Spiritual News: ಮನೆ ಉದ್ಧಾರವಾಗಲು ಮತ್ತು ಉದ್ಧಾರವಾಗದಿರಲು, ಎರಡಕ್ಕೂ ಕಾರಣ ಹೆಣ್ಣು ಅಂತಾ ಹಿರಿಯರು ಹೇಳುತ್ತಾರೆ. ಆದರೆ ಎಲ್ಲ ಸಲವೂ ಹೆಣ್ಣೇ ತಪ್ಪು ಮಾಡುತ್ತಾಳೆ ಎಂದಲ್ಲ. ಆದರೆ ಹೆಣ್ಣು ಮಕ್ಕಳು ಮಾಡುವ ಕೆಲವು ತಪ್ಪುಗಳಿಂದ, ಮನೆ ಉದ್ಧಾರವಾಗುವುದಿಲ್ಲ ಅಂತಾ ಹೇಳಲಾಗುತ್ತದೆ. ಯಾವುದು ಅಂಥ ತಪ್ಪುಗಳು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ಕೆಲಸ ಅಡುಗೆ ಕೋಣೆಗೆ ಚಪ್ಪಲಿ ಹಾಕಿ ಹೋಗುವುದು. ಹಿಂದಿನ ಕಾಲದವರು ಹೀಗೆ ಮಾಡುವುದಿಲ್ಲ. ಆದರೆ ಇಂದಿನ ಕಾಲದಲ್ಲಿ ಕೆಲವು ಹೆಣ್ಣು ಮಕ್ಕಳಿಗೆ ಮನೆಯಲ್ಲಿ ಚಪ್ಪಲಿ ಹಾಕಿ, ತಿರುಗುವ ಚಟವಿರುತ್ತದೆ. ಅಂಥವರು, ಅಡುಗೆ ಮನೆಗೂ ಚಪ್ಪಲಿ ಹಾಕಿಕೊಂಡು ಹೋಗುತ್ತಾರೆ. ಆದರೆ ಅಡುಗೆ ಮನೆಗೆ ಚಪ್ಪಲಿ ಧರಿಸಿ ಹೋಗುವುದು, ಅನ್ನಪೂರ್ಣೆಶ್ವರಿಗೆ ಅಪಮಾನ ಮಾಡಿದಂತೆ. ಹೆಣ್ಣು ಮಕ್ಕಳು ಈ ತಪ್ಪು ಮಾಡಿದರೆ, ದೇವಿಯ ಕೋಪಕ್ಕೆ ಗುರಿಯಾಗುತ್ತಾರೆ.
ಎರಡನೇಯ ಕೆಲಸ ಹೊಸ್ತಿಲ ಮೇಲೆ ಕುಳಿತುಕೊಳ್ಳುವುದು. ಹೊಸ್ತಿಲನ್ನ ಕೂಡ ಹಿಂದೂ ಧರ್ಮದಲ್ಲಿ ಪೂಜಿಸಲಾಗುತ್ತದೆ. ಅಲ್ಲಿ ಲಕ್ಷ್ಮೀ ದೇವಿ ನೆಲೆಸಿರುತ್ತಾಳೆಂಬ ನಂಬಿಕೆ ಇದೆ. ಹಾಗಾಗಿ ಹೊಸ್ತಿಲ ಮೇಲೆ ಕುಳಿತುಕೊಳ್ಳಬಾರದು. ನಿಲ್ಲಬಾರದು. ಅದರಲ್ಲೂ ಸಂಜೆ ಹೊತ್ತಂತೂ ಹೊಸ್ತಿಲ ಮೇಲೆ ಕುಳಿತುಕೊಳ್ಳಲೇಬಾರದು. ಅಂಥವರ ಮೇಲೆ ಲಕ್ಷ್ಮೀ ದೇವಿ ಎಂದಿಗೂ ಕೃಪೆ ತೋರಿಸುವುದಿಲ್ಲ.
ಮೂರನೇಯ ಕೆಲಸ ರಾತ್ರಿ ಪಾತ್ರೆ ತೊಳೆಯದಿರುವುದು. ರಾತ್ರಿ ಮಲಗುವ ಮುನ್ನ, ಅಡುಗೆ ಪಾತ್ರೆ, ಉಂಡ ಬಟ್ಟಲು ಸೇರಿ ಎಲ್ಲ ಪಾತ್ರೆಗಳನ್ನು ತೊಳೆದು ಮಲಗಬೇಕು. ಇಲ್ಲವಾದಲ್ಲಿ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.
ನಾಲ್ಕನೇಯ ಕೆಲಸ, ಕಸಬರಿಗೆಯನ್ನು ಕಾಲಿನಿಂದ ಮೆಟ್ಟುವುದು. ಈ ಕೆಲಸವನ್ನು ಎಂದಿಗೂ ಮಾಡಬಾರದು. ಕೆಲವರು ಕಸಬರಿಗೆಯನ್ನು ಕಾಲಿನಿಂದ ತುಳಿಯುತ್ತಾರೆ, ಸರಿಸುತ್ತಾರೆ. ಆದರೆ ಕಸಬರಿಗೆಗೆ ಕಾಲು ತಾಕಿಸಬಾರದು. ಏಕೆಂದರೆ, ಕಸಬರಿಗೆ ಲಕ್ಷ್ಮೀ ದೇವಿಗೆ ಸಮ. ಅದು ನಮ್ಮ ಮನೆಯ ಧೂಳು, ಕಸವನ್ನು ತೆಗೆದು, ಮನೆಯಲ್ಲಿ ಸಕಾರಾತ್ಮಕತೆ ಮೂಡಿಸುತ್ತದೆ. ಹಾಗಾಗಿ ಕಸಬರಿಗೆಯನ್ನು ಕಾಲಿನಿಂ ತುಳಿಯಬಾರದು.