Wednesday, October 23, 2024

Latest Posts

ಹಸಿ ಈರುಳ್ಳಿಯಲ್ಲಿದೆ ಅದ್ಭುತ ಆರೋಗ್ಯ ಲಾಭಗಳು..

- Advertisement -

ಹಳ್ಳಿ ಕಡೆ ಜನ ಊಟದೊಂದಿಗೆ ಹಸಿ ತರಕಾರಿ ತಿನ್ನುತ್ತಾರೆ. ಈರುಳ್ಳಿ, ಸೌತೇಕಾಯಿ, ಮೂಲಂಗಿ ಇತ್ಯಾದಿ ತಿನ್ನುತ್ತಾರೆ. ಈ ಕಾರಣಕ್ಕಾಗಿಯೇ ಅವರು ಆರೋಗ್ಯಕರವಾಗಿ, ಗಟ್ಟಿಮುಟ್ಟಾಗಿರುತ್ತಾರೆ. ಹಾಗಾದ್ರೆ ಹಸಿ ಈರುಳ್ಳಿ ತಿನ್ನುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳೇನು ಅಂತಾ ತಿಳಿಯೋಣ ಬನ್ನಿ..

ರೋಗ ನಿರೋಧಕ ಶಕ್ತಿ ಹೆಚ್ಚಬೇಕಂದ್ರೆ ಹಸಿ ಈರುಳ್ಳಿ ಸೇವಿಸಬೇಕು. ಕೆಲವರು ಶೀತವಾದಾಗ, ಜ್ವರ ಬಂದಾಗ, ಗಂಜಿ ಊಟದೊಂದಿಗೆ ಈರುಳ್ಳಿ ಸೇವನೆ ಮಾಡುತ್ತಾರೆ. ಯಾಕಂದ್ರೆ ಈರುಳ್ಳಿ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಬೇಗ ಜ್ವರ ಕಡಿಮೆಯಾಗುತ್ತದೆ.

ರಾತ್ರಿ ಪಾದಕ್ಕೆ ತೆಂಗಿನೆಣ್ಣೆ ಮಸಾಜ್ ಮಾಡಿ.. ಆರೋಗ್ಯದಲ್ಲಾಗುವ ಬದಲಾವಣೆ ನೀವೇ ನೋಡಿ..

ಈರುಳ್ಳಿ ಸೇವನೆಯಿಂದ ಮಧುಮೇಹ ನಿಯಂತ್ರಣವಾಗುತ್ತದೆ. ಕ್ಯಾನ್ಸರ್ ತಡೆಗಟ್ಟುವ ಶಕ್ತಿ ಈರುಳ್ಳಿಯಲ್ಲಿದೆ. ಅಲ್ಲದೇ ನೀವು ನಿಯಮಿತವಾಗಿ ಈರುಳ್ಳಿ ತಿನ್ನುವುದರಿಂದ ನಿಮ್ಮ ತ್ವಚೆ ಸುಂದರವಾಗಿರುತ್ತದೆ. ನೀವು ವಯಸ್ಸಾದಂತೆ ತಡೆಗಟ್ಟಬೇಕಂದ್ರೆ ಪ್ರತಿದಿನ ಊಟದೊಂದಿಗೆ ಹಸಿ ಈರುಳ್ಳಿ ಸೇವಿಸಿ.

ಕಿತ್ತಳೆ ಹಣ್ಣಷ್ಟೇ ಅಲ್ಲ, ಅದರ ಸಿಪ್ಪೆ ಕೂಡ ಆರೋಗ್ಯಕರ..

ಈರುಳ್ಳಿ ಸೇವನೆಯಿಂದ ಜೀರ್ಣಕ್ರಿಯೆ ಸಮಸ್ಯೆಗೆ ಮುಕ್ತಿ ಸಿಗುತ್ತದೆ. ತಿಂದ ಅನ್ನ ಸುಲಭವಾಗಿ ಜೀರ್ಣವಾಗುತ್ತದೆ. ಪುರುಷರಲ್ಲಿ ಶಕ್ತಿ ಕಡಿಮೆ ಇದ್ದಲ್ಲಿ ಈರುಳ್ಳಿ ಸೇವನೆ ಮಾಡಬೇಕು. ಇದರಿಂದ ಪುರುಷತ್ವ ಹೆಚ್ಚಾಗುತ್ತದೆ. ಇನ್ನು ಆಯುರ್ವೇದದ ಪ್ರಕಾರ, ಈರುಳ್ಳಿ ಸೇವನೆ ಆರೋಗ್ಯಕ್ಕೆ ತುಂಬಾ ಉತ್ತಮ. ಹಳ್ಳಿ ಕಡೆ ಹೆಚ್ಚಿನ ಜನ ಹಸಿ ಈರುಳ್ಳಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಅವರು ಕೊನೆಯವರೆಗೂ ಯಾವುದೇ ಖಾಯಿಲೆಗೆ ಒಳಗಾಗದ ಉದಾಹರಣೆಗಳಿದೆ.

- Advertisement -

Latest Posts

Don't Miss