Health Tips: ಇಂದಿನ ಕಾಲದಲ್ಲಿ ಹಲವರ ಜೀವನ ಶೈಲಿ ಸರಿಯಾದ ಕ್ರಮದಲ್ಲಿಲ್ಲ. ಲೇಟಾಗಿ ಏಳುವುದು. ತಿಂಡಿ ಸ್ಕಿಪ್ ಮಾಡಿ, ಡೈರೆಕ್ಟ್ ಊಟ ಮಾಡುವುದು. ಹೆಚ್ಚು ಜಂಕ್ ಫುಡ್ ತಿನ್ನುವ ಅಭ್ಯಾಸ ಮಾಡಿಕೊಂಡವರೇ ಹೆಚ್ಚು. ಇನ್ನು ಸಂಜೆ ಹೊತ್ತಿಗೆ ಏನಾದ್ರೂ ಸ್ನ್ಯಾಕ್ಸ್ ತಿಂದು ಹೊಟ್ಟೆ ತುಂಬಿಸಿಕೊಂಡರೆ, ರಾತ್ರಿ ಊಟ ಸ್ಕಿಪ್. ಮತ್ತೆ ಮರುದಿನ ಮಧ್ಯಾಹ್ನವೇ ಊಟ. ಇಂಥ ಆಹಾರ ಪದ್ಧತಿಯಿಂದಾಗಿ, ಬೊಜ್ಜು ಹೆಚ್ಚಾಗುತ್ತಿದೆ. ಹಾಗಾಗಿ ನಾವಿಂದು ಬೊಜ್ಜು ಕರಗಿಸಲು, ಒಂದು ಅತ್ಯುತ್ತಮ ಮದ್ದನ್ನು ಹೇಳಲಿದ್ದೇವೆ. ನೀವು ಈ ಪೇಯವನ್ನು ಸರಿಯಾದ ರೀತಿಯಲ್ಲಿ ತಯಾರಿಸಿ ಸೇವಿಸಿದರೆ, ನಿಮ್ಮ ದೇಹದ ತೂಕ ಇಳಿಯುತ್ತದೆ.
ಇಂದಿನ ಕಾಲದಲ್ಲಿ ಹಲವಾರು ಜನ ತೂಕ ಇಳಿಸಲು, ಹಲವು ಕಸರತ್ತು ಮಾಡುತ್ತಾರೆ. ಕೆಲವು ದಿನ ಜಿಮ್ ಸೇರುತ್ತಾರೆ. ಕೆಲವು ದಿನ ಡಯಟ್ ಮಾಡುತ್ತಾರೆ. ಇದ್ಯಾವುದೂ ಸರಿ ಹೊಂದದಿದ್ದಾಗ, ತೂಕ ಇಳಿಸುವ ಮಾತ್ರೆ, ಚಿಕಿತ್ಸೆ ಹೀಗೆ ಹಲವು ದಾರಿಗಳನ್ನು ಹುಡುಕುತ್ತಾರೆ. ಆದರೆ ನಿಮಗೆ ತೂಕ ಇಳಿಸಬೇಕು ಎಂದಲ್ಲಿ, ಇಂದು ನಾವು ಹೇಳುವ ಪೇಯವನ್ನು ಮಾಡಿ ಸೇವಿಸಿದರೆ, ಸಾಕು. ಆದಷ್ಟು ಬೇಗ ನಿಮ್ಮ ದೇಹದ ತೂಕ ಇಳಿಯುತ್ತದೆ.
ಆಯುರ್ವೇದದ ಪ್ರಕಾರ, ಮಲಬದ್ಧತೆ ಸಮಸ್ಯೆ ಮತ್ತು ಅಜೀರ್ಣದ ಸಮಸ್ಯೆಯಿಂದ ದೇಹದ ತೂಕ ಹೆಚ್ಚುತ್ತದೆ. ಅದರಲ್ಲೂ ಹೊಟ್ಟೆಯ ಬೊಜ್ಜು ಹೆಚ್ಚಿನ ಜನರ ಸಮಸ್ಯೆಯಾಗಿದೆ. ಇಂಥವರು ನಿಂಬೆಹಣ್ಣಿನ ರಸದಲ್ಲಿ ಸ್ವಲ್ಪ ಸೋಡಾ ಮತ್ತು ಸೈಂಧವ ಲವಣವನ್ನು ಬೆರೆಸಿ, ಹೊಟ್ಟೆಗೆ ಮಸಾಜ್ ಮಾಡಿಕೊಂಡರೆ, ಹೊಟ್ಟೆಯ ಬೊಜ್ಜು ಕರಗುತ್ತದೆ.
ಇನ್ನು ರಾತ್ರಿ ಮಲಗುವಾಗ ಒಂದು ಕಶಾಯವನ್ನು ಮಾಡಿ ಸೇವಿಸಬೇಕು. ಕಾಳುಮೆಣಸು, ಒಣಶುಂಠಿ, ವೋಮಕಾಳು, ಜೀರಿಗೆ, ಒಣಗಿದ ತುಳಸಿ ಎಲೆ, ಇವೆಲ್ಲವೂ 100 ಗ್ರಾಂ ತೆಗೆದುಕೊಳ್ಳಿ. ಇವೆಲ್ಲವನ್ನೂ ಸೇರಿಸಿ, ಪುಡಿ ಮಾಡಿ. ಈಗ ಒಂದು ಸ್ಪೂನ್ ಈ ಪುಡಿಯನ್ನು 1 ಲೀಟರ್ ನೀರಿನೊಂದಿಗೆ ಸೇರಿಸಿ, ಚೆನ್ನಾಗಿ ಕುದಿಸಿ, ಆ ನೀರು 100 ಎಮ್‌ಎಲ್ ಆಗುವವರೆಗೂ ಕುದಿಸಬೇಕು. ಈಗ ಕಶಾಯ ರೆಡಿ. ಇದನ್ನು ಸೋಸಿ, ರಾತ್ರಿ ಮಲಗುವ ಮುನ್ನ ಕುಡಿಯಬೇಕು.
ಇನ್ನು 10 ದಿನಗಳವರೆಗೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೂದುಗುಂಬಳಕಾಯಿ ಜ್ಯೂಸ್ ಕುಡಿಯಬೇಕು. ಇನ್ನು 10 ದಿನ ನೆಲ್ಲಿಕಾಯಿ ಜ್ಯೂಸ್, ಮತ್ತೊಂದು 10 ದಿನ ಸೋರೆಕಾಯಿ ಜ್ಯೂಸ್ ಕುಡಿಯಬೇಕು. ಹೀಗೆ ಜ್ಯೂಸ್ ಕುಡಿದಾಗ, ದೇಹದ ತೂಕ ಕಡಿಮೆಯಾಗುತ್ತದೆ. ಅಲ್ಲದೇ, ಜಂಕ್ ಫುಡ್ ಸೇವನೆ ಪೂರ್ತಿಯಾಗಿ ತ್ಯಜಿಸಬೇಕು. ತರಕಾರಿ, ಹಣ್ಣು, ಹಸಿರು ಸೊಪ್ಪು, ಮೊಳಕೆ ಕಾಳುಗಳ ಸೇವನೆ ಮಾಡಬೇಕು.
ಇನ್ನು ಇದನ್ನು ಬಿಟ್ಟು, ಪ್ರತಿದಿನ ಬೆಳಿಗ್ಗೆ 1 ಗಂಟೆ, ಸಂಜೆ ಒಂದು ಗಂಟೆ ವಾಕಿಂಗ್ ಮಾಡಬೇಕು. ವ್ಯಾಯಾಮ ಮಾಡಬೇಕು. ಹಗಲು ಹೊತ್ತಿನಲ್ಲಿ ನಿದ್ರಿಸಬಾರದು. ರಾತ್ರಿ ಬೇಗ ಮಲಗಿ, ಬೆಳಿಗ್ಗೆ ಬೇಗ ಏಳಬೇಕು. ಇಂಥ ನಿಯಮಗಳನ್ನು ಪಾಲಿಸಿದಾಗ ಮಾತ್ರ, ದೇಹದ ತೂಕ ಬೇಗ, ಆರೋಗ್ಯಕಾರಿಯಾಗಿ ಕಡಿಮೆಯಾಗುತ್ತದೆ.
ಉಗುರುಗಳ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು..? ವೈದ್ಯರೇ ಮಾಹಿತಿ ನೀಡಿದ್ದಾರೆ ನೋಡಿ..
ರಿಸ್ಕ್ ಪ್ರೆಗ್ನೆನ್ಸಿ ಅಂದ್ರೇನು..? ಗರ್ಭ ಧರಿಸಲು ಸರಿಯಾದ ವಯಸ್ಸೆಷ್ಟು..?