ಊಟವೆನ್ನೋದು ಆರೋಗ್ಯಕ್ಕೆ ಎಷ್ಟು ಮುಖ್ಯವೋ, ನಿದ್ದೆಯೂ ಅಷ್ಟೆ ಮುಖ್ಯ. ಒಳ್ಳೆಯ ಊಟ ಮಾಡಿ, ಚೆನ್ನಾಗಿ ನಿದ್ರೆ ಮಾಡಿದ್ರೆ, ನೀವು ಆರೋಗ್ಯವಂತರಾಗಿರ್ತೀರಿ. ಆದ್ರೆ ಕೆಲವರಿಗೆ ರಾತ್ರ ನಿದ್ರೆಯೇ ಬರೋದಿಲ್ಲಾ. ಪದೇ ಪದೇ ಎಚ್ಚರವಾಗುತ್ತದೆ. ಹಾಗಾಗಿ ನಾವಿಂದು ರಾತ್ರಿ ಗಾಢವಾದ ನಿದ್ರೆ ಬರಲು ಏನು ಕುಡಿಯಬೇಕು ಅಂತಾ ಹೇಳಲಿದ್ದೇವೆ..
ರಾತ್ರಿ ಗಾಢ ನಿದ್ದೆ ಮಾಡಲು ನಾವು ಹಾಲು ಕುಡಿಯಬೇಕು. ಆ ಹಾಲು ಬಿಸಿ ಬಿಸಿಯಾಗಿರಬೇಕು. ಅದಕ್ಕೆ ಅರ್ಧ ಸ್ಪೂನ್ ಅಶ್ವಗಂಧಾ ಪುಡಿ, ಕಾಲು ಸ್ಪೂನ್ ಏಲಕ್ಕಿ ಪುಡಿ. ಕಾಲು ಸ್ಪೂನ್ ಚಕ್ಕೆ ಪುಡಿ, ಇವಿಷ್ಟನ್ನ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯಿರಿ. ನಿಮಗೆ ಬೇಕಾದಲ್ಲಿ ಇದಕ್ಕೆ ಕೆಂಪು ಕಲ್ಲುಸಕ್ಕರೆ ಬಳಸಬಹುದು.
ಎರಡನೇಯದಾಗಿ ಗೋಲ್ಡನ್ ಮಿಲ್ಕ್. ಹಾಲು ಕಾಯಿಸಿ, ಅದಕ್ಕೆ ಕೊಂಚ ಅರಿಶಿನ, ಕೊಂಚ ಕೇಸರಿ ಮತ್ತು ಕೊಂಚ ಜಾಯಿಕಾಯಿ ಪುಡಿ ಹಾಕಿ ಮಿಕ್ಸ್ ಮಾಡಿ. ಬೇಕಾದ್ರೆ ಕೆಂಪು ಕಲ್ಲು ಸಕ್ಕರೆ ಹಾಕಿ, ಮಿಕ್ಸ್ ಮಾಡಿದ್ರೆ, ಗೋಲ್ಡನ್ ಮಿಲ್ಕ್ ರೆಡಿ.
ಮೂರನೇಯ ಹಾಲು ಯಷ್ಠಿಮಧು ಹಾಲು. ಇದನ್ನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು. ತಣ್ಣಗಿನ ಹಾಲಿಗೆ, ಒಂದು ಸ್ಪೂನ್ ಯಷ್ಠಿಮಧು ಪುಡಿ ಹಾಕಿ, ಮಿಕ್ಸ್ ಮಾಡಿ ಕುಡಿಯಬೇಕು. ಈ ಮೂರು ಹಾಲುಗಳು ನಿಮ್ಮ ದೇಹದಲ್ಲಿನ ರಕ್ತ ಸಂಚಾರವನ್ನು ಸರಿ ಮಾಡಿ, ನಿಮಗೆ ಉತ್ತಮವಾದ ನಿದ್ದೆ ಬರಲು ಸಹಕಾರಿಯಾಗಿದೆ.