ಕನ್ನಡ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ಅದೆಷ್ಟೋ ನಟಿಯರು, ದಕ್ಷಿಣ ಭಾರತದ ತೆಲುಗು, ತಮಿಳು ಮಲಯಾಳಂ ಸೇರಿದಂತೆ ಬಾಲಿವುಡ್ ಸಿನಿಮಾಗಳಲ್ಲೂ ನಟಿಸಿ ಸ್ಟಾರ್ ನಟಿಯರಾಗಿ ಮಿಂಚುತ್ತಿದ್ದಾರೆ. ಶ್ರದ್ಧಾ ಶ್ರೀನಾಥ್, ರಶ್ಮಿಕಾ ಮಂದಣ್ಣ, ಅನುಷ್ಕಾ ಶೆಟ್ಟಿ , ಹರಿಪ್ರಿಯಾ ಸೇರಿದಂತೆ ಹತ್ತು ಹಲವು ನಟಿಯರು ಈ ಸಾಲಿನಲ್ಲಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾದಿಂದ ಸಾಕಷ್ಟು ಹೆಸರು ಗಳಿಸಿದ್ದ ರಶ್ಮಿಕಾ ಮಂದಣ್ಣ, ಸದ್ಯ ಪರಭಾಷೆಯ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ.
ಈ ನಡುವೆ ತಮಿಳಿನ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ, ನನಗೆ ಕನ್ನಡದಲ್ಲಿ ಡಬ್ಬಿಂಗ್ ಮಾಡುವುದು ತುಂಬಾನೇ ಕಷ್ಟ ಅಂತ ಹೇಳುವ ಮೂಲಕ, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ರು. ಇದೀಗ ಕನ್ನಡದ ಮತ್ತೊಬ್ಬನಟಿ ಹರಿಪ್ರಿಯಾ, ಕನ್ನಡದಲ್ಲೇ ಪತ್ರ ಬರೆಯುವ ಮೂಲಕ ಅಭಿಮಾನಿಗಳೊಂದಿಗೆ ಇಂಪಾರ್ಟೆಂಟ್ ವಿಷಯವನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಾನೂ, ಕನ್ನಡವನ್ನು ಯಾಕೆ ಬಳಸುತ್ತಿಲ್ಲ ಎಂಬ ಬಗ್ಗೆ ಪತ್ರದಲ್ಲಿ ವಿವರಣೆ ನೀಡಿದ್ದಾರೆ.
ಪತ್ರದಲ್ಲಿ ಏನಿದೆ..?
” ನಾನೊಬ್ಬಳು ಅಪ್ಪಟ ಕನ್ನಾಡಭಿಮಾನಿ. ನನಗೂ ಕನ್ನಡ ಮಾತನಾಡಲು,ಬರೆಯಲು, ಜೊತೆಗೆ ಓದುವುದಕ್ಕೂ ಕೂಡ ಬರುತ್ತೆ. ಕನ್ನಡ ಭಾಷೆ ಹಾಗೂ ಕನ್ನಡಾಭಿಮಾನಿಗಳ ಮೇಲೆ ನನಗೆ ವಿಶೇಷ ಗೌರವ ಹಾಗೂ ಪ್ರೀತಿಯಿದೆ. ಯಾವುದೇ ಹಿನ್ನೆಲೆ ಇಲ್ಲದೇ ಬಂದ ನನ್ನನ್ನು ಇಂದು ಸಾಕಷ್ಟು ಎತ್ತರಕ್ಕೆ ಬೆಳೆಸಿದ್ದೀರಿ.
ಇಂದಿನ ಯಶಸ್ಸಿನಲ್ಲಿ ನಿಮ್ಮೆಲ್ಲರ ಪಾಲಿದೆ ಅಂತಾ ಹೇಳಿದ್ದಾರೆ. ಅಂದ ಹಾಗೇ ನಾನು ಮಾಡುವ ಪೋಸ್ಟ್ಗಳಿಗೆ ಸಾಕಷ್ಟು ಜನರು ಕನ್ನಡದಲ್ಲೇ ಕಮೆಂಟ್ ಮಾಡಿ ಅಂತಾ ಕೇಳ್ತಾರೆ. ಆದ್ರೆ ನಾನು ಕನ್ನಡದ ಬದಲಾಗಿ ಇಂಗ್ಲೀಷ್ನಲ್ಲೇ ಕಮೆಂಟ್ ಮಾಡ್ತೀನಿ. ಯಾಕಂದ್ರೆ ನನಗೆ ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂನಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಹಾಗಾಗಿ ನಾನು ಹೇಳಲಿರುವ ವಿಷಯ ಅವರಿಗೆ ಚೆನ್ನಾಗಿ ಅರ್ಥವಾಗಲಿ ಅನ್ನೋ ಉದ್ದೇಶಕ್ಕೆ ಇಂಗ್ಲೀಷನಲ್ಲೇ ಕಮೆಂಟ್ ಮಾಡ್ತಿನಿ.
ಜೊತೆಗೆ ನಾವು ಯಾವಾಗಲೂ ಶೂಟಿಂಗ್ನಲ್ಲಿ ಬ್ಯುಸಿಯಾಗಿರೋ ಕಾರಣ ಕನ್ನಡದಲ್ಲಿ ಟೈಪ್ ಮಾಡೋಕೆ ತುಂಬಾನೇ ಸಮಯ ಬೇಕಾಗುತ್ತೆ. ಈ ಎಲ್ಲಾ ಕಾರಣದಿಂದಾಗಿ ಕನ್ನಡದಲ್ಲಿ ನಾನು ಕಮೆಂಟ್ ಮಾಡುತ್ತಿಲ್ಲ. ಇದನ್ನು ನನ್ನ ಎಲ್ಲಾ ಅಭಿಮಾನಿಗಳು ಅರ್ಥ ಮಾಡಿಕೊಳ್ತಾರೆ ಅಂತಾ ತಿಳಿದುಕೊಂಡಿದ್ದೇನೆ ಅಂತಾ ಪತ್ರದಲ್ಲಿ ತಿಳಿಸಿದ್ದಾರೆ. ಜೊತೆಗೆ ನಿಮ್ಮ ಪ್ರೀತಿ, ಅಭಿಮಾನ, ಪ್ರೋತ್ಸಾಹ ಸದಾ ಹೀಗೆ ಇರಲಿ. ಸದ್ಯ ಈ ಪೋಸ್ಟ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತೀಚಿಗಷ್ಟೇ ಅನುಷ್ಕಾ ಶಟ್ಟಿ ಕೂಡ ಕನ್ನಡದಲ್ಲೇ ಅಮ್ಮನಿಗೆ ಶುಭಕೋರಿ ಕನ್ನಡಾಭಿಮಾನಿಗಳ ಮನಗೆದ್ದಿದ್ರು.