ಕೆ ಪೆಟ್ಟು ಬೀಳುತ್ತದೆ. ಉಸಿರಾಟದ ಸಮಸ್ಯೆ, ಎದೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಇಂಥ ಬ್ರಾಗಳನ್ನು ಧರಿಸಬೇಡಿ.
ನಾಲ್ಕನೇಯ ತಪ್ಪು ಒಂದೇ ಬಟ್ಟೆಯನ್ನ 3ರಿಂದ 4 ಬಾರಿ ಧರಿಸೋದು. ಒಮ್ಮೆ ನೀವು ಒಂದು ಬಟ್ಟೆ ಧರಿಸಿ, ಅದರಲ್ಲೇ ಪೂರ್ತಿ ದಿನವಿದ್ದರೆ, ಆ ಬಟ್ಟೆಯನ್ನ ವಾಶ್ ಮಾಡಿಯೇ ಇನ್ನೊಮ್ಮೆ ಹಾಕಿಕೊಳ್ಳಿ. ಒಂದೆರಡು ಗಂಟೆಯಷ್ಟೇ ಹಾಕಿಕೊಂಡರೆ, ಇನ್ನೊಮ್ಮೆ ಹಾಕಿಕೊಳ್ಳಬಹುದು. ಆದ್ರೆ ಹಾಕಿದ್ದೇ ಬಟ್ಟೆಯನ್ನು ನಾಲ್ಕೈದು ಬಾರಿ ಹಾಕಿಕೊಂಡರೆ, ಚರ್ಮ ಸಮಸ್ಯೆ ಬರುತ್ತದೆ. ಹಾಗಾಗಿ ಬಟ್ಟೆಯನ್ನು ಸರಿಯಾಗಿ ವಾಶ್ ಮಾಡಿಯೇ ಹಾಕಿಕೊಳ್ಳಿ.
ಯಾವುದರಿಂದ ಸ್ನಾನ ಮಾಡಿದ್ರೆ ಉತ್ತಮ..? ಆರೋಗ್ಯಕ್ಕೂ ಸ್ನಾನಕ್ಕೂ ಇದೆ ನಂಟು..