ಕಿಚನ್ ಅನ್ನೋದು ಮಿನಿ ಆಸ್ಪತ್ರೆ ಇದ್ದಂಗೆ, ಮಿನಿ ಬ್ಯೂಟಿ ಪಾರ್ಲರ್ ಇದ್ದಂಗೆ. ಯಾಕಂದ್ರೆ ನಮ್ಮ ಸೌಂದರ್ಯ ಇಮ್ಮಡಿ ಮಾಡೋ, ವಸ್ತುಗಳು ಇಲ್ಲೇ ಸಿಗತ್ತೆ. ನಮ್ಮ ಆರೋಗ್ಯ ಅಭಿವೃದ್ಧಿ ಮಾಡೋ ವಸ್ತುಗಳು ಸಹ ಇಲ್ಲೇ ಸಿಗತ್ತೆ. ಆದ್ರೆ ಕಿಚನ್‌ನಲ್ಲಿ ಇರೋ ಕೆಲ ವಸ್ತುಗಳು, ನಮ್ಮ ಆರೋಗ್ಯವನ್ನ ಹಾಳು ಮಾಡತ್ತೆ. ಅಂಥ ವಸ್ತುಗಳನ್ನ ನಾವು ಹೊರಹಾಕಬೇಕು. ಹಾಗಾದ್ರೆ ಯಾವುದು ಆ ವಸ್ತುಗಳು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ವಸ್ತು ಪ್ರೆಶರ್ ಕುಕ್ಕರ್. ಪ್ರೆಶರ್ ಕುಕ್ಕರ್‌ನಲ್ಲಿ ಆಹಾರ ಹೈ ಟೆಂಪ್ರೇಚರ್‌ನಲ್ಲಿ ತಯಾರಾಗತ್ತೆ. ಆದ್ರೆ ಅದರಲ್ಲಿ ಅಡುಗೆ ಮಾಡಿದ್ರೆ, ಅಡುಗೆ ಬೇಗ ತಯಾರಾಗತ್ತೆ ಅಂತಾ, ಹೆಚ್ಚಿನವರು ಇದರಲ್ಲೇ ಅಡುಗೆ ತಯಾರಿಸುತ್ತಾರೆ. ಸಂಪೂರ್ಣವಾಗಿ ನೀವು ಕುಕ್ಕರ್ ತೆಗೆದು ಹಾಕಲಾಗುವುದಿಲ್ಲ ಎಂದಲ್ಲಿ, ಅದರ ಬಳಕೆ ಕಡಿಮೆ ಮಾಡಿ. ಯಾಕಂದ್ರೆ ಹೆಚ್ಚು ಕುಕ್ಕರ್‌ನಲ್ಲಿ ತಯಾರಿಸಿದ ಅಡುಗೆ ಸೇವನೆ ಮಾಡಿದ್ರೆ, ರೋಗಗಳು ಬರುತ್ತದೆ. ಹೃದಯ ಸಮಸ್ಯೆ, ಗ್ಯಾಸ್ಟಿಕ್ ಸಮಸ್ಯೆ ಬರತ್ತೆ.
ಎರಡನೇಯ ವಸ್ತು ನಾನ್‌ಸ್ಟಿಕ್ ಪ್ಯಾನ್. ಇದರ ಬಳಕೆ ಮಾಡುವುದರಿಂದಲೂ, ನಿಮ್ಮ ಆರೋಗ್ಯ ಹದಗೆಡುವ ಸಾಧ್ಯತೆ ಇರುತ್ತದೆ. ಯಾಕಂದ್ರೆ ಇದರಲ್ಲಿ ಟೆಫ್ಲಾನ್ ಕೋಟಿಂಗ್ ಇರುತ್ತದೆ. ಈ ಕೆಮಿಕಲ್ ಆಹಾರದಲ್ಲಿ ಸೇರಿ, ನಿಮ್ಮ ಆರೋಗ್ಯವನ್ನು ಹಾಳು ಮಾಡತ್ತೆ. ಹಾಗಾಗಿ ನಾನ್‌ಸ್ಟಿಕ್ ಪಾತ್ರೆ ಬದಲು, ಬಳಪದ ಕಲ್ಲಿನ ಪಾತ್ರೆ ಬಳಸಿ.
ಮೂರನೇಯ ವಸ್ತು ಆ್ಯಲ್ಯೂಮಿನಿಯಂ ಪಾತ್ರೆ. ನೀವು ಆ್ಯಲ್ಯೂಮಿನಿಯಂ ಪಾತ್ರೆ ಖರೀದಿಸಿ ತಂದ ದಿನ ಇದರ ತೂಕ ಮಾಡಿ ನೋಡಿ. ಅದನ್ನ ಬಳಸಿದ ಬಳಿಕ, 3 ತಿಂಗಳಾದ ಮೇಲೆ ಮತ್ತೆ ಅದರ ತೂಕ ಮಾಡಿ. ಆಗ ನೀವು ಅದರ ತೂಕದಲ್ಲಿ ವ್ಯತ್ಯಾಸ ಕಾಣಬಹುದು. ತಂದಾಗ ತೂಕ ಹೆಚ್ಚಿರತ್ತೆ. ಬಳಸಿ ಬಳಸಿ ತೂಕ ಕಡಿಮೆಯಾಗತ್ತೆ. ಯಾಕಂದ್ರೆ ಅದರಲ್ಲಿರುವ ಅಂಶವೆಲ್ಲ ನಾವು ಸೇವಿಸುವ ಆಹಾರಕ್ಕೆ ಸೇರಿರತ್ತೆ. ಇದರಿಂದಲೇ ನಮಗೆ ರೋಗಗಳು ಬರೋದು. ಹಾಗಾಗಿ ಆ್ಯಲ್ಯೂಮಿನಿಯಂ ಪಾತ್ರೆ ಬಳಸಬೇಡಿ. ಅದರ ಬದಲು ಮಣ್ಣಿನ ಪಾತ್ರೆ ಬಳಸುವುದು ಸೂಕ್ತ.