ಒಂದೇ ಬದಿ ತುಂಬ ಹೊತ್ತು ಕುಳಿತುಕೊಳ್ಳಬಾರದು ಅಂತಾ ಹೇಳಲಾಗತ್ತೆ. ಯಾಕಂದ್ರೆ ಗಂಟೆಗಟ್ಟಲೇ ಒಂದೇ ಬದಿ ಕುಳಿತು ಕೆಲಸ ಮಾಡುವವರಿಗೆ ಹೆಚ್ಚಾಗಿ ಬೊಜ್ಜು ಬೆಳೆಯುತ್ತದೆ. ಆರೋಗ್ಯ ಸಮಸ್ಯೆಗಳಾಗತ್ತೆ. ಹಾಗಾದ್ರೆ ಒಂದೇ ಕಡೆ ತುಂಬ ಹೊತ್ತು ಕುಳಿತು ಕೆಲಸ ಮಾಡಿದ್ರೆ, ಯಾವ ಯಾವ ಆರೋಗ್ಯ ಸಮಸ್ಯೆ ಬರತ್ತೆ ಅಂತಾ ತಿಳಿಯೋಣ ಬನ್ನಿ..
ತುಂಬ ಹೊತ್ತು ಒಂದೇ ಜಾಗದಲ್ಲಿ ಕುಳಿತುಕೊಂಡರೆ, ಬೊಜ್ಜು ಬೆಳೆಯುತ್ತದೆ. ಬೊಜ್ಜು ಬೆಳೆದಾಗ, ಹೃದಯ ಸಮಸ್ಯೆ ಬರುತ್ತದೆ. ಡಯಾಬಿಟೀಸ್ ಬರುವ ಸಾಧ್ಯತೆ ಇದೆ. ಅಲ್ಲದೇ ಬೊಜಜ್ಜು ಅನ್ನುವ ಒಂದು ರೋಗ ಬಂದ್ರೆ, ಅದರ ಜೊತೆಗೆ ನೂರಾರು ರೋಗಗಳು ಬರುತ್ತದೆ ಅಂತಾರೆ ವೈದ್ಯರು. ಹಾಗಾಗಿ ಯಾವುದೇ ಕಾರಣಕ್ಕೂ ಬೊಜ್ಜು ನಿಮ್ಮ ಬಳಿ ಸುಳಿಯದಂತೆ ನೋಡಿಕೊಳ್ಳಿ.
ಅಲ್ಲದೇ, ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ. ಇದರಿಂದ ಕಾಲು ನೋವು, ಸಂಧಿವಾತ ಬರುವ ಸಾಧ್ಯತೆ ಇದೆ. ವಯಸ್ಸಾದ ಮೇಲೆ ಬೆನ್ನು ನೋವು, ಸೊಂಟ ನೋವು ಬರುವ ಸಾಧ್ಯತೆ ಇದೆ. ಅರ್ಧ ಗಂಟೆಯಗೊಮ್ಮೆಯಾದರೂ, ಸ್ವಲ್ಪ ನಡೆದಾಡಿಕೊಂಡು ಬನ್ನಿ, ತುಂಬ ಹೊತ್ತು ಕುಳಿತುಕೊಂಡೇ ಕೆಲಸ ಮಾಡಲೇಬೇಕು ಎಂದಿದ್ರೆ, ಚೆನ್ನಾಗಿ ಹಣ್ಣು, ತರಕಾರಿ, ಜ್ಯೂಸ್, ಎಳನೀರು ಕುಡಿಯಲೇಬೇಕು. ಪದೇ ಪದೇ ನೀರು ಕುಡಿಯಲೇಬೇಕು. ಇಲ್ಲದಿದ್ದರೆ, ಆರೋಗ್ಯ ಹಾಳಾಗುತ್ತದೆ.
ಮಕ್ಕಳಲ್ಲಿ ಕ್ಯಾಲ್ಶಿಯಂ ಕಡಿಮೆ ಇದ್ದರೆ ಹೇಗೆ ಗೊತ್ತಾಗತ್ತೆ..? ಇದರ ಲಕ್ಷಣ ಮತ್ತು ಪರಿಹಾರವೇನು..?