Tuesday, October 22, 2024

Latest Posts

ಎಗ್ ಇಲ್ಲದೇ ರೆಡಿ ಮಾಡಬಹುದು ಆಮ್ಲೇಟ್: ಇಲ್ಲಿದೆ ನೋಡಿ ವೆಜ್ ಆಮ್ಲೇಟ್ ರೆಸಿಪಿ..

- Advertisement -

ಆಮ್ಲೇಟ್ ಅಂದದ ತಕ್ಷಣ ಎಲ್ಲರಿಗೂ ನೆನಪಾಗೋದು ಮೊಟ್ಟೆ. ಯಾಕಂದ್ರೆ, ಮೊಟ್ಟೆ ಇಲ್ಲದೇ ಆಮ್ಲೇಟ್ ಮಾಡೋಕ್ಕೆ ಆಗಲ್ಲ ಅನ್ನೋದು ಕೆಲವರ ಅಂಬೋಣ. ಆದ್ರೆ ನಾವಿವತ್ತು ಎಗ್ ಹಾಕದೇ ಆಮ್ಲೇಟ್ ಮಾಡೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಹಾಗಾದ್ರೆ ವೆಜ್ ಆಮ್ಲೇಟ್ ಮಾಡಲು ಬೇಕಾಗುವ ಸಾಮಗ್ರಿಗಳೇನು..? ಇದನ್ನ ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಒಂದು ಕಪ್ ಕಡಲೆಹಿಟ್ಟು, ಒಂದು ಸ್ಪೂನ್ ಬೇಕಿಂಗ್ ಪೌಡರ್, ಅರ್ಧ ಕಪ್ ಮೈದಾ, ಎರಡು ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತೊಂಬರಿ ಸೊಪ್ಪು ಮತ್ತು ಒಂದು ಹಸಿ ಮೆಣಸಿನ ಕಾಯಿ, ರುಚಿಗೆ ತಕ್ಕಷ್ಟು ಉಪ್ಪು. ಇವಿಷ್ಟು ಎಗ್‌ಲೆಸ್ ಆಮ್ಲೇಟ್ ಮಾಡಲು ಬೇಕಾಗುವ ಸಾಮಗ್ರಿ. ಮೊದಲು ಒಂದು ದೊಡ್ಡ ಬೌಲ್‌ಗೆ ಕಡಲೆ ಹಿಟ್ಟು, ಮೈದಾ, ಬೇಕಿಂಗ್ ಪೌಡರ್ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ದೋಸೆ ಹಿಟ್ಟಿನ ಹದಕ್ಕೆ ಕಲಿಸಿಕೊಳ್ಳಿ.

ಇದಕ್ಕೆ ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತೊಂಬರಿ ಸೊಪ್ಪು ಮತ್ತು ಉಪ್ಪು ಸೇರಿಸಿ ಮಿಕ್ಸ್ ಮಾಡಿ. ದೋಸೆ ತವ್ವಾವನ್ನು ಬಿಸಿ ಮಾಡಿಕೊಂಡು, ಅದಕ್ಕೆ ಎಣ್ಣೆ ಸವರಿ, ಆಮ್ಲೇಟ್ ಹಾಕುವಂತೆ, ಬ್ಯಾಟರ್ ಹಾಕಿ, ಸಣ್ಣ ಉರಿಯಲ್ಲಿ ಒಂದು ನಿಮಿಷ ಬೇಯಿಸಬೇಕು. ನೆನಪಿರಲಿ ಮಧ್ಯಮ ಉರಿ ಅಥವಾ ಹೈ ಫ್ಲೇಮ್‌ನಲ್ಲಿ ಯಾವುದೇ ಕಾರಣಕ್ಕೂ ಇದನ್ನ ಬೇಯಿಸಬಾರದು. ಯಾಕಂದ್ರೆ ಇದರಲ್ಲಿ ಬೇಕಿಂಗ್ ಪುಡಿ ಮತ್ತು ಕಡಲೆ ಹಿಟ್ಟಿದ್ದು, ಅದು ಚೆನ್ನಾಗಿ ಬೆಂದರೇನೇ, ರುಚಿ ಬರುವುದು. ಹಾಗಾಗಿ ಸಣ್ಣ ಉರಿಯಲ್ಲಿ ಆಮ್ಲೇಟ್ ತಯಾರಿಸಿ. ಇದಕ್ಕೆ ಬೇಕಾದಲ್ಲಿ ಜೀರಿಗೆ ಸೇರಿಸಿಕೊಳ್ಳಬಹುದು.

- Advertisement -

Latest Posts

Don't Miss