Saturday, April 20, 2024

Latest Posts

ಸೌಂದರ್ಯ ಹೆಚ್ಚಾಗಲು ಈ ನಿಯಮ ಅನುಸರಿಸುತ್ತ ನೀರು ಕುಡಿಯಿರಿ..

- Advertisement -

ಸೌಂದರ್ಯ, ಆರೋಗ್ಯ ಎರಡೂ ಬೇಕಂದ್ರೆ, ನಾವು ಸಾಧ್ಯವಾದಷ್ಟು ನೀರು ಕುಡಿಯಬೇಕು ಅನ್ನೋದು ನಿಮಗೂ ಗೊತ್ತು. ಆದರೆ ಹಾಗೆ ಕುಡಿದ ನೀರು ಸರಿಯಾಗಿ ಜೀರ್ಣವಾಗಬೇಕು. ಆವಾಗಷ್ಟೇ ನಾವು ಎಷ್ಟು ಬೇಕೋ ಅಷ್ಟು ನೀರು ಕುಡಿಯಬಹುದು. ಕುಡಿದ ನೀರು ಸರಿಯಾಗಿ ಜೀರ್ಣವಾಗದಿದ್ದಲ್ಲಿ, ಹೊಟ್ಟೆ ಉಬ್ಬಿ, ಉಸಿರಾಟಕ್ಕೆ ತೊಂದರೆಯಾಗುತ್ತದೆ. ಹಾಗಾಗದೆ, ನೀರು ಕುಡಿದ ಬಳಿಕ, ಸರಿಯಾಗಿ ಮೂತ್ರ ವಿಸರ್ಜನೆಯಾಗುತ್ತಿದೆ ಎಂದಾದಲ್ಲಿ, ನಿಮಗೆ ಕುಡಿದ ನೀರು ಜೀರ್ಣಿಸಿಕೊಳ್ಳುವ ಶಕ್ತಿ ಇದೆ ಎಂದರ್ಥ. ಇಂದು ನಾವು ಸೌಂದರ್ಯ ಹೆಚ್ಚಾಗಲು ಯಾವ ನಿಯಮ ಅನುಸರಿಸುತ್ತ, ನೀರು ಕುಡಿಯಬೇಕು ಅಂತಾ ತಿಳಿಯೋಣ ಬನ್ನಿ..

ರಾತ್ರಿ ತಾಮ್ರದ ತಂಬಿಗೆ, ಮಣ್ಣಿನ ಮಡಿಕೆ ಅಥವಾ ಬೆಳ್ಳಿ ತಂಬಿಗೆಯಲ್ಲಿ ನೀರು ಸಂಗ್ರಹಿಸಿಡಬೇಕು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ, ಬಾಯಿ ಮುಕ್ಕಳಿಸದೇ, ಈ ನೀರಿನ ಸೇವನೆ ಮಾಡಬೇಕು. ಇದರಿಂದ ನಿಮ್ಮ ಸೌಂದರ್ಯವೂ ಅಭಿವೃದ್ಧಿಯಾಗುತ್ತದೆ. ಆರೋಗ್ಯವೂ ಸುಧಾರಿಸುತ್ತದೆ.

ನೀರನ್ನು ಕುಡಿಯಬಾರದು. ಬದಲಾಗಿ ತಿನ್ನಬೇಕು. ಇದು ಕೇಳಲು ವಿಚಿತ್ರವೆನ್ನಿಸಿದರೂ, ನಿಜವಾಗಿದೆ. ನೀರು ಗಟಗಟನೆ ಕುಡಿಯಬಾರದು. ಬದಲಾಗಿ ಕೊಂಚ ಕೊಂಚ ನೀರು ಬಾಯಿಗೆ ಹಾಕಿ, ಇಡೀ ಬಾಯಾಡಿಸಿ, ಬಳಿಕ ಕುಡಿಯಬೇಕು. ಈ ರೀತಿ ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ನೀರು ಕುಡಿಯುವಾಗ ಕುಳಿತುಕೊಂಡೇ ನೀರು ಕುಡಿಯಿರಿ. ದಿನದಲ್ಲಿ ಒಮ್ಮೆ ನಿಂತು ನೀರು ಕುಡಿದರೆ, ಏನು ತೊಂದರೆ ಇಲ್ಲ. ಆದರೆ ನೀವು ಯಾವಾಗಲೂ ನಿಂತುಕೊಂಡೇ ನೀರು ಕುಡಿದರೆ, ನಿಮಗೆ ಕೈ ಕಾಲು ನೋವು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಆದಷ್ಟು ಕುಳಿತುಕೊಂಡೇ ನೀರು ಕುಡಿಯಿರಿ.

ನೀವು ಕುಡಿಯುವ ನೀರು ಶುದ್ಧವಾಗಿರಲಿ. ಹೆಚ್ಚು ಬಿಸಿಯೂ ಅಲ್ಲದ, ಫ್ರಿಜ್‌ನಲ್ಲಿರಿಸಿದ ನೀರೂ ಅಲ್ಲದ, ರೂಮ್ ಟೆಂಪ್ರೆಚರ್‌ನಲ್ಲಿರುವ ನೀರು ಕುಡಿಯುವು ಅತೀ ಉತ್ತಮ. ದಿನಕ್ಕೆ 3 ಲೀಟರ್ ನೀರು ಕುಡಿಯಿರಿ. ಫ್ರಿಜ್‌ ನೀರು ಕುಡಿಯುವ ಅಭ್ಯಾಸವಿದ್ದಲ್ಲಿ, ಸಂಪೂರ್ಣವಾಗಿ ಅದನ್ನು ಬಿಟ್ಟುಬಿಡಿ. ಇಲ್ಲವಾದಲ್ಲಿ, ಅದೇ ನಿಮ್ಮ ಆರೋಗ್ಯಕ್ಕೆ ಕುತ್ತು ತರುತ್ತದೆ.

ನಿಮ್ಮ ಕೂದಲನ್ನು ಈ ರೀತಿ ಕಪ್ಪಾಗಿಸಬಹುದು ನೋಡಿ..

ಉಲ್ಟಾ ವಡಾ ಪಾವ್ ರೆಸಿಪಿ..

ಹಲಸಿನಕಾಯಿ ಗ್ರೇವಿ ರೆಸಿಪಿ

- Advertisement -

Latest Posts

Don't Miss