Spiritual: ಇಂದಿನ ಕಾಲದಲ್ಲಿ ಪುಕ್ಕಟೆಯಾಗಿ ಏನೇ ಸಿಕ್ಕರೂ, ಕೆಲವರು ನಂಗೊಂದು, ನಮ್ಮ ಮನೆಯವ್ರಿಗೆಲ್ಲಾ ಒಂದೊಂದು ಅಂತಾ ತೆಗೆದುಕೊಳ್ಳುತ್ತಾರೆ. ಆದರೆ ಪುಕ್ಕಟೆಯಾಗಿ ಸಿಗುವ ವಸ್ತುಗಳು ನಿಮ್ಮ ಪ್ರಯೋಜನಕ್ಕೆ ಬರಬಹುದು. ಅದರ ಜೊತೆಗೆ ನಿಮಗೆ ದುರಾದೃಷ್ಟವನ್ನೂ ತರಬಹುದು. ಹಾಗಾಗಿ ನಾವಿಂದು ಯಾವ ಯಾವ ವಸ್ತುಗಳನ್ನು ದುಡ್ಡು ಕೊಡದೇ, ತೆಗೆದುಕೊಳ್ಳಬಾರದು ಅಂತಾ ಹೇಳಲಿದ್ದೇವೆ.
ಕಬ್ಬಿಣದ ವಸ್ತು. ಕಬ್ಬಿಣದ ವಸ್ತುವನ್ನು ಶನಿದೇವನಿಗೆ ಹೋಲಿಸಲಾಗುತ್ತದೆ. ಹಾಗಾಗಿ ವಾಹನ ತೆಗೆದುಕೊಂಡಾಗ, ಅದರಿಂದ ಯಾವುದೇ ಹಾನಿಯಾಗಬಾರದು ಅಂದ್ರೆ, ಮೊದಲು ಶನಿ ಪೂಜೆ ಮಾಡಬೇಕು ಎಂದು ಹೇಳಲಾಗುತ್ತದೆ. ಅಲ್ಲದೇ ದಾರಿಯಲ್ಲಿ ಯಾವುದಾದರೂ ಕಬ್ಬಿಣದ ವಸ್ತು ಸಿಕ್ಕಾಗ, ಅದನ್ನು ಮನೆಗೆ ತಂದ್ರೆ ದರಿದ್ರ ಎಂದು ಹೇಳಲಾಗತ್ತೆ. ಏಕೆಂದರೆ, ಕಬ್ಬಿಣವನ್ನು ಪುಕ್ಕಟೆಯಾಗಿ ತರಬಾರದು. ದುಡ್ಡು ಕೊಟ್ಟೇ ಖರೀದಿಸಬೇಕು.
ಎಣ್ಣೆ. ದೇವರ ದೀಪ ಹಚ್ಚಲು ಅಥವಾ ಅಡುಗೆ ಮಾಡಲು ಬಳಸುವ ಎಣ್ಣೆ, ದುಡ್ಡು ಕೊಟ್ಟು ಖರೀದಿಸಬೇಕು. ಇದನ್ನು ಯಾರಿಂದಲೂ ಪುಕ್ಕಟೆಯಾಗಿ ಪಡೆಯಬಾರದು. ಹಾಗೇನಾದರೂ ಪಡೆದರೆ, ಕೊಟ್ಟವರಿಗೆ ಒಳ್ಳೆಯದಾದರೂ, ಅದನ್ನು ತೆಗೆದುಕೊಂಡವರಿಗೆ ಒಳ್ಳೆಯದಾಗುವುದಿಲ್ಲ. ಅಲ್ಲದೇ, ಶನಿಯ ಅವಕೃಪೆಗೆ ಪಾತ್ರರಾಗುತ್ತೀರಿ.
ಪೂಜಾ ಸಾಮಗ್ರಿ. ಪೂಜೆಗೆ ಬಳಸುವ ಯಾವುದೇ ವಸ್ತುಗಳಾಗಲಿ, ದುಡ್ಡು ಕೊಟ್ಟು ಖರೀದಿಸಬೇಕು. ಆಗಲೇ, ನಮ್ಮ ಭಕ್ತಿಗೊಂದು ಬೆಲೆ ಸಿಗುತ್ತದೆ. ಆದರೆ ಪೂಜೆಗೆ ಬಳಸುವ ವಸ್ತುಗಳು ಪುಕ್ಕಟೆಯಾಗಿ ತಂದರೆ, ಪೂಜೆ ಮಾಡಿದ ಪುಣ್ಯವೆಲ್ಲ, ದಾನ ಮಾಡಿದವರ ಪಾಲಾಗುತ್ತದೆ. ಹಾಗಾಗಿ ಇಂಥ ವಸ್ತುಗಳನ್ನು ಫ್ರೀಯಾಗಿ ಎಂದಿಗೂ ತೆಗೆದುಕೊಳ್ಳಬೇಡಿ.