ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಒಣದ್ರಾಕ್ಷಿ ತಿಂದರೆ ಆರೋಗ್ಯಕ್ಕಾಗುತ್ತದೆ ಚಮತ್ಕಾರಿ ಲಾಭ

Health Tips: ಒಣದ್ರಾಕ್ಷಿ ತಿನ್ನಲು ಎಷ್ಟು ರುಚಿಯೋ, ಆರೋಗ್ಯಕ್ಕೂ ಅಷ್ಟೇ ಉತ್ತಮವಾದ ಒಣಹಣ್ಣು. ನಾವು ಈಗಾಗಲೇ ನಿಮಗೆ ಡ್ರೈಫ್ರೂಟ್ಸ್ ತಿನ್ನುವಾಗ, ಅದನ್ನು ನೀರಿನಲ್ಲಿ ನೆನೆಸಿಟ್ಟು ತಿಂದರೆ ಒಳ್ಳೆಯದು ಅಂತಾ ಹೇಳಿದ್ದೇವೆ. ಅದೇ ರೀತಿ ಒಣದ್ರಾಕ್ಷಿಯನ್ನು ಕೂಡ ರಾತ್ರಿ ನೀರಿನಲ್ಲಿ ನೆನೆಸಿಟ್ಟು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು. ಇದು ಆರೋಗ್ಯಕ್ಕೆ ಉತ್ತಮ. ಹಾಗಾದರೆ ಇದರಿಂದಾಗುವ ಆರೋಗ್ಯ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..

10 ಒಣದ್ರಾಕ್ಷಿಯನ್ನು ತೊಳೆದು ನೀರಿನಲ್ಲಿ ನೆನೆಸಿಡಿ. ಮರುದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಆ ದ್ರಾಕ್ಷಿ ತಿಂದು ಆ ನೆನೆಸಿದ ನೀರನ್ನು ಕುಡಿಯಿರಿ. ಇದು ನಿಮ್ಮ ಆರೋಗ್ಯವನ್ನು ಅಭಿವೃದ್ಧಿಪಡಿಸುವಲ್ಲಿ ಸಹಕಾರಿಯಾಗಿದೆ. ಅಲ್ಲದೇ, ಆರೋಗ್ಯಕಾರಿಯಾಗಿ ನಿಮ್ಮ ತೂಕ ಹೆಚ್ಚಬೇಕು ಅಂದ್ರೆ, ನೀವು ಈ ರೀತಿಯಾಗಿ ನೆನೆಸಿದ ದ್ರಾಕ್ಷಿ ಸೇವನೆ ಮಾಡಬೇಕು. ಹಾಗಾಗಿ ಚಿಕ್ಕ ಮಕ್ಕಳಿಗೆ ನೆನೆಸಿದ ದ್ರಾಕ್ಷಿ ತಿನ್ನಲು ಕೊಡುತ್ತಾರೆ. ಇದು ಆರೋಗ್ಯಕರವಾಗಿ ದೇಹದ ತೂಕವನ್ನು ಹೆಚ್ಚಿಸುತ್ತದೆ.

ಇನ್ನು ಹೈ ಬಿಪಿ ಇದ್ದವರು, ನೆನೆಸಿದ ದ್ರಾಕ್ಷಿ ತಿಂದು ಅದರ ನೀರು ಕುಡಿದರೆ, ಅದು ಹೈ ಬಿಪಿಯನ್ನು ಕಂಟ್ರೋಲಿನಲ್ಲಿಡುತ್ತದೆ. ಇಷ್ಟೇ ಅಲ್ಲದೇ, ನಿಮಗೆ ಸರಿಯಾಗಿ ಶಕ್ತಿ ಇಲ್ಲ. ಸ್ವಲ್ಪ ನಡೆದಾಡಿದರೂ, ಸ್ವಲ್ಪ ಕೆಲಸ ಮಾಡಿದರೂ ಸುಸ್ತಾಗುತ್ತದೆ ಎಂದಾದಲ್ಲಿ ನೀವು ಈ ರೀತಿಯಾಗಿ ನೆನೆಸಿದ ದ್ರಾಕ್ಷಿ ತಿನ್ನಿ. ಇದು ನಿಮ್ಮ ದೇಹದ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

ಬೆಳಿಗ್ಗೆ ನೆನೆಸಿಟ್ಟ ದ್ರಾಕ್ಷಿ ತಿನ್ನುವುದರಿಂದ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚುತ್ತದೆ. ಎನಿಮಿಯಾದಿಂದ ಬಳಲುತ್ತಿರುವವರು, ನೆನೆಸಿಟ್ಟ ದ್ರಾಕ್ಷಿಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು. ಇನ್ನು ಇದರ ಸೇವನೆಯಿಂದ ನಿಮ್ಮ ಮೂಳೆಯೂ ಗಟ್ಟಿಗೊಳ್ಳುತ್ತದೆ. ಗರ್ಭಿಣಿಯರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ದ್ರಾಕ್ಷಿ ತಿಂದರೆ, ಮಕ್ಕಳು ಗಟ್ಟಿಮುಟ್ಟಾಗಿರುತ್ತಾರೆ. ಮತ್ತು ಪುಟ್ಟ ಮಕ್ಕಳಿಗೂ ನೆನೆಸಿದ ದ್ರಾಕ್ಷಿ ಕೊಟ್ಟರೂ ಅವರು ಕೂಡ, ಗಟ್ಟಿಮುಟ್ಟಾಗಿರುತ್ತಾರೆ. ಏಕೆಂದರೆ ಇದರಲ್ಲಿ ಕಬ್ಬಿಣದ ಸತ್ವವಿರುತ್ತದೆ.

ಇಷ್ಟೇ ಅಲ್ಲದೇ ನೆನೆಸಿಟ್ಟ ದ್ರಾಕ್ಷಿಯನ್ನು ಸೇವಿಸುವುದರಿಂದ ದೇಹದಲ್ಲಿರ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಪದೇ ಪದೇ ಶೀತ, ಕೆಮ್ಮು, ಜ್ವರ ಬರುತ್ತಿದ್ದರೆ ಅಂಥವರು, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ದ್ರಾಕ್ಷಿ ತಿನ್ನಬೇಕು. ಇನ್ನು ನೀವು ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗುತ್ತಿಲ್ಲವೆಂದಲ್ಲಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ದ್ರಾಕ್ಷಿ ಸೇವಿಸಿ. ಇದರಿಂದ ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ.

ಗರ್ಭಿಣಿಯರು ಜೀರಿಗೆ ನೀರು ಕುಡಿಯುವುದರಿಂದ ಎಷ್ಟೆಲ್ಲ ಉತ್ತಮ ಪ್ರಯೋಜನವಿದೆ ಗೊತ್ತಾ..?

ಸಾಬಕ್ಕಿ ಮತ್ತು ಕಾಯಿಹಾಲು ಪಾಯಸ

ದೇಹದಲ್ಲಿ ಬರುವ ಬೆವರಿನ ವಾಸನೆ ತಡೆಯಲು ಈ ಕ್ರಮ ಅನುಸರಿಸಿ..

About The Author