Health Tips: ದೀಪಾವಳಿ ಹಬ್ಬ ಅಂದ್ರೆ, ಬರೀ ದೀಪಾಲಂಕಾರ, ಸಿಹಿ ತಿಂಡಿಗಳಷ್ಟೇ ಇರೋದಿಲ್ಲಾ. ಕೆಲವರ ಮನೆಯಲ್ಲಿ ಪಟಾಕಿಗಳು ಸದ್ದು ಮಾಡುತ್ತದೆ. ಆದರೆ ಇದು ಕಾಣಲು, ಬಳಸಲು ಎಷ್ಟು ಖುಷಿಯೋ, ಅಷ್ಟೇ ಆರೋಗ್ಯಕ್ಕೆ ಹಾನಿಕಾರಕ. ಪ್ರತೀ ದೀಪಾವಳಿ ಹಬ್ಬಕ್ಕೂ, ಒಂದಲ್ಲ ಒಂದು ಪಟಾಕಿಯಿಂದ ಹಾನಿಯುಂಟಾದ ಕೇಸನ್ನು ನಾವು ನೋಡುತ್ತಲೇ ಇರುತ್ತೇವೆ. ವೈದ್ಯರು ಪಟಾಕಿ ಅವಘಡಕ್ಕೆ ಪ್ರಥಮ ಚಿಕಿತ್ಸೆ ಹೇಗೆ ಮಾಡಬೇಕು..? ಅವಘಡ ತಪ್ಪಿಸಲು ಏನು ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಅದೇನೆಂದು ತಿಳಿಯೋಣ ಬನ್ನಿ..
ಪಟಾಕಿ ಹೊಡೆಯುವಾಗ, ಇಕ್ಕಟ್ಟಿನ ಜಾಗದಲ್ಲಿ ಇರದೇ, ಓಪನ್ ಗ್ರೌಂಡ್‌ನಲ್ಲಿ ಪಟಾಕಿ ಸಿಡಿಸುವುದು ಉತ್ತಮ ಅಂತಾರೆ ವೈದ್ಯರು. ಅಲ್ಲದೇ ಪಟಾಕಿ ಬಳಸುವುದರ ಜೊತೆಗೆ ಒಂದು ಬಕೇಟ್ ನೀರು ಸಹ ಇರಬೇಕು. ಯಾಕಂದ್ರೆ ಪಟಾಕಿ ಹೊಡೆಯುವ ವೇಳೆ ನಿಮಗೆ ಪಟಾಕಿ ಕಿಡಿ ತಾಕಿದ್ರೆ, ಅದನ್ನು ನೀರಿನಿಂದ ತೊಳೆಯಬೇಕು.
ಇನ್ನು ಮುಖ್ಯವಾದ ವಿಷಯ ಅಂದ್ರೆ, ಪಟಾಕಿ ಕಿಡಿ ಕಣ್ಣಿಗೆ ಹೋಗಿ, ನಿಮ್ಮ ಕಣ್ಣಿಗೆ ನೋವಾಗಿದ್ದರೆ, ನೀವು ನೀರಿನಿಂದ ಕಣ್ಣನ್ನು ತೊಳೆಯಬಹುದು. ಆದರೆ ನಿಮ್ಮ ಕಣ್ಣಿನ ಬರೀ ನೋವಷ್ಟೇ ಅಲ್ಲದೇ, ಕಣ್ಣಿನಿಂದ ರಕ್ತಸ್ರಾವವಾಗುತ್ತಿದ್ದರೆ, ಆಗ ನೀವು ನೀರಿನ ಬಳಕೆ ಮಾಡಬಾರದು. ಇಂಥ ಸಂದರ್ಭ ಬರುವ ಮುನ್ನ ನೀವು ಪಟಾಕಿ ಹೊಡೆಯುವಾಗ, ಕನ್ನಡಕ ಧರಿಸಿ, ಪಟಾಕಿ ಹೊಡೆಯುವುದು ಉತ್ತಮ.
ಇನ್ನು ಪಟಾಕಿಯಿಂದ ಅವಘಡ ಸಂಭವಿಸಿದಾಗ, ಯಾವ ಅಂಗಾಂಗಕ್ಕೆ ಪಟಾಕಿ ತಾಕಿದೆಯೋ, ಆ ವೈದ್ಯರನ್ನು ಹುಡುಕಬೇಕು ಅಂತಿಲ್ಲ. ನಿಮಗೆ ಯಾವ ವೈದ್ಯರು ಸಿಕ್ಕರೂ, ಅವರ ಬಳಿ ಪ್ರಥಮ ಚಿಕಿತ್ಸೆ ತೆಗೆದುಕೊಂಡು, ಬಳಿಕ ಬೇರೆ ವೈದ್ಯರ ಬಳಿ ಹೋಗಬಹುದು. ಉದಾಹರಣೆಗೆ ಪಟಾಕಿ ಸಿಡಿದು, ಕಣ್ಣಿಗೆ ನೋವಾಗಿದ್ದರೆ, ನೀವು ಕಣ್ಣಿನ ವೈದ್ಯರ ಬಳಿಯೇ ಹೋಗಬೇಕು ಅಂತಿಲ್ಲ. ಬೇರೆ ವೈದ್ಯರ ಬಳಿ ಚಿಕಿತ್ಸೆ ಪಡೆದು,. ಬಳಿಕ ಕಣ್ಣಿನ ವೈದ್ಯರ ಬಳಿ ಹೋಗಬಹುದು. ಈ ಬಗ್ಗೆ ವೈದ್ಯರು ಇನ್ನು ಏನೇನು ಮಾಹಿತಿ ನೀಡಿದ್ದಾರೆ ಎಂದು ತಿಳಿಯಲು ಈ ವೀಡಿಯೋ ನೋಡಿ..