Health Tips: ಪ್ರತಿದಿನ ಹೆಣ್ಣು ಮಕ್ಕಳು ಕೂದಲು ಬಾಚಲೇಬೇಕಾಗುತ್ತದೆ. ಆದರೆ ಹೀಗೆ ಕೂದಲು ಬಾಚುವಾಗ, ನಾವು ಮಾಡುವ ಕೆಲವು ತಪ್ಪುಗಳು, ಮನೆಯ ಆರ್ಥಿಕ ಪರಿಸ್ಥಿತಿ ಹದಗೆಡಿಸುತ್ತದೆ. ನೆಮ್ಮದಿ ಹಾಳು ಮಾಡುತ್ತದೆ. ಹಾಗಾದ್ರೆ ತಲೆಗೂದಲು ಬಾಚುವಾಗ, ಯಾವ ತಪ್ಪು ಮಾಡಬಾರದು ಅಂತಾ ತಿಳಿಯೋಣ ಬನ್ನಿ..
ಎಲ್ಲಕ್‌ಕಿಂತ ಮೊದಲ ತಪ್ಪು ಎಂದರೆ, ಮನೆಯೊಳಗೆ ಕೂದಲು ಬಾಚಬಾರದು. ಅದರಲ್ಲೂ ಬೆಡ್ ಮೇಲೆ ಕುಳಿತು, ಅಡುಗೆ ಮನೆಯಲ್ಲಿ ನಿಂತು, ಅಥವಾ ಮನೆಯೊಳಗಿನ ಮೆಟ್ಟಿನ ಮೇಲೆ ನಿಂತು ಕೂದಲು ಬಾಚಬಾರದು. ಯಾಕಂದ್ರೆ ಕೂದಲು ಮನೆಯಲ್ಲಿ ಬೀಳೋದು, ಮನೆಗೆ ಮಾಟ ಮಾಡಿದ ಹಾಗೆ ಅಂತಾ ಹೇಳಲಾಗುತ್ತದೆ. ಹಾಗಾಗಿ ಹೊರಗೆ ಹೋಗಿ, ಕೂದಲು ಬಾಚಿಕೊಂಡು ಒಳಬರಬೇಕು.
ಇನ್ನು ನೀವು ಹೊರಗೆ ತಲೆ ಬಾಚಿಕೊಳ್ಳುವಾಗಲೂ, ಕುಳಿತುಕೊಂಡೇ ತಲೆಬಾಚಿಕೊಳ್ಳಬೇಕು. ಆಗ ಕೂದಲು ನಿಮ್ಮ ಸಮೀಪವೇ ಬೀಳುತ್ತದೆ. ನೀವು ಅದನ್ನು ಸೇರಿಸಿ, ಬಿಸಾಕಬಹುದದು. ನಿಂತು ಕೂದಲು ಬಾಚಿಕೊಂಡರೆ, ಅದು ಆಚೀಚೆ ಹೋಗಿ, ಮನೆಯೊಳಗೆ ಸೇರಬಹುದು. ಹಾಗಾಗಿ ಕೂದಲು ಬಾಚಿಕೊಳ್ಳುವಾಗ, ಕುಳಿತುಕೊಂಡೇ ಬಾಚಿ.
ಇನ್ನು ಸಂಜೆ 5 ಗಂಟೆಯೊಳಗೆ ಕೂದಲು ಬಾಚಿಕೊಳ್ಳಬೇಕು. ಸೂರ್ಯಾಸ್ತದ ಬಳಿಕ ಕೂದಲು ಬಾಚಲೂಬಾರದು. ಕೂದಲು ಬಿಡಲೂಬಾರದು. ಇವೆರಡೂ ಮನೆಗೆ ದರಿದ್ರ ಎನ್ನಲಾಗುತ್ತದೆ. ಹೀಗೆ ಮಾಡುವುದರಿಂದ ಆರೋಗ್ಯ ಹಾನಿ, ಮನೆಯಲ್ಲಿ ನೆಮ್ಮದಿ ಹಾಳು, ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಹಾಗಾಗಿ ಸಂಜೆ ಬಳಿಕ ತಲೆಗೂದಲು ಬಾಚಬೇಡಿ, ತಲೆಗೆ ಎಣ್ಣೆಯೂ ಹಾಕಬೇಡಿ.