Health Tips: ಕೆಲವರಿಗೆ ಹುಟ್ಟಿದಾಗಿನಿಂದ ಏನೇನು ಸೌಲಭ್ಯ ಬೇಕೋ ಅದೆಲ್ಲವೂ ಸಿಕ್ಕಿರುತ್ತದೆ. ಊಟ, ತಿಂಡಿ, ಬಟ್ಟೆ, ಐಷಾರಾಮಿ ಜೀವನ ಎಲ್ಲವೂ ಸಿಗುತ್ತದೆ. ಆದರೆ ನೆಮ್ಮದಿ, ಖುಷಿಯೇ ಸಿಗುವುದಿಲ್ಲ. ಅವರು ಜೀವನಪೂರ್ತಿ ಖುಷಿಗಾಗಿ ಹುಡುಕಾಡುತ್ತಾರೆ. ಹಾಗಾದ್ರೆ ಜೀವನದಲ್ಲಿ ಯಶಸ್ಸು, ನೆಮ್ಮದಿ, ಖುಷಿ ಬೇಕಂದ್ರೆ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ಮೊದಲನೇಯದು ಕೃತಜ್ಞತಾ ಭಾವ ನಿಮ್ಮಲ್ಲಿರಲಿ. ನಿಮಗೆ ಯಾರಾದರೂ ಸಹಾಯ ಮಾಡಿದ್ದಲ್ಲಿ, ಅದನ್ನು ಕೊನೆಯವರೆಗೂ ನೆನಪಿಡಿ. ಕೆಲವೊಮ್ಮೆ ಮನೆಯಲ್ಲಿನ ಜನ ನಿಮಗೆ ಕಷ್ಟಕಾಲದಲ್ಲಿ ಸಹಾಯಕ್ಕೆ ನಿಲ್ಲುತ್ತಾರೆ. ಆದರೆ ಯಾವುದೇ ಸಣ್ಣ ವಿಷಯಕ್ಕೆ ಸಿಟ್ಟಾಗಿ, ನೀವು ಅವರೊಂದಿಗೆ ಮಾತು ಬಿಡುತ್ತೀರಾ. ಅಥವಾ ನಿಷ್ಠುರವಾಗಿ ನಡೆದುಕೊಳ್ಳುತ್ತೀರಾ. ಇದರಿಂದಲೇ ಸಂಬಂಧ ಹಾಳಾಗುತ್ತದೆ. ನೆಮ್ಮದಿಯೂ ಹಾಳಾಗುತ್ತದೆ.
ಎರಡನೇಯದು ನಿಮ್ಮ ಪ್ರೀತಿ ಪಾತ್ರರ ಸಂಪರ್ಕದಲ್ಲಿರಿ. ನಿಮ್ಮ ತಂದೆ ತಾಯಿ, ಅಣ್ಣ- ತಮ್ಮ, ಅಕ್ಕ- ತಂಗಿ, ಪ್ರಿಯತಮ, ಸ್ನೇಹಿತರು ಯಾರೇ ಆಗಿರಲಿ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯಿರಿ. ಇದರಿಂದ ನಿಮ್ಮ ಖುಷಿ ದುಪ್ಪಟ್ಟಾಗುತ್ತದೆ.
ಮೂರನೇಯದು ಕರುಣೆ ಎಂಬುದು ನಿಮ್ಮ ಜೀವನದ ಒಂದು ಭಾಗವಾಗಿರಲಿ. ಯಾರಿಗಾದರೂ ಸಹಾಯ ಮಾಡುವ ಗುಣ, ಊಟ ಕೊಡುವ ಗುಣ, ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುವ ಗುಣ, ಹೀಗೆ ಕರುಣೆಯ ಗುಣ ಯಾರಿಗಿರುತ್ತದೆಯೋ, ಅವನು ಸದಾ ಖುಷಿಯಾಗಿರುತ್ತಾನೆ. ಏಕೆಂದರೆ, ಬೇರೆಯವರಿಂದ ಏನನ್ನಾದರೂ ಪಡೆಯುವಾಗ ಆಗುವ ಖುಷಿಗಿಂತ, ನಾವು ಯಾರಿಗಾದರೂ ಏನನ್ನಾದರೂ ಕೊಡುವಾಗ ಆಗುತ್ತದೆ. ಹಾಗಾಗಿ ದಾನ ಮಾಡಿ ನಿಮ್ಮ ಖುಷಿಯನ್ನು ದುಪ್ಪಟ್ಟು ಮಾಡಿಕೊಳ್ಳಿ.
ನಾಲ್ಕನೇಯದು ನಿಮ್ಮ ಹವ್ಯಾಸವನ್ನು ಎಂದಿಗೂ ಮರೆಯಬೇಡಿ. ಕೆಲವರು ಕೆಲಸ ಸಿಕ್ಕ ಬಳಿಕ, ವಿವಾಹವಾದ ಬಳಿಕ ತಮ್ಮ ಹವ್ಯಾಸವನ್ನು ಮರೆತು ಬಿಡುತ್ತಾರೆ. ಪೇಯ್ಟಿಂಗ್, ಮ್ಯೂಸಿಕ್, ಯಾವುದಾದರೂ ಸಂಗೀತ ವಾದ್ಯ ನುಡಿಸುವುದು ಹೀಗೆ ತರಹೇವಾರಿ ಹವ್ಯಾಸಗಳಿರುತ್ತದೆ. ಅಂಥ ಹವ್ಯಾಸವಿದ್ದಲ್ಲಿ, ಅದನ್ನು ಎಂದಿಗೂ ಬಿಡಬೇಡಿ. ಈ ಹವ್ಯಾಸ ನಿಮ್ಮ ಮನಸ್ಸಿಗೆ ಹೆಚ್ಚು ಖುಷಿ ಕೊಡುತ್ತದೆ.
ಐದನೇಯದು ಎಲ್ಲಕ್ಕಿಂತ ಮುಖ್ಯವಾಗಿ ಟೆಕ್ನಾಲಜಿಯಿಂದ ದೂರವಿರಿ. ಇಂದಿನ ಜನರ ಸಮಯ, ಭಾವನೆ, ಪ್ರೀತಿ, ಕಾಳಜಿ ಎಲ್ಲವನ್ನೂ ಕಿತ್ತುಕೊಳ್ಳುತ್ತಿರುವುದು ಮೊಬೈಲ್. ಕುಟುಂಬಸ್ಥರೆಲ್ಲ ಒಂದೆಡೆ ಸೇರಿದರೂ ಕೂಡ, ಅಲ್ಲಿ ಹಳೆಯ ವಿಷಯಗಳನ್ನು ಮೆಲುಕು ಹಾಕುವುದು ಕಡಿಮೆ. ಬರೀ ಸಾಮಾಜಿಕ ಜಾಲತಾಣದಲ್ಲಿ ಬರುವ ಸುದ್ದಿ ಮಾತನಾಡುತ್ತಾರೆ. ರೀಲ್ಸ್ ಬಗ್ಗೆ ಹರಟುತ್ತಾರೆ. ಸ್ವಲ್ಪ ಹೊತ್ತಿನ ಬಳಿಕ, ತಮ್ಮ ತಮ್ಮ ಮೊಬೈಲ್‌ನಲ್ಲಿ ಬ್ಯುಸಿಯಾಗುತ್ತಾರೆ. ಈ ಮೊಬೈಲ್ ಬಂದು ಸಂಬಂಧದ ಅರ್ಥವನ್ನೇ ಹಾಳುಗೆಡುವಿದೆ. ಹಾಗಾಗಿ ಮೊಬೈಲ್‌ನಿಂದ ಆದಷ್ಟು ದೂರವಿರಿ, ನಿಮ್ಮ ಕುಟುಂಬಸ್ಥರು, ಪ್ರೀತಿಪಾತ್ರರೊಂದಿಗೆ ಹೊತ್ತು ಕಳಿಯಿರಿ.
ಮಕ್ಕಳು ಹೆಚ್ಚು ಫೋನ್ ಬಳಕೆ ಮಾಡಿದ್ದಲ್ಲಿ ಈ ಅಪಾಯಕಾರಿ ಸಮಸ್ಯೆ ತಪ್ಪಿದ್ದಲ್ಲ..
ಗರ್ಭಿಣಿಯರು ಜೀರಿಗೆ ನೀರು ಕುಡಿಯುವುದರಿಂದ ಎಷ್ಟೆಲ್ಲ ಉತ್ತಮ ಪ್ರಯೋಜನವಿದೆ ಗೊತ್ತಾ..?