Spiritual: ಪ್ರಥಮ ಪೂಜಿತನಾದ ಗಣೇಶನನ್ನು ಹಲವಾರು ಹೆಸರುಗಳಿಂದ ಕರೆಯಲಾಗುತ್ತದೆ. ಅದರಲ್ಲಿ ಏಕದಂತ ಎಂಬ ಹೆಸರು ಕೂಡ ಒಂದು. ಗಣೇಶನನ್ನು ಏಕೆ ಏಕದಂತ ಎಂದು ಕರೆಯುತ್ತಾರೆ ಎಂದರೆ, ಅವನಿಗಿರುವ ಎರಡು ಹಲ್ಲುಗಳಲ್ಲಿ, ಒಂದು ಕತ್ತರಿಸಿ ಹೋದ ಕಾರಣ, ಏಕದಂತನೆಂದು ಕರೆಯುತ್ತಾರೆ. ಹಾಗಾದ್ರೆ ಗಣೇಶನ ಒಂದು ಹಲ್ಲು ಹೇಗೆ ತುಂಡಾಯಿತು ಅನ್ನೋ ಬಗ್ಗೆ ಇರುವ ಕಥೆ ಕೇಳೋಣ ಬನ್ನಿ..
ಗಣೇಶ ಏಕದಂತನಾಗಲು ಮಹಾಭಾರತದ ಬರವಣಿಗೆಯೇ ಕಾರಣವೆಂದು ಹೇಳಲಾಗುತ್ತದೆ. ವ್ಯಾಸರು ಮಹಾಭಾರತವನ್ನು ಗಣೇಶನಿಂದಲೇ ಬರೆಸಿದ್ದು. ಏಕೆಂದರೆ, ಅವರು ಹೇಳುತ್ತ ಹೋಗುವ ಮಹಾಭಾರತ ಕಥೆಯನ್ನು ತಪ್ಪದೇ, ತಡಮಾಡದೇ ಬರೆಯುವ ಅರ್ಹತೆ ಹೊಂದಿದ್ದು ಗಣೇಶ ಮಾತ್ರ. ಹೀಗಾಗಿ ವ್ಯಾಸರು ಗಣೇಶನ ಬಳಿಯೇ, ಮಹಾಭಾರತ ಬರೆಯಲು ಹೇಳಿದ್ದರು.
ಹೀಗೆ ಮಹಾಭಾರತ ಬರೆಯುವಾಗ ಸಮಸ್ಯೆಯೊಂದು ಎದುರಾಯಿತು. ಬರೆಯುತ್ತ ಬರೆಯುತ್ತ ಲೇಖನಿ ಮುರಿದು ಹೋಯಿತು. ಆಗ ಬೇರೆ ಲೇಖನಿ ಇಲ್ಲದ ಕಾರಣ, ಗಣಪ ತನ್ನ ಹಲ್ಲಿನ ತುಂಡನ್ನು ತೆಗೆದು, ಮಹಾಭಾರತವನ್ನು ಬರೆದ ಎಂದು ಹೇಳಲಾಗಿದೆ. ಹೀಗಾಗಿ ಗಣಪತಿಗೆ ಒಂದೇ ಹಲ್ಲಿದ್ದು, ಆತನನ್ನು ಈ ಕಾರಣಕ್ಕೆ ಏಕದಂತನೆಂದು ಕರೆಯಲಾಗುತ್ತದೆ.