Spiritual Story: ಚಾಣಕ್ಯರು ಜೀವನದಲ್ಲಿ ಯಾವ ರೀತಿ ಇರಬೇಕು..? ಯಾವ ರೀತಿ ಹಣವನ್ನು ಕೂಡಿಡಬೇಕು..? ಯಾವ ರೀತಿ ಜೀವನ ಸಂಗಾತಿಯನ್ನು ಹುಡುಕಬೇಕು..? ಹೀಗೆ ಹಲವು ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾಾರೆ. ಅದೇ ರೀತಿ ನಾವು ಯಾವ ವಿಷಯಗಳನ್ನು ನಿರ್ಲಕ್ಷಸಿದರೆ, ಸಮಸ್ಯೆ ಉದ್ಭವಿಸುತ್ತದೆ ಅನ್ನೋ ಬಗ್ಗೆಯೂ ಚಾಣಕ್ಯರು ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಬುದ್ಧಿವಂತರ ಸಂಗವನ್ನು ಎಂದಿಗೂ ನಿರ್ಲಕ್ಷಿಸಬೇಡಿ. ಜ್ಞಾನಿಗಳು, ಬುದ್ಧಿವಂತರು ಸಿಕ್ಕಾಗ, ಅವರಿಂದ ಎಷ್ಟಾಗುವುದೋ, ಅಷ್ಟು ಜ್ಞಾನ ಪಡೆಯಲು ಪ್ರಯತ್ನಿಸಿ. ಅಂಥವರನ್ನು ಎಂದಿಗೂ ನಿರ್ಲಕ್ಷಿಸಬೇಡಿ. ಜ್ಞಾನಿಗಳ ಜೊತೆ ಇದ್ದಷ್ಟು ನಮ್ಮ ಜ್ಞಾನ ಹೆಚ್ಚಾಗುತ್ತದೆ ಅಂತಾರೆ ಚಾಣಕ್ಯರು.
ಸ್ನೇಹಿತನಲ್ಲಿರುವ ನೀಚ ಬುದ್ಧಿಯನ್ನು ನಿರ್ಲಕ್ಷಿಸಬೇಡಿ. ನೀವು ಸ್ನೇಹ ಮಾಡಿದವರಲ್ಲಿ ನೀಚ ಬುದ್ಧಿ, ಕೆಟ್ಟ ಬುದ್ಧಿ, ಅಥವಾ ಯಾವುದೇ ದುರ್ಗುಣವಿದ್ದಲ್ಲಿ ಅದನ್ನು ಎಂದಿಗೂ ನಿರ್ಲಕ್ಷಿಸಬೇಡಿ. ಅದರಿಂದ ನಿಮಗೂ ಆಪತ್ತು ಬರಬಹುದು. ಹಾಗಾಗಿ ದುರ್ಗುಣವಿರುವ ಸ್ನೇಹಿತನಿಂದ ದೂರಾಾಗುವುದೇ ಉತ್ತಮ ಅಂತಾರೆ ಚಾಣಕ್ಯರು.
ಸಂಬಂಧದಲ್ಲಿ ಬಾಂಧವ್ಯದಲ್ಲಿ ನಿರ್ಲಕ್ಷ ಬೇಡ. ಸಂಬಂಧವನ್ನು ಸರಿಯಾಗಿ ಯಾರು ನಿಭಾಯಿಸುತ್ತಾರೋ, ಅವರು ಜೀವನದಲ್ಲಿ ಸಂತೋಷವಾಗಿ, ನೆಮ್ಮದಿಯಾಗಿ ಇರುತ್ತಾರೆ. ಹಾಗಾಗಿ ಸಂಬಂಧದ ಮೌಲ್ಯವನ್ನು ನಿರ್ಲಕ್ಷಿಸದೇ, ಅದನ್ನನು ಸರಿಯಾಗಿ ನಿಭಾಯಿಸಿಕೊಂಡು ಹೋಗಬೇಕು ಅಂತಾರೆ ಚಾಣಕ್ಯರು.
ಹಣವನ್ನು ನಿರ್ಲಕ್ಷಿಸಬೇಡಿ. ನಾವು ನಮ್ಮ ಬಳಿ ಇರುವ ಹಣವನ್ನು ನಿರ್ಲಕ್ಷಿಸಬಾರದು. ಅಂದ್ರೆ, ಕೆಲವರು ಸಂಬಳ ಬಂದಾಗ, ದುಡ್ಡು ಇದೆ ಎಂದು, ಬೇಕಾಬಿಟ್ಟಿಯಾಗಿ ಖರ್ಚು ಮಾಡುತ್ತಾರೆ. ಕೊನೆಗೆ ಕಷ್ಟಕಾಲ ಬಂದಾಗ, ಅವರ ಬಳಿ ಹಣವಿರುವುದಿಲ್ಲ. ಇದು ಹಣವನ್ನು ನಿರ್ಲಕ್ಷಿಸುವ ರೀತಿ. ಹೀಗೆ ಹಣವನ್ನು ನಿರ್ಲಕ್ಷಿಸಿದಾಗಲೇ, ಮನುಷ್ಯ ಸಾಕಷ್ಡು ಕಷ್ಟ, ಅವಮಾನಗಳನ್ನು ಎದುರಿಸಬೇಕಾಗುತ್ತದೆ.