Tuesday, October 22, 2024

Latest Posts

ವಯಸ್ಸು 50 ಆದರೂ, 25ರ ಹರೆಯದವರ ರೀತಿ ಕಾಣ್ಬೇಕಾ..? ಹಾಗಾದ್ರೆ ಹೀಗೆ ಮಾಡಿ..

- Advertisement -

ಯಾರಿಗೆ ತಾನೇ ವಯಸ್ಸಾದರೂ ತಾವು ಯಂಗ್ ಆಗಿ, ಎನರ್ಜಿಟಿಕ್ ಆಗಿ ಕಾಣಬೇಕು ಅಂತಾ ಮನಸ್ಸಿರಲ್ಲಾ ಹೇಳಿ..? ಕೆಲವರು ಅದಕ್ಕಾಗಿ ಸರಿಯಾಗಿ ಡಯಟ್ ಮಾಡ್ತಾರೆ. ಇನ್ನು ಕೆಲವರು ಜಿಮ್‌, ವರ್ಕೌಟ್ ಮಾಡ್ತಾರೆ. ಅದೇ ರೀತಿ 50ರ ಹರೆಯದವರು ಕೂಡ 25ರ ವಯಸ್ಸಿನವರಂತೆ ಕಾಣಬೇಕಕು ಅಂದ್ರೆ ಏನು ಮಾಡಬೇಕು ಅಂತಾ ಮಹರ್ಷಿ ವಾಗ್ಭಟರು ಹೇಳಿದ್ದಾರೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ನೀವು ಯಂಗ್ ಮತ್ತು ಎನರ್ಜಿಟಿಕ್ ಆಗಿರ್ಬೇಕು ಅಂದ್ರೆ, ಯೋಗ ಮತ್ತು ಪ್ರಾಣಾಯಾಮ ಮಾಡಬೇಕು. ಅಲ್ಲದೇ ನಿಮ್ಮ ದೇಹದಲ್ಲಿ ವಾತ, ಪಿತ್ತ ಮತ್ತು ಕಫದ ಪ್ರಮಾಣ ಸಂತುಲನವಾಗಿ ಇರಸಿಕೊಂಡಿದ್ದಲ್ಲಿ, ನಿಮಗೆ ಯಾವುದೇ ರೋಗ ಬರುವುದಿಲ್ಲ. ಆಸ್ಪತ್ರೆಯ ಮುಖ ನೋಡುವ ಪರಿಸ್ಥಿತಿ ಬರುವುದಿಲ್ಲ. ನೀವು ಯವ್ವನಯುವಾಗಿ ಇರ್ತೀರಿ.

ಇನ್ನು ವಾತ ಹೆಚ್ಚಾದ್ರೆ 80ಕ್ಕೂ ಹೆಚ್ಚು ರೋಗಗಳು ಬರುವ ಸಾಧ್ಯತೆ ಇದೆ. ಪಿತ್ತ ಹೆಚ್ಚಾದ್ರೆ 40ಕ್ಕೂ ಹೆಚ್ಚು ರೋಗಗಳು ಬರುತ್ತದೆ. ಮತ್ತು ಕಫ ಹೆಚ್ಚಾದ್ರೆ 20ಕ್ಕೂ ಹೆಚ್ಚು ರೋಗಗಳು ಬರುತ್ತದೆ. ಹಾಗಾಗಿ ನಮ್ಮ ದೇಹದ ವಾತ, ಪಿತ್ತ, ಕಫದ ಸಂತುಲನವನ್ನು ಸರಿಯಾಗಿ ಇರಿಸಿಕೊಳ್ಳಬೇಕು ಅಂತಾ ಹೇಳ್ತಾರೆ ವೈದ್ಯರು. ಇನ್ನು ನೀವು ಯಂಗ್ ಆಗಿ ಕಾಣ್ಬೇಕು, ನಿಮ್ಮ ದೇಹದಲ್ಲಿ ಶಕ್ತಿ ಇರ್ಬೇಕು. ನಿಮಗೆ ಯಾವುದೇ ರೋಗಗಳು ಬರಬಾರದು ಅಂದ್ರೆ ನಾಲ್ಕು ನಿಯಮವನ್ನ ನೀವು ಪಾಲಿಸಬೇಕು.

ಮೊದಲನೇಯ ನಿಯಮ, ಊಟವಾದ ತಕ್ಷಣ ನೀರು ಕುಡಿಯಬಾರದು. ಊಟ ಮಾಡುವಾಗ ಮಧ್ಯ ಮಧ್ಯ ನೀರು ಕುಡಿಯುವುದು, ಮತ್ತು ಊಟವಾದ ತಕ್ಷಣ ನೀರು ಕುಡಿಯುವುದು ವಿಷ ಕುಡಿಯುವುದಕ್ಕೆ ಸಮ ಅಂತಾ ಹೇಳಲಾಗುತ್ತದೆ. ಹಾಗಾಗಿ ಇದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ.  ಹಾಗಾಗಿ ಊಟ ಮಾಡಿ ಒಂದು ಗಂಟೆಯಾದ ಬಳಿಕವೇ ನೀರು ಕುಡಿಯಬೇಕು. ಎರಡನೇಯ ನಿಯಮ ನೀವು ನೀರು ಕುಡಿಯುವಾಗಲೆಲ್ಲ ಗುಟುಕರಿಸಿ ನೀರು ಕುಡಿಯಬೇಕು. ಮೂರನೇಯ ನಿಯಮ, ಫ್ರಿಜ್‌ ನೀರನ್ನ ಎಂದಿಗೂ ಕುಡಿಯಬೇಡಿ.ನಾಲ್ಕನೇಯ ನಿಯಮ, ಬೆಳಿಗ್ಗೆ ಎದ್ದ ತಕ್ಷಣ, ಬಾಯಿ ಮುಕ್ಕಳಿಸದೇ, ಉಗುರು ಬೆಚ್ಚಗಿನ ನೀರು ಕುಡಿಯಿರಿ.

ಮುಖದ ಕಾಂತಿ ಹೆಚ್ಚಿಸಲು ಈ ಎಣ್ಣೆಯನ್ನು ಬಳಸಿ..

ಉಪಯುಕ್ತವಾದ ಕಿಚನ್ ಟಿಪ್ಸ್..

ಮಕ್ಕಳಲ್ಲಿ ಕ್ಯಾಲ್ಶಿಯಂ ಕಡಿಮೆ ಇದ್ದರೆ ಹೇಗೆ ಗೊತ್ತಾಗತ್ತೆ..? ಇದರ ಲಕ್ಷಣ ಮತ್ತು ಪರಿಹಾರವೇನು..?

ಗರ್ಭಿಣಿಯರು ಯಾವ ರೀತಿಯ ಡಯಟ್ ಮಾಡಬೇಕು..?

ವಯಸ್ಸು 35 ದಾಟಿದ ಬಳಿಕ ಗರ್ಭಿಣಿಯಾಗುವವರಿಗೆ ಕಿವಿ ಮಾತು..

- Advertisement -

Latest Posts

Don't Miss