Saturday, June 21, 2025

Latest Posts

ಹೆಣ್ಣು ಮಕ್ಕಳು ಈ 5 ಪ್ರಾಡಕ್ಟ್ಗಳನ್ನ ಬಳಸೋದು ನಿಲ್ಲಿಸಬೇಕು..

- Advertisement -

ಹೆಣ್ಣು ಮಕ್ಕಳು ಎಷ್ಟು ತಮ್ಮ ಆರೋಗ್ಯ ಮತ್ತು ಸೌಂದರ್ಯದ ಬಗ್ಗೆ ಗಮನ ಹರಿಸುತ್ತಾರೋ, ಅಷ್ಟು ಒಳ್ಳೆಯದು. ಯಾಕಂದ್ರೆ ಹೆಣ್ಣು ಮಕ್ಕಳ ತ್ವಚೆ ಸೆನ್ಸಿಟಿವ್ ಆಗಿ ಇರತ್ತೆ. ಹಾಗಾಗಿ ಅವರು ಸೌಂದರ್ಯದ ಬಗ್ಗೆ ಕಾಳಜಿ ವಹಿಸಬೇಕು. ಮತ್ತು ಅವರು ಋತುಮತಿಯಾಗುತ್ತಾರೆ. ಗರ್ಭಿಣಿಯಾಗುತ್ತಾರೆ. ಹೆರಿಗೆ ನೋವು ಅನುಭವಿಸುತ್ತಾರೆ. ಇಷ್ಟೆಲ್ ಚಾಲೆಂಜನ್ನ ಜೀವನದ್ಲಲಿ ಫೇಸ್ ಮಾಡುತ್ತಾರೆ. ಹಾಗಾಗಿ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕು. ಅದೇ ರೀತಿ ಅವರು ಕೆಲ ಪ್ರಾಡಕ್ಟ್‌ಗಳನ್ನ ಬಳಸೋದು ನಿಲ್ಲಿಸಬೇಕು. ಹಾಗಾದ್ರೆ ಹೆಣ್ಣು ಮಕ್ಕಳು ಯಾವ 5 ಪ್ರಾಡಕ್ಟ್‌ಗಳನ್ನ ಬಳಸಬಾರದು ಅಂತಾ ತಿಳಿಯೋಣ ಬನ್ನಿ..

ಮೊದಲನೇಯ ವಸ್ತು ಸ್ಕಿನ್ ಲೈಟೆನಿಂಗ್‌ ಕ್ರೀಮ್. ಈ ಕ್ರೀಮ್ ಬಳಸಿದ್ರೆ ನಾವು ಬೆಳ್ಳಗಾಗ್ತೀವಿ ಅನ್ನೋ ಭ್ರಮೆ ಹಲವರಿಗಿದೆ. ಇದನ್ನ ಬಳಸಿದ್ರೆ, ನೀವು ಬೆಳ್ಳಗಾಗಬಹುದು. ಆದ್ರೆ ಆರೋಗ್ಯಕರವಾಗಿ ಅಲ್ಲ. ಅನಾರೋಗ್ಯಕರವಾಗಿ. ಯಾಕಂದ್ರೆ ಇದರಲ್ಲಿ ಅಷ್ಟು ಹಾರ್ಮ್‌ಫುಲ್ ಕೆಮಿಕಲ್‌ಗಳಿದೆ. ಇದರಿಂದ ನಿಮ್ಮ ಚರ್ಮ ಹಾಳಾಗುವುದಲ್ಲದೇ, ಕಿಡ್ನಿ ಅಥವಾ ಬ್ರೇನ್ ಪ್ರಾಬ್ಲಮ್ ಆಗತ್ತೆ. ನೀವು ಕ್ರೀಮ್ ಹಚ್ಚಿ ಬೆಳ್ಳಗಾಗುವ ಬದಲು, ನೀರು ಕುಡಿದು, ಆರೋಗ್ಯಕರ ಆಹಾರ ಸೇವಿಸಿ ಬೆಳ್ಳಗಾಗಿ.

ಎರಡನೇಯ ವಸ್ತು ಅಂಡರ್ ವೈರ್ಡ್ ಬ್ರಾ ಹಾಕಿಕೊಳ್ಳಬೇಡಿ. ಇದು ನಿಮ್ಮ ಫಿಗರ್ ಚೆಂದಗಾಣಿಸುವಂತೆ ಮಾಡತ್ತೆ. ದೇಹಕ್ಕೂ ಹಿತವೆನಿಸಬಹುದು. ಆದ್ರೆ ಇದರಿಂದ ದೇಹದಲ್ಲಿ ರಕ್ತ ಹೆಪ್ಪುಗಟ್ಟತ್ತೆ. ಉಸಿರಾಟದ ಸಮಸ್ಯೆ ತಂದಿಡತ್ತೆ. ಅಲ್ಲದೇ ತ್ವಚೆಯ ಸಮಸ್ಯೆಯೂ ಆಗತ್ತೆ. ನಿಮಗೆ ಇದನ್ನ ಧರಿಸಲೇಬೇಕು ಎಂದಲ್ಲಿ, ಅವಸ್ಯಕತೆ ಇರುವ ಸಮಯವಷ್ಟೇ ಧರಿಸಿ. ನಂತರ ಧರಿಸಬೇಡಿ. ರಾತ್ರಿ ಮಲಗುವಾಗ ಬ್ರಾ ಹಾಕಿ ಮಲಗಿದ್ರೆ, ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ.

ಮೂರನೇಯ ವಸ್ತು, ಹೆಚ್ಚು ಹೈ ಹೀಲ್ಸ್ ಚಪ್ಪಲಿ ಧರಿಸುವುದು. ಹೈ ಹೀಲ್ಸ್ ಪಾದರಕ್ಷೆ ಧರಿಸುವುದು ಇತ್ತೀಚೆಗೆ ಕಾಮ್ ಆಗಿದೆ. ಕೆಲವರು ಫ್ಯಾಷನ್‌ಗಾಗಿ ಅದನ್ನ ಧರಿಸಿದರೆ, ಇನ್ನು ಕೆಲವರು ಕುಳ್ಳಗಿರುವ ಕಾರಣಕ್ಕೆ ಅದನ್ನು ಧರಿಸುತ್ತಾರೆ. ಆದ್ರೆ ನೀವು ಹೆಚ್ಚು ಹೊತ್ತು ಹೈ ಹೀಲ್ಸ್ ಚಪ್ಪಲಿ ಧರಿಸಿದರೆ, ಅದು ನಿಮ್ಮ ಗರ್ಭಕೋಶದ ಮೇಲೆ ಪರಿಣಾಮ ಬೀರತ್ತೆ. ವಯಸ್ಸಾದ ಬಳಿಕ ನಿಮಗೆ ಕಾಲು ನೋವು, ಪಾದದ ನೋವು ಹೆಚ್ಚಾಗತ್ತೆ. ಯಾಕಂದ್ರೆ ನಾವು ಅದನ್ನು ಧರಿಸಿ ನಡೆಯುವಾಗ, ಬೀಳಬಾರದು ಎಂದು ಅದರ ಮೇಲೆ ಭಾರ ಹಾಕುತ್ತೇವೆ. ಇದರಿಂದಲೇ ಹಿಮ್ಮಡಿ ನೋವು, ಪಾದ ನೋವು ಬರುತ್ತದೆ.

ನಾಲ್ಕನೇಯ ವಸ್ತು ಪ್ರೈವೇಟ್ ಪಾರ್ಟ್‌ ವಾಶ್ ಮಾಡಲು ಕ್ರೀಮ್ ಬಳಸಬೇಡಿ. ಗುಪ್ತಾಂಗ ಸ್ವಚ್ಛವಾಗಿ ಇಡುವುದು ತುಂಬಾ ಇಂಪಾರ್ಟೆಂಟ್. ಅದರಲ್ಲೂ ಹೆಣ್ಣು ಮಕ್ಕಳು ಈ ವಿಷಯದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಇಲ್ಲದಿದ್ದರೆ, ಅಲರ್ಜಿಯಾಗಿ, ಯುರಿನ್ ಇನ್‌ಫೆಕ್ಷನ್ ಆಗತ್ತೆ. ಹಾಗಾಗಿ ಅದನ್ನ ಕ್ಲೀನ್ ಆಗಿ ಇರಿಸಬೇಕು. ಆದ್ರೆ ಅದಕ್ಕಾಗಿ ಇಂಟಿಮೇಟ್ ವಾಶ್ ಪ್ರಾಡಕ್ಟ್‌ಗಳನ್ನ ಬಳಸಬೇಡಿ.

ಐದನೇಯ ವಸ್ತು ಹೇರ್ ಡೈ ಬಳಸಬೇಡಿ. ಯಾರಿಗೂ ಕೂಡ ತಾವು ಮುದುಕಿಯಂತೆ ಕಾಣೋದು ಇಷ್ಟವಿರೋದಿಲ್ಲಾ. ಹಾಗಾಗಿಯೇ ಹಲವರು ಹೇರ್ ಡೈ ಬಳಸುತ್ತಾರೆ. ಆದ್ರೆ ಇದರಲ್ಲಿರುವ ಕೆಮಿಕಲ್, ನಿಮ್ಮ ಕೂದಲಿನ ಆರೋಗ್ಯವನ್ನ ಹಾಳು ಮಾಡತ್ತೆ. ಕೆಲವರಿಗೆ ಹೇರ್ ಡೈ ಹಾಕಿದ್ರೆ, ತಲೆ ನೋವು ಬರತ್ತೆ, ಮೈಗ್ರೇನ್, ಸೈನಸ್ ಸಮಸ್ಯೆ ಕಾಡತ್ತೆ. ಹಾಗಾಗಿ ಹೇರ್ ಡೈ ಬದಲು, ಕೆಮಿಕಲ್ ಇಲ್ಲದ ಮೆಹಂದಿ ಬಳಸಿ.

ರವಾ ಥಾಲಿಪಟ್ಟನ್ನ ಒಮ್ಮೆ ಈ ರೀತಿ ಮಾಡಿ ನೋಡಿ..

ರಾತ್ರಿ ಊಟದ ವಿಷಯದಲ್ಲಿ ನೀವು ಮಾಡುವ 3 ತಪ್ಪುಗಳಿವು..

ತರಕಾರಿಯಿಂದ ಪೋಷಕಾಂಶಗಳನ್ನ ಹೀಗೆ ಪಡೆಯಿರಿ..

- Advertisement -

Latest Posts

Don't Miss