ಪೈಲ್ಸ್ ಬಗ್ಗೆ ನಿರ್ಲಕ್ಷ್ಯ ಬೇಡ, ಹೀಗೆ ಮುನ್ನೆಚ್ಚರಿಕೆ ವಹಿಸಿ..

Health Tips: ಅನುಭವಿಸಲು ಕಷ್ಟಕರವಾದ, ಆದರೆ ಯಾರ ಬಳಿಯೂ ಹೇಳಿಕೊಳ್ಳಲಾಗದ ಆರೋಗ್ಯ ಸಮಸ್ಯೆ ಅಂದ್ರೆ, ಪೈಲ್ಸ್ ಸಮಸ್ಯೆ. ಇದನ್ನು ಮೂಲವ್ಯಾಧಿ ಎಂದು ಕರೆಯುತ್ತಾರೆ. ಕುಳಿತುಕೊಳ್ಳಲೂ ಆಗದೇ, ನಿಲ್ಲಲೂ ಆಗದೇ, ನರಕಯಾತನೆಪಡಬೇಕಾದ ಪರಿಸ್ಥಿತಿ ತಂದೊಡ್ಡುವ ಅನಾರೋಗ್ಯ ಸಮಸ್ಯೆಯೇ ಪೈಲ್ಸ್. ಇಂದು ನಾವು ಪೈಲ್ಸ್ ಬಂದಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು ಅಂತಾ ತಿಳಿಯೋಣ ಬನ್ನಿ..

ವೈದ್ಯರಾದ ಕಿಶೋರ್ ಹೇಳುವುದೇನೆಂದರೆ, ನಿಮಗೆ ಈ ಸಮಸ್ಯೆ ಬಂದಾಗ, ನೀವು ಇದಕ್ಕೆ ಹೆದರಿ, ಮುಜುಗರಪಟ್ಟುಕೊಳ್ಳುವ ಬದಲು, ವೈದ್ಯರ ಬಳಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯಬೇಕು. ಏಕೆಂದರೆ, ಇದು ಹಾಗೆ ಬಿಟ್ಟಾಗ, ನಿಮ್ಮ ಜೀವಕ್ಕೆ ಕುತ್ತು ತರುವ ಸಾಧ್ಯತೆ ಇರುತ್ತದೆ. ಹಾಗಾಗಿ ಪೈಲ್ಸ್ ಬಂದಾಗ, ಮುಜುಗರ ಪಡದೇ, ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕು.

ನೀವು ಈ ರೀತಿ ನಿರ್ಲಕ್ಷ್ಯ ಮಾಡಿದ್ದಲ್ಲಿ, ದೇಹದಲ್ಲಿರುವ ರಕ್ತವೆಲ್ಲ ಹೋಗಿ, ಅನಿಮಿಯಾ ಬಂದು, ನಿಮ್ಮ ದೇಹದ ಶಕ್ತಿಯೆಲ್ಲ ಹೋಗುತ್ತದೆ. ಬಳಿಕ ಅನೇಕ ಆರೋಗ್ಯ ಸಮಸ್ಯೆಗಳಾಗುತ್ತದೆ. ಹಾಗಾಗಿ ಪೈಲ್ಸ್ ಬಂದಾಗ, ನಿರ್ಲಕ್ಷ್ಯ ಮಾಡದೇ, ಸೂಕ್ತ ಚಿಕಿತ್ಸೆ ತೆಗೆದುಕೊಳ್ಳುವುದು ಉತ್ತಮ.

ಇನ್ನು ಇದಕ್ಕೆ ನೀವು ಮಾಡಬಹುದಾದ ಮನೆಮದ್ದು ಅಂದ್ರೆ, ಸುವರ್ಣಗೆಡ್ಡೆಯ ಸಣ್ಣ ತುಂಡನ್ನು ತುರಿದು, ಒಣಗಿಸಿ, ಪುಡಿ ಮಾಡಿ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಈ ಪುಡಿಯನ್ನು ಒಂದೊಂದು ಚಮಚ ಸೇವಿಸುತ್ತ ಬನ್ನಿ. ಆಗ ಮೂಲವ್ಯಾಧಿ ಗುಣವಾಗುತ್ತದೆ. ಒಂದು ಗ್ಲಾಸ್ ಮಜ್ಜಿಗೆಗೆ ಕರಿಬೇವಿನ ಸೊಪ್ಪು ಮಚ್ಚು ಚಿಕ್ಕ ತುಂಡು ಶುಂಠಿಯನ್ನು ಜಜ್ಜಿ ಮಿಕ್ಸ್ ಮಾಡಿ. ಕೊಂಚ ಉಪ್ಪು ಹಾಕಿ. ಇದನ್ನು ಸೇವಿಸಿದರೆ ಪೈಲ್ಸ್ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ, ಈ ವೀಡಿಯೋ ನೋಡಿ..

ಮಳೆಗಾಲದಲ್ಲಿ ಈ ರೋಗಗಳ ಬಗ್ಗೆ ಎಚ್ಚರವಿರಲಿ..

ಹೋಲ್‌ಸೇಲ್ ಬೆಲೆಗೆ ಉತ್ತಮ ಕ್ವಾಲಿಟಿಯ ಬಟ್ಟೆ ಬೇಕಾಗಿದ್ದಲ್ಲಿ ಈ ಅಂಗಡಿಗೆ ಬನ್ನಿ..

ಮಾವಿನಹಣ್ಣಿನೊಂದಿಗೆ ಈ ಆಹಾರವನ್ನು ಎಂದಿಗೂ ಸೇವಿಸಬೇಡಿ..

About The Author