ಹಬ್ಬ ಹರಿದಿನ, ಅಥವಾ ಮದುವೆ ಕಾರ್ಯಕ್ರಮ ಇತ್ಯಾದಿ ಇರುವಾಗ, ಕೆಲವರು ಗೋಲ್ಡ್ ಫೇಶಿಯಯಲ್ ಮಾಡಿಸಿಕೊಳ್ಳೋಕ್ಕೆ ಬ್ಯೂಟಿ ಪಾರ್ಲರ್‌ಗೆ ಓಡ್ತಾರೆ. ಆದ್ರೆ ನಾವಿಂದು ಮನೆಯಲ್ಲೇ ಹೇಗೆ ಗೋಲ್ಡ್ ಫೇಶಿಯಲ್ ತಯಾರಿಸಬಹುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.
ನಾರ್ತ್ ಶೈಲಿಯ ಬೈಂಗನ್ ಭರ್ತಾ ರೆಸಿಪಿ..
ಒಂದು ಸ್ಪೂನ್ ಕಡಲೆ ಹಿಟ್ಟು, ಚಿಟಿಕೆ ಅರಿಶಿನ, ಎರಡು ಚಮಚ ಹಾಲು. ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ. ಅರಿಶಿನ ಚಿಟಿಕೆ ಹಾಕಿದರೆ ಸಾಕು. ಇಲ್ಲವಾದಲ್ಲಿ, ಚಿನ್ನದ ಬಣ್ಣ ಬರುವ ಬದಲು, ಅರಿಶಿನ ಬಣ್ಣವಾಗುತ್ತದೆ. ಹಾಲು ಕಡಿಮೆ ಎನ್ನಿಸಿದ್ದಲ್ಲಿ ನೀವು ರೋಸ್ ವಾಟರ್ ಬಳಸಿ, ಸರಿಯಾದ ಮಾಸ್ಕ್ ತಯಾರಿಸಬಹುದು.
ಮನೆಯಲ್ಲೇ ಟೇಸ್ಟಿಯಾಗಿ ನೀವೂ ತಯಾರಿಸಬಹುದು ತವಾ ಪುಲಾವ್..
ಈ ಮಾಸ್ಕನ್ನು ಅಪ್ಲೈ ಮಾಡಿ, ಅದು ಒಣಗಿದ ಬಳಿಕ, ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಮುಖದ ಮೇಲಿನ ನೀರು ಅದಾಗಿಯೇ ಒಣಗಿದ ಮೇಲೆ, ಮುಖ ಒರೆಸಿಕೊಂಡು, ನಿಮ್ಮ ಮುಖಕ್ಕೆ ಸ್ಯೂಟ್ ಆಗುವ ಮಾಯ್ಸಶ್ಚರಾಯ್ಸಿಂಗ್ ಕ್ರೀಮ್ ಹಚ್ಚಿ. ಇನ್ನು ನಿಮಗೆ ಹಾಲು, ರೋಸ್‌ವಾಟರ್ ಅಥವಾ ಅರಿಶಿನ, ಕಡಲೆ ಹಿಟ್ಟು ಅಲರ್ಜಿ ಎಂದಾದಲ್ಲಿ, ವೈದ್ಯರ ಬಳಿ ಚಿಕಿತ್ಸೆ ಪಡೆದು ಬಳಿಕ ಬಳಸುವುದು ಉತ್ತಮ.