Thursday, December 26, 2024

Latest Posts

ಬೀಟ್ರೂಟ್ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?

- Advertisement -

ನಾವು ನಿಮಗೆ ಬೀಟ್‌ರೂಟ್‌ ತಿನ್ನುವುದರಿಂದ ಆರೋಗ್ಯಕ್ಕಾಗುವ ನಷ್ಟವೇನು ಅನ್ನೋ ಬಗ್ಗೆ ಹೇಳಿದ್ದೇವೆ. ಆದ್ರೆ ಮಿತಿಯಲ್ಲಿ , ಸರಿಯಾದ ರೀತಿಯಲ್ಲಿ ಬೀಟ್‌ರೂಟ್ ತಿನ್ನುವುದರಿಂದ ಆರೋಗ್ಯಕ್ಕೆ ಲಾಭವೂ ಆಗಲಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆ ಇದ್ದಲ್ಲಿ, ಖಂಡಿತ ನೀವು ಬೀಟರೂಟ್ ಸೇವನೆ ಮಾಡಲೇಬೇಕು. ಯಾಕಂದ್ರೆ ಬೀಟ್‌ರೂಟ್ ಸೇವನೆಯಿಂದ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚುತ್ತದೆ. ಮತ್ತು ಹಿಮೋಗ್ಲೋಬಿನ್ ಹೆಚ್ಚಳದಿಂದ ನೀವು ಆರೋಗ್ಯವಾಗಿ, ಗಟ್ಟಿಮುಟ್ಟಾಗಿರುತ್ತೀರಿ. ಈ ಕಾರಣಕ್ಕಾಗಿಯೇ ಗರ್ಭಿಣಿಯರು ಹಿಮೋಗ್ಲೋಬಿನ್ ಹೆಚ್ಚಳಕ್ಕಾಗಿ ಬೀಟ್‌ರೂಟ್ ತಿನ್ನಬೇಕು ಅನ್ನೋದು. ಇದರಿಂದ ತಾಯಿ ಮತ್ತು ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ.

ಚಳಿಗಾಲದಲ್ಲಿ ಈ ಸಲಹೆಗಳನ್ನು ಪಾಲಿಸಿದರೆ ನಿಮ್ಮ ತ್ವಚೆಯು ಮೃದುವಾಗಿರುತ್ತದೆ..!

ಇನ್ನು ಎರಡನೇಯದಾಗಿ ನೀವು ನಿಯಮಿತವಾಗಿ ಬೀಟ್‌ರೂಟ್ ಸೇವನೆ ಮಾಡುವುದರಿಂದ ನಿಮ್ಮ ತ್ವಚೆಯ ಗ್ಲೋ ಹೆಚ್ಚುತ್ತದೆ. ಅದರಲ್ಲೂ ಹಸಿ ಬೀಟ್‌ರೂಟ್ ಸೇವನೆ ಅಥವಾ ಬೀಟ್‌ರೂಟ್ ಜ್ಯೂಸ್ ಮಾಡಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ನಿಮ್ಮ ತ್ವಚೆ ಸಖತ್ ಗ್ಲೋ ಆಗುತ್ತದೆ. ಅಲ್ಲದೇ ಇದರಿಂದ ಕೂದಲ ಆರೋಗ್ಯವೂ ಹೆಚ್ಚುತ್ತದೆ. ನಿಮಗೆ ಗಟ್ಟಿಮುಟ್ಟಾದ, ಶೈನಿ ಕೂದಲು ಬೇಕೆಂದಲ್ಲಿ, ನೀವು ಬೀಟ್‌ರೂಟ್ ಜ್ಯೂಸ್ ಸೇವಿಸಿ. ಕೆಲವರು ಕೂದಲ ಹೊಳಪು ಹೆಚ್ಚಿಸಲು ಬೀಟ್‌ರೂಟ್ ರಸವನ್ನು ಕೂದಲಿಗೆ ಹಚ್ಚುತ್ತಾರೆ.

ಹಾಲು ಕುಡಿಯುವುದರಿಂದ ಮೊಡವೆಗಳು ಬರುತ್ತವೆಯೇ…?

ಇನ್ನು ನಿಮ್ಮ ಹಲ್ಲು ಮತ್ತು ಮೂಳೆ ಗಟ್ಟಿಮುಟ್ಟಾಗಿರಬೇಕು ಅಂದ್ರೆ ನೀವು ಬೀಟ್‌ರೂಟ್ ಸೇವನೆ ಮಾಡಬೇಕು. ಬೀಟ್‌ರೂಟ್ ಸೇವನೆಯಿಂದ ಹಲ್ಲು ಕ್ಲೀನ್ ಆಗಿರುವುದಲ್ಲದೇ, ಗಟ್ಟಿಮುಟ್ಟಾಗಿರುತ್ತದೆ. ಇನ್ನು ಹೆಣ್ಣು ಮಕ್ಕಳಿಗೆ ಬಿಳಿ ಪದರ ಹೋಗಿ, ಮೂಳೆ ನೋವು ಬರುತ್ತದೆ. ಅಂಥವರು ಬೀಟ್‌ರೂಟ್ ಸೇವನೆ ಮಾಡಬೇಕು. ಇನ್ನು ನಿಮ್ಮ ಮನೆಯಲ್ಲಿ ಪುಟ್ಟ ಮಕ್ಕಳಿದ್ದರೆ, ಅವರಿಗೆ ಹಲ್ಲು ಬಂದಿದ್ದು, ಬೀಟ್‌ರೂಟ್ ಸೇವನೆ ಮಾಡುವ ಹಾಗಿದ್ದರೆ, ಅವರಿಗೂ ವಾರದಲ್ಲಿ 2 ಬಾರಿಯಾದರೂ ಬೀಟ್‌ರೂಟ್ ತಿನ್ನಿಸಿದರೆ ಉತ್ತಮ.

- Advertisement -

Latest Posts

Don't Miss