Health Tips: ಹಳೆಯ ಕಾಲದಲ್ಲಿ ಮನೆಯಲ್ಲೇ ರುಚಿ ರುಚಿಯಾದ ಸ್ನ್ಯಾಕ್ಸ್ ಮಾಡುತ್ತಿದ್ದರು. ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು, ಲಾಡು ಹೀಗೆ ತಿಂಡಿಗಳನ್ನು ಮಾಡಿ, ಡಬ್ಬಿ ತುಂಬಿಸಿ ಇಡುತ್ತಿದ್ದರು. ಅದನ್ನು ತಿಂದ ಮನೆಮಂದಿಗೆ ಯಾವ ಆರೋಗ್ಯ ಸಮಸ್ಯೆಯೂ ಬರುತ್ತಿರಲಿಲ್ಲ. ಆದರೆ ಇಂದಿನ ಕಾಲದಲ್ಲಿ ಮಕ್ಕಳಿಗೆ ಮನೆ ತಿಂಡಿಗಿಂತ ಮಾರುಕಟ್ಟೆಯಲ್ಲಿ ಸಿಗುವ ತಿಂಡಿಯೇ ಹೆಚ್ಚು ರುಚಿ. ಕೆಮಿಕಲ್, ಪ್ರಿಸರ್ವೇಟಿವ್ಸ್ ಬೆರೆಸಿ ಮಾಡಿದ ಜಂಕ್ ಫುಡ್ ಆರೋಗ್ಯಕ್ಕೆಷ್ಟು ಮಾರಕ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಸರ್ವೆಯ ಪ್ರಕಾರ, ಪ್ರಪಂಚದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗುತ್ತಿದೆ. ಇದಕ್ಕೆ ಕಾರಣ ಇಂದಿನ ಜನರ ಆಹಾರ ಪದ್ಧತಿ, ಜೀವಿಸುವ ರೀತಿ. ಅಶುದ್ಧ ವಾತಾವರಣ, ಜಂಕ್ ಫುಡ್ ಸೇವನೆ. ಹಲವು ದಿನಗಳವರೆಗೆ ಫ್ರಿಜ್‌ನಲ್ಲಿರಿಸಿ, ಸೇವಿಸುವ ಆಹಾರಗಳು, ಕೂಲ್ ಡ್ರಿಂಕ್ಸ್, ಸೇರಿ ಅನಾರೋಗ್ಯಕರ ಆಹಾರಗಳ ಸೇವನೆಯಿಂದ ಕ್ಯಾನ್ಸರ್ ಬರುತ್ತಿದೆ.
ಇನ್ನು ನಿಮಗೆ ಕ್ಯಾನ್ಸರ್ ಬರಬಾರದು ಅಂದ್ರೆ ನೀವು ಆರೋಗ್ಯಕರ ಜೀವನ ಶೈಲಿಯಲ್ಲಿ ಜೀವಿಸಬೇಕು. ಫ್ರೆಶ್ ಆಗಿರುವ, ಸ್ವಚ್ಛ ಮಾಡಿರುವ ಹಣ್ಣು, ತರಕಾರಿಯನ್ನು ಸೇವಿಸಬೇಕು. ಜಂಕ್ ಫುಡ್ ಸೇವನೆ ಕಡಿಮೆ ಮಾಡಬೇಕು. ಅದನ್ನು ತ್ಯಜಿಸಿದರೆ ಇನ್ನೂ ಉತ್ತಮ. ಇನ್ನು ಕೂಲ್ ಡ್ರಿಂಕ್ಸ್‌ನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ. ಇದರಿಂದ ಬರೀ ಕ್ಯಾನ್ಸರ್ ಮಾತ್ರವಲ್ಲದೇ, ಕಿಡ್ನಿ ಫೇಲ್ ಆಗುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..
ಇಂಥ ಬಟ್ಟೆಗಳನ್ನು ಎಂದಿಗೂ ಧರಿಸಬೇಡಿ: ಧರಿಸಿದರೆ ನೆಮ್ಮದಿ ಹಾಳಾಗುವುದು ನಿಶ್ಚಿತ