ನಾವು ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯದಿದ್ದಾಗ ಪೈಲ್ಸ್ ಕಾಣಿಸಿಕೊಳ್ಳುತ್ತದೆ. ಇದನ್ನೇ ಮಲಬದ್ಧತೆ ಎನ್ನುತ್ತಾರೆ. ಹಾಗಾಗಿ ಪ್ರತಿದಿನ ನಮಗೆ ಜೀರ್ಣವಾಗುವಷ್ಟು ನೀರನ್ನ ನಾವು ಕುಡಿಯಬೇಕು. ಇದರೊಂದಿಗೆ ಕೆಲವು ಆಹಾರಗಳನ್ನ ಕೂಡ ನಾವು ಸೇವಿಸಬೇಕು. ಹಾಗಾದ್ರೆ ಯಾವ ಆಹಾರಗಳನ್ನು ಸೇವಿಸಬೇಕು ಅಂತಾ ತಿಳಿಯೋಣ ಬನ್ನಿ..
ಹಾಲು: ಪ್ರತಿದಿನ ಬೆಳಿಗ್ಗೆ ಎದ್ದ ಬಳಿಕ, ಅಥವಾ ರಾತ್ರಿ ಮಲಗುವ ಮುನ್ನ ಒಂದು ಗ್ಲಾಸ್ ಬೆಚ್ಚಗಿನ ಹಾಲು ಕುಡಿಯಿರಿ. ಹಾಲು ಕುಡಿಯುವುದರಿಂದ ನಿಮಗೆ ಶಕ್ತಿ ಬರುತ್ತದೆ. ಕೆಲ ಹೊತ್ತು ಹೊಟ್ಟೆಯೂ ತುಂಬುತ್ತದೆ. ಮತ್ತು ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ಜೀರ್ಣಕ್ರಿಯೆ ಸರಿಯಾಗಿ ಇದ್ದಾಗ, ಮಲಮೂತ್ರ ವಿಸರ್ಜನೆ ಸರಿಯಾಗಿ ಆಗುತ್ತದೆ.ಇದರಿಂದ ಮಲಬದ್ಧತೆ ಸಮಸ್ಯೆ ಬರುವುದಿಲ್ಲ.
ಚಳಿಗಾಲದಲ್ಲಿ ಮಗುವಿನ ಆರೋಗ್ಯವನ್ನ ಈ ರೀತಿ ಕಾಪಾಡಿ..
ಹಸುವಿನ ತುಪ್ಪ: ಅಂಗಡಿಯಲ್ಲಿ ಸಿಗುವ ತುಪ್ಪಕ್ಕಿಂತ, ಹಸುವಿನ ಶುದ್ಧ ತುಪ್ಪ ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಲಾಭವಾಗುತ್ತದೆ. ದಿನಕ್ಕೆ ಒಂದರಿಂದ ಎರಡು ಚಮಚ ತುಪ್ಪ ತಿಂದರೆ ಸಾಕು. ಅದಕ್ಕಿಂತ ಹೆಚ್ಚು ಬೇಡ. ಬಿಸಿ ಊಟದೊಂದಿಗೆ ತುಪ್ಪ ತಿನ್ನಬಹುದು. ಇದರಿಂದ ಪೈಲ್ಸ್ ಬರುವುದಿಲ್ಲ.
ಬಾಳೆ ಹಣ್ಣು: ಪ್ರತಿದಿನ ಮಧ್ಯಾಹ್ನ ಊಟದ ಬಳಿಕ, ಅಥವಾ ತಿಂಡಿ ಬಳಿಕ ಒಂದು ಬಾಳೆ ಹಣ್ಣು ತಿಂದ್ರೆ ಸಾಕು, ಆರೋಗ್ಯ ಉತ್ತಮವಾಗರುತ್ತದೆ ಅಂತಾ ಹಿರಿಯರು ಹೇಳುತ್ತಾರೆ. ಯಾಕಂದ್ರೆ ಬಾಳೆಹಣ್ಣಿನ ಸೇವನೆಯಿಂದ, ಹೊಟ್ಟೆಯ ಸಮಸ್ಯೆ ದೂರವಾಗುತ್ತದೆ. ಮಲವಿಸರ್ಜನೆಗೆ ಸಮಸ್ಯೆಯಾಗುವುದಿಲ್ಲ. ನೆನೆಸಿಟ್ಟ ಶೇಂಗಾ: 20 ನೆನೆಸಿಟ್ಟ ಶೇಂಗಾವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಮಲಬದ್ಧತೆ ಸಮಸ್ಯೆ ಬರುವುದಿಲ್ಲ. ಇದರಿಂದ ಬುದ್ಧಿಶಕ್ತಿ ಬೆಳೆಯುತ್ತದೆ. ವಿದ್ಯಾರ್ಥಿಗಳು ನೆನೆಸಿದ ಶೇಂಗಾ ತಿಂದರೆ, ನೆನಪಿನ ಶಕ್ತಿ ಚೆನ್ನಾಗಿರುತ್ತದೆ. ತ್ವಚೆ, ಕೂದಲು ಕೂಡ ಆರೋಗ್ಯಕರವಾಗಿರುತ್ತದೆ. ಜೀರ್ಣಶಕ್ತಿ ಉತ್ತಮವಾಗಿರುತ್ತದೆ.
ಪುಟ್ಟ ಮಗುವಿಗೆ ತುಪ್ಪದಿಂದ ಮಸಾಜ್ ಮಾಡಬಹುದಾ..? ಇದು ಒಳ್ಳೆಯದಾ..? ಕೆಟ್ಟದ್ದಾ..?
ಇನ್ನು ಮುಖ್ಯವಾದ ವಿಚಾರ ಅಂದ್ರೆ, ಹೆಚ್ಚು ಮಸಾಲೆಯುಕ್ತ ಪದಾರ್ಥ, ನಾನ್‌ವೆಜ್, ಕರಿದ ಪದಾರ್ಥವೆಲ್ಲ ತಿನ್ನುವುದರಿಂದಲೂ, ದೇಹದಲ್ಲಿ ಉಷ್ಣತೆ ಹೆಚ್ಚಾಗಿ, ಪೈಲ್ಸ್ ಬರುತ್ತದೆ. ಹಾಗಾಗಿ ಅಗತ್ಯಕ್ಕಿಂತ ಹೆಚ್ಚು ಇವೆಲ್ಲವನ್ನೂ ತಿನ್ನಬೇಡಿ. ದಿನಕ್ಕೆ ನಿಮಗೆ ಸಾಧ್ಯವಾದಷ್ಟು ನೀರು ಕುಡಿಯಿರಿ. ಬೆಳಿಗ್ಗೆ ಎದ್ದ ತಕ್ಷಣ, ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರು ಕುಡಿಯಿರಿ. ಇನ್ನು ನಾವೀಗ ಹೇಳಿರುವ ಆಹಾರಗಳನ್ನ ಕೂಡ ಲಿಮಿಟಿನಲ್ಲೇ ಸೇವಿಸಿ, ಅಗತ್ಯಕ್ಕಿಂತ ಹೆಚ್ಚು ಅಮೃತವೂ ವಿಷವಾದಂತೆ, ಯಾವ ಆಹಾರವೂ ಹೆಚ್ಚು ಸೇವಿಸುವುದು ಉತ್ತಮವಲ್ಲ.