Spiritual: ಹಲವರು ಜ್ಯೋತಿಷ್ಯ ಸೇರಿ ಕೆಲ ಪದ್ಧತಿಗಳನ್ನು, ನಂಬಿಕೆಗಳನ್ನು ನಂಬುತ್ತಾರೆ. ಆದರೆ ಇನ್ನು ಕೆಲವರು ಕೆಲವು ಪದ್ಧತಿಗಳನ್ನು ಮೂಢನಂಬಿಕೆ ಎನ್ನುತ್ತಾರೆ. ಅದೇ ರೀತಿ ನಾವು ಯಾರಿಗಾದರೂ ಏನಾದ್ರೂ ಗಿಫ್ಟ್ ಕೊಟ್ಟರೆ, ಅದರ ಸೈಡ್ ಎಫೆಕ್ಟ್ ಆ ಸಂಬಂಧದ ಮೇಲಾಗುತ್ತದೆ ಅಂದ್ರೆ, ಹಲವರು ನಂಬಲ್ಲ. ಆದರೆ, ಎಷ್ಟೋ ಕಡೆ ಇಂಥ ಗಿಫ್ಟ್ ಎಕ್ಸ್‌ಚೆಂಜ್ ಮಾಡಿಕೊಂಡು ಮದುವೆ ಮುರಿಯುವುದು, ಲವ್ ಬ್ರೇಕಪ್ ಆಗಿದೆ. ಹಾಗಾಗಿ ನಾವಿಂದು ಯಾವ ಉಡುಗೊರೆ ಕೊಡಬಾರದು..? ಕೊಟ್ಟರೆ ಏನಾಗತ್ತೆ ಅಂತಾ ಹೇಳಲಿದ್ದೇವೆ.
ವಾಚ್: ನಿಮ್ಮ ಜೀವನ ಸಂಗಾತಿಯಾಗುವವರಿಗೆ ಮೊದಲೇ ನೀವು ವಾಚ್ ಕೊಡಲು ಹೋಗಬೇಡಿ. ಮೊದಲ ಗಿಫ್ಟ್ ಬೇರೆಯದ್ದಾಗಿರಲಿ. ಬಟ್ಟೆ ಇದ್ದರೂ ಉತ್ತಮ. ಬಳಿಕ ನೀವು ವಾಚ್ ಗಿಫ್ಟ್ ಮಾಡಬಹುದು. ಆದರೆ ಮೊದಲ ಗಿಫ್ಟ್ ಅಂತಾ ವಾಚ್ ನೀಡಿದರೆ, ಬ್ರೇಕಪ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅದು ಕೈ ಗಡಿಯಾಗಿರಲೂಬಹುದು, ಗೋಡೆ ಗಡಿಯಾರವಾಗಿರಲೂ ಬಹುದು. ಯಾವ ವಾಚ್ ಕೂಡ ಗಿಫ್ಟ್ ಮಾಡಬೇಡಿ.
ಕರ್ಚೀಫ್: ಕರ್ಚೀಫ್ ಗಿಫ್ಟ್ ಮಾಡಿದರೆ, ಸಂಬಂಧ ಹಾಳಾಗುವ ಸಾಧ್ಯತೆ ಇರುತ್ತದೆ. ದೂರವಾಗುವ ಸಾಧ್ಯತೆ ಇರುತ್ತದೆ. ಅಥವಾ ಆ ಸಂಬಂಧದಲ್ಲಿ ಯಾವುದೇ ಇಂಟ್ರೆಸ್ಟ್ ಬರದೇ ಇರುವ ಸಾಧ್ಯತೆ ಇರುತ್ತದೆ. ಹಾಗಾಗಿ ಬಟ್ಟೆ ಗಿಫ್ಟ್ ಮಾಡಿದರೂ, ಕರ್ಚೀಫ್ ಗಿಫ್ಟ್ ಮಾಡಬೇಡಿ.
ಗಾಜಿನ ವಸ್ತು: ಗಾಜಿನ ವಸ್ತುವನ್ನು ಗಿಫ್ಟ್ ಆಗಿ ನೀಡಿದರೆ, ಆ ಸಂಬಂಧ ಮುರಿದು ಹೋಗುವ ಸಾಧ್ಯತೆ ಇರುತ್ತದೆ. ಅಥವಾ ಪದೇ ಪದೇ ನಿಮ್ಮಿಬ್ಬರ ಮಧ್ಯೆ ಜಗಳವಾಗುತ್ತಲೇ ಇರುತ್ತದೆ. ಹಾಗಾಗಿ ಯಾವುದೇ ಗಾಜಿನ ವಸ್ತು, ಗಾಜಿನ ಲೋಟ, ಶೋಪೀಸ್, ಕನ್ನಡಿ ಸೇರಿ ಯಾವುದೇ ಗಾಜಿನ ವಸ್ತು ಗಿಫ್ಟ್ ಆಗಿ ನೀಡಬೇಡಿ.
ದೇವರ ವಿಗ್ರಹ. ದೇವರ ವಿಗ್ರಹವನ್ನು ನಾವು ಜೀವನ ಸಂಗಾತಿಗಷ್ಟೇ ಅಲ್ಲ. ಬೇರೆ ಯಾರಿಗೂ ನೀಡಬಾರದು. ಇದರಿಂದ ನಿಮ್ಮ ಲಕ್ ಎದುರಿನವರಿಗೆ ಹೋಗುತ್ತದೆ. ಅವರ ನಿಮ್ಮ ಸಂಬಂಧ ಹಳಸಿ ಹೋಗುತ್ತದೆ ಅನ್ನೋ ನಂಬಿಕೆ ಇದೆ.
ಪರ್ಫ್ಯೂಮ್. ಮೊದಲ ಗಿಫ್ಟ್ ಆಗಿ ಪರ್ಫ್ಯೂಮ್ ಕೊಡುವುದು ಅಷ್ಟು ಸೂಕ್ತವಲ್ಲ. ಸಂಬಂಧದಲ್ಲಿ ಬಿರುಕು ಮೂಡದಿದ್ದರೂ, ಜೀವನ ಅಷ್ಟು ಸುಖಮಯವಾಗಿರುವುದಿಲ್ಲ. ಜೀವನದಲ್ಲಿ ಬರೀ ಕಷ್ಟಗಳಲ್ಲೇ ಕಾಣುತ್ತೀರಿ. ಹಾಗಾಗಿ ಜೀವನ ಸಂಗಾತಿಗೆ ಮೊದಲ ಗಿಫ್ಟ್ ಆಗಿ, ಸುಗಂಧ ದೃವ್ಯ ಕೊಡಬೇಡಿ.