Sunday, April 20, 2025

Latest Posts

ಗ್ರೀನ್ ಪಲಾವ್ (ಪಾಲಕ್ ರೈಸ್) ರೆಸಿಪಿ..

- Advertisement -

Recipe: ಇಂದು ನಾವು ಆರೋಗ್ಯಕ್ಕೂ ಉತ್ತಮವಾದ, ರುಚಿಕರವೂ ಆಗ ಗ್ರೀನ್ ಪಲಾವ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.

ಮಾಡುವ ವಿಧಾನ: ಒಂದು ಕಟ್ಟು ಪಾಲಕ್ ಸೊಪ್ಪನ್ನ ಸ್ವಚ್ಛವಾಗಿ ತೊಳೆಯಿರಿ. ಬಳಿಕ ಒಂದು ಪಾತ್ರೆಯಲ್ಲಿ ನೀರು ಕುದಿಯಲು ಇಟ್ಟು, ಅದಕ್ಕೆ ಪಾಲಕ್ ಸೊಪ್ಪು ಹಾಕಿ. 2 ನಿಮಿಷ ಕುದಿಸಿ. ಇದನ್ನ ತಣ್ಣಗಾಗಲು ಬಿಡಿ. ಇಲ್ಲವಾದಲ್ಲಿ ಐಸ್‌ನೀರಿಗೆ ಹಾಕಿ ತೆಗೆಯಿರಿ. ಬಳಿಕ ಈ ಸೊಪ್ಪನ್ನು ಮಿಕ್ಸಿ ಜಾರ್‌ಗೆ ಹಾಕಿ, ಇದರ ಜೊತೆಗೆ ಅರ್ಧ ಕಪ್‌ ಕೊತ್ತೊಂಬರಿ ಸೊಪ್ಪು, ಅರ್ಧ ಕಪ್ ಪುದೀನಾ, 2ರಿಂದ 3 ಹಸಿಮೆಣಸು, ಇವಿಷ್ಟನ್ನು ಹಾಕಿ, ಪೇಸ್ಟ್ ಮಾಡಿ.

ಈಗ ಪ್ಯಾನ್ ಬಿಸಿಗಿಟ್ಟು, ಎರಡು ಸ್ಪೂನ್ ತುಪ್ಪ, 10ರಿಂದ 15 ಕಾಜು ಹಾಕಿ ಹುರಿಯಿರಿ. ಗೋಡಂಬಿಯನ್ನು ಪ್ಲೇಟ್‌ನಲ್ಲಿರಿಸಿ. ಅದೇ ತುಪ್ಪಕ್ಕೆ 2 ಪಲಾವ್ ಎಲೆ, ಚಕ್ಕೆ, ಲವಂಗ, ಜೀರಿಗೆ, ಸೋಂಪು, ಏಲಕ್ಕಿ, ಇವಿಷ್ಟನ್ನು ಹುರಿಯಿರಿ. ಬಳಿಕ ಇದಕ್ಕೆ ಎರಡು ಸಣ್ಣಗೆ ಕತ್ತರಿಸಿದ ಈರುಳ್ಳಿ ಹಾಕಿ ಹುರಿಯಿರಿ. ಬಳಿಕ 1 ಕ್ಯಾಪ್ಸಿಕಂ ಹುರಿಯಿರಿ. ಒಂದು ಸ್ಪೂನ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಗ್ರೀನ್ ಪೇಸ್ಟ್, ಅರ್ಧ ಕಪ್ ಬೇಯಿಸಿದ ಬಟಾಣಿ, ಒಂದು ಸ್ಪೂನ್ ಗರಂ ಮಸಾಲೆ, ಧನಿಯಾಪುಡಿ, ಜೀರಿಗೆ ಪುಡಿ, ಕೊಂಚ ಖಾರದ ಪುಡಿ, ಬೇಕಾದಲ್ಲಿ ಸಕ್ಕರೆ, ಮತ್ತು ರುಚಿಗೆ ತಕ್ಕಷ್ಟು ಉಪ್ಪು, ಹುರಿದಿಟ್ಟುಕೊಂಡ ಗೋಡಂಬಿ ಇವಿಷ್ಟನ್ನು ಹಾಕಿ. ಇದಕ್ಕೆ ಅರ್ಧ ಕಪ್ ನೀರು ಸೇರಿಸಿ 5 ನಿಮಿಷ ಮಂದ ಉರಿಯಲ್ಲಿ ಬೇಯಿಸಿ. ಈಗ ಅನ್ನ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಇನ್ನು 5 ನಿಮಿಷ ಮಂದ ಉರಿಯಲ್ಲಿ ಪ್ಲೇಟ್ ಮುಚ್ಚಿ ಬೇಯಿಸಿದರೆ ಪಲಾವ್ ರೆಡಿ.

ನೀವು ಈ ತರಕಾರಿಗಳ ಜೊತೆ, ಕ್ಯಾರೆಟ್, ಕ್ವಾಲಿ ಫ್ಲವರ್‌, ಆಲೂ ಈ ರೀತಿ ನಿಮಗೆ ಬೇಕಾದ ತರಕಾರಿ ಬಳಸಬಹುದು.

ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕಾಗುವ ಅತ್ಯುತ್ತಮ ಪ್ರಯೋಜನಗಳಿವು.

ಕ್ಯಾಪ್ಸಿಕಂ ಮಸಾಲಾ ಕರಿ ರೆಸಿಪಿ..

ಉಗುರು ಕಚ್ಚುವ ಅಭ್ಯಾಸವಿದ್ದರೆ ಇಂದೇ ಬಿಟ್ಟುಬಿಡಿ…

- Advertisement -

Latest Posts

Don't Miss