ಎಲ್ಲಾ ಸಂಬಂಧಕ್ಕಿಂತ ಸುಂದರ ಸಂಬಂಧ ಅಂದ್ರೆ ತಾಯಿ ಮಗುವಿನದ್ದು. ಆದ್ರೆ ಪವಿತ್ರವಾದ ಸಂಬಂಧ ಅಂದ್ರೆ ಪತಿ- ಪತ್ನಿಯದ್ದು. ಈ ಸಂಬಂಧದಿಂದಲೇ ಒಂದು ಕುಟುಂಬ ತಯಾರಾಗೋದು. ಇಂಥ ಪವಿತ್ರ ಸಂಬಂಧ ಹಾಳು ಮಾಡಿಕೊಳ್ಳಬಾರದೆಂದರೆ, ಪತಿ- ಪತ್ನಿ ಕೆಲ ನಿಯಮಗಳನ್ನ ಅನುಸರಿಸಬೇಕಾಗುತ್ತದೆ. ಅದರಲ್ಲೂ ಜಗಳವಾಗಬಾರದು, ಕೋಪ ಬಂದಾಗ ಏನು ಮಾಡಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..
ಪ್ರತಿದಿನ ಮಾಡುವ ಇಂಥ ಸಣ್ಣಪುಟ್ಟ ತಪ್ಪುಗಳಿಗೂ ಕ್ಷಮೆ ಇಲ್ಲವೆನ್ನುತ್ತಾನೆ ಶ್ರೀಕೃಷ್ಣ- ಭಾಗ 1
ಪತಿ ಪತ್ನಿ ಇದ್ದಲ್ಲಿ ಎಷ್ಟು ಪ್ರೀತಿ ಇರುತ್ತದೆಯೋ, ಅಷ್ಟೇ ಜಗಳವಿರುತ್ತದೆ. ಹಾಗೆ ಸಿಹಿ ಕಹಿ ಇದ್ದಾಗಲೇ, ಸಂಬಂಧ ಉತ್ತಮವಾಗಿರುತ್ತದೆ. ಆದ್ರೆ ಬರೀ ಜಗಳವೇ ಆಗ್ತಾ ಇದ್ರೆ, ಅಂಥ ಸಂಬಂಧ ಬೇಗ ಮುರಿದು ಬೀಳುತ್ತೆ. ಹಾಗಾಗಬಾರದು, ನಿಮ್ಮ ಸಂಬಂಧ ಉತ್ತಮವಾಗಿರಬೇಕು. ನೀವಿಬ್ಬರೂ ಖುಷಿಯಿಂದ ಇರಬೇಕು ಅಂದ್ರೆ ಕೋಪ ಬಂದಾಗ, ಅದನ್ನು ಕಂಟ್ರೋಲ್ ಮಾಡಲು 2 ನಿಯಮವನ್ನು ಅನುಸರಿಸಿ.
ಪ್ರತಿದಿನ ಮಾಡುವ ಇಂಥ ಸಣ್ಣಪುಟ್ಟ ತಪ್ಪುಗಳಿಗೂ ಕ್ಷಮೆ ಇಲ್ಲವೆನ್ನುತ್ತಾನೆ ಶ್ರೀಕೃಷ್ಣ- ಭಾಗ 2
ಒಂದು ಸುಳ್ಳು ಹೇಳೋದು, ಇನ್ನೊಂದು ಅಂಹಕಾರ ತೋರಿಸೋದು. ನೀವು ಯಾರ ಬಳಿಯಾದರೂ ಸುಳ್ಳು ಹೇಳಿ, ಆದರೆ ಮನೆಯವರ ಬಳಿ ಅಲ್ಲ. ಅದರಲ್ಲೂ ತಂದೆ ತಾಯಿ ಮತ್ತು ಪತ್ನಿಯ ಅಥವಾ ಪತಿಯ ಬಳಿ ಎಂದಿಗೂ ಸುಳ್ಳು ಹೇಳಬೇಡಿ. ಯಾಕಂದ್ರೆ ಇವರು ನಿಮ್ಮ ಮೇಲೆ ಎಲ್ಲರಿಗಿಂತ ಹೆಚ್ಚು ನಂಬಿಕೆ ಇಟ್ಟಿರ್ತಾರೆ. ಹಾಗಾಗಿ ನೀವು ಇವರ ಬಳಿಯೇ ಸುಳ್ಳು ಹೇಳಿ, ಕೊನೆಗೆ ಅದು ಸುಳ್ಳು ಎಂದು ಬೇರೆಯವರಿಂದ ಅವರಿಗೆ ಗೊತ್ತಾದಾಗ, ಅವರ ಮನಸ್ಸಿಗೆ ನೋವಾಗುತ್ತದೆ. ಹಾಗಾಗಿ ನಿಮ್ಮ ಮನೆಯವರ ಬಳಿ ಸುಳ್ಳು ಹೇಳಬೇಡಿ.
ಈ ದೇವಸ್ಥಾನಗಳಿಗೆ ಪುರುಷರು ಹೋಗುವಂತಿಲ್ಲ..
ಇನ್ನು ಅಂಹಕಾರ. ಜೀವನದಲ್ಲಿ ಯಾರೊಂದಿಗೂ ಅಹಂಕಾರದಿಂದ ಇರಬಾರದು. ಆದರೆ ನಮ್ಮ ಎದುರಿನವರು ಅಹಂಕಾರದಿಂದ ಮೆರೆದರೆ, ನಾವು ಅವರೊಂದಿಗೆ ಹಾಗೇ ಇರಬೇಕಾಗುತ್ತದೆ. ಆದ್ರೆ ಮನೆ ಜನರೊಂದಿಗಲ್ಲ. ನೀವು ಎಷ್ಟೇ ಶ್ರೀಮಂತರಾಗಿರಬಹುದು, ಎಷ್ಟೇ ದೊಡ್ಡ ಹುದ್ದೆಯಲ್ಲಿರಬಹುದು. ಹಾಗಂತ, ನಿಮ್ಮ ಮಡದಿ ಮುಂದೆ ಅಥವಾ ಪತಿಯ ಮುಂದೆ ಅಹಂಕಾರ ತೋರಿಸಬೇಡಿ. ಇವೆರಡು ಕಾರಣದಿಂದಲೇ ಸಂಸಾರದಲ್ಲಿ ಬಿರುಕು ಮೂಡೋದು.