Health Tips: ನಾವು ಕೂದಲಿಗೆ ಸಂಬಂಧಿಸಿದಂತೆ ಈಗಾಗಲೇ ಉತ್ತಮ ಗುಣಮಟ್ಟದ ಟಿಪ್ಸ್ ಕೊಟ್ಟಿದ್ದೇವೆ. ಇಂದು ನಾವು ಕೂದಲು ಅಂದವಾಗಿರಬೇಕು, ದಟ್ಟವಾಗಿರಬೇಕು ಎಂದಲ್ಲಿ ಎಂಥ ಆಹಾರಗಳನ್ನು ಸೇವಿಸಬೇಕು ಎಂದು ಹೇಳಲಿದ್ದೇವೆ.
ನಿಮ್ಮ ಕೂದಲು ಸುಂದರವಾಗಿ ಬೆಳೆಯಬೇಕು ಎಂದರೆ, ನೀವು ಬರೀ ಶ್ಯಾಂಪೂ, ಎಣ್ಣೆ ಹಾಕುವುದಷ್ಟೇ ಅಲ್ಲ, ಆರೋಗ್ಯಕರವಾದ ಆಹಾರಗಳನ್ನೂ ಸೇವಿಸಬೇಕು. ದೇಹಕ್ಕೆ ಉತ್ತಮ ಪೋಷಕಾಂಶ ಸಿಕ್ಕರೆ, ನಮ್ಮ ತ್ವಚೆ ಸುಂದರವಾಗಿರುತ್ತದೆ. ಉಗುರು, ಕೂದಲು ಸುಂದರವಾಗಿ ಬೆಳೆಯುತ್ತದೆ. ನಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ.
ಹಾಗಾಗಿ ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಬೆಚ್ಚನೆಯ ನೀರನ್ನು ಕುಡಿಯಬೇಕು. ಬಳಿಕ ನೆನೆಸಿಟ್ಟ ಬಾದಾಮಿ, ಅಖ್ರೋಟ್, ಅಂಜೂರ, ಮೊಳಕೆ ಬರಿಸಿದ ಹೆಸರು ಕಾಳನ್ನು ತಿನ್ನಬೇಕು. ಇದರ ಸೇವನೆಯಿಂದ ನಿಮ್ಮ ಕೂದಲಿನ ಆರೋಗ್ಯ ಉತ್ತಮವಾಗುತ್ತದೆ. ಬುಡದಿಂದಲೇ ಕೂದಲು ಗಟ್ಟಿಮುಟ್ಟಾಗುತ್ತದೆ. ಕೂದಲು ಉದುರುವುದು ಕಡಿಮೆಯಾಗುತ್ತದೆ.
ಇದರೊಂದಿಗೆ ವಿಟಾಮಿನ್ ಸಿ ಇರುವ ಆಹಾರಗಳನ್ನು ಸಹ ಸೇವಿಸಬೇಕು. ಕಿತ್ತಳೆ, ಪೇರಳೆ, ನೆಲ್ಲಿಕಾಯಿಯಂಥ ಆಹಾರವನ್ನು ಸೇವಿಸಬೇಕು. ದಿನಕ್ಕೊಂದು ಹಣ್ಣುಗಳನ್ನು ಸೇವಿಸಿದರೂ ಉತ್ತಮ. ಇದರಿಂದ ನಿಮ್ಮ ಕೂದಲು ಸಧೃಡವಾಗುತ್ತದೆ. ಜೊತೆಗೆ ಮೊಸರು, ತುಪ್ಪ, ಹಾಲಿನ ಸೇವನೆ ಬಹಳ ಮುಖ್ಯ. ಪ್ರತಿದಿನ ರಾತ್ರಿ ಮಲಗುವಾಗ ಒಂದು ಗ್ಲಾಸ್ ಬೆಚ್ಚನೆಯ ಹಾಲು ಕುಡಿದು ಮಲಗಿ.
ಇದರೊಂದಿಗೆ ಕಬ್ಬಿಣಾಂಶ ಹೆಚ್ಚಿರುವ ಆಹಾರಗಳ ಸೇವನೆ ಮುಖ್ಯವಾಗಿದೆ. ಇಂಥ ಆಹಾರ ಸೇವನೆಯಿಂದ ಕೂದಲು ಬಿಳಿಯಾಗುವುದು, ಉದುರುವ ಸಮಸ್ಯೆ ಬರುವುದಿಲ್ಲ. ಶೇಂಗಾ ಚಿಕ್ಕಿ, ಪಾಲಕ್ ಸೊಪ್ಪು, ಒಣದ್ರಾಕ್ಷಿ ಇವೆಲ್ಲವೂ ಕಬ್ಬಿಣಾಂಶ ಹೆಚ್ಚಿರುವ ಆಹಾರವಾಗಿದೆ. ವಾರಕ್ಕೊಮ್ಮೆಯಾದರೂ ಪಾಲಕ್ ಸೇವನೆ ಮಾಡುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚುತ್ತದೆ.
ಇದರೊಂದಿಗೆ ಸ್ವಚ್ಛವಾದ ಹಾಸಿಗೆ, ದಿಂಬು, ಟವಲ್ ಬಳಕೆ ಮಾಡಿ. ಚೆನ್ನಾಗಿ ನೀರು ಕುಡಿಯಿರಿ. ಕೆಮಿಕಲ್ ಇಲ್ಲದ ಶ್ಯಾಂಪೂ, ಎಣ್ಣೆ ಬಳಕೆ ಮಾಡಿ. ಹೆಚ್ಚು ಚಿಂತೆ ಮಾಡಿದರೆ, ಕೂದಲು ಉದುರುತ್ತದೆ. ಹಾಗಾಗಿ ಸದಾ ಲವಲವಿಕೆಯಿಂದ ಇರಿ.
ನಿಮ್ಮ Skin Dry ಆಗಿದ್ಯಾ? ಮುಖದಲ್ಲಿ Pimples ಹೆಚ್ಚಾಗಿದ್ರೆ ಏನ್ ಮಾಡ್ಬೇಕು.?