Tuesday, October 7, 2025

Latest Posts

ಹಸ್ತ ಮೈಥುನ ಮಾಡುವುದು ಒಳ್ಳೆಯದ್ದೋ..? ಕೆಟ್ಟದ್ದೋ..?

- Advertisement -

Health Tips: ವೈದ್ಯರಾದ ಡಾ.ಆಂಜೀನಪ್ಪಾ ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಹೇಳಿದ್ದಾರೆ. ಚಿಕಿತ್ಸೆ ಪಡೆಯುವ ರೀತಿ. ರೋಗ ಲಕ್ಷಣಗಳ ಬಗ್ಗೆ ವಿವರಿಸಿದ್ದಾರೆ. ಅದೇ ರೀತಿ ಇಂದು ಪುರುಷರ ಸಮಸ್ಯೆ ಬಗ್ಗೆ ಆಂಜೀನಪ್ಪಾ ವಿವರಿಸಿದ್ದಾರೆ.

ವೈದ್ಯರ ಪ್ರಕಾರ, ಹಸ್ತಮೈಥುನ ಮಾಡಿಕೊಳ್ಳುವುದು ಒಂದು ಸಹಜ ಪ್ರಕ್ರಿಯೆ. ಆದರೆ ಕೆಲವರು ಪದೇ ಪದೇ ಹಸ್ತಮೈಥುನ ಮಾಡಿಕೊಂಡಾಗ ಡಿಪ್ರೆಶನ್‌ಗೆ ಒಳಗಾಗುತ್ತಾರೆ. ಏಕೆಂದರೆ, ಪದೇ ಪದೇ ಹಸ್ತಮೈಥುನ ಮಾಡಿಕೊಂಡರೆ, ಮುಂದೆ ಮಕ್ಕಳಾಗದಿರಬಹುದು ಎಂಬ ಚಿಂತೆ ಕಾಡತೊಡಗುತ್ತದೆ. ಅಲ್ಲದೇ, ಪುರುಷತ್ವದ ಸಮಸ್ಯೆ ಬರಬಹುದು ಎಂಬ ಭಯವೂ ಇರುತ್ತದೆ. ಹಾಗಾಗಿ ಹಸ್ತಮೈಥುನದ ಬಗ್ಗೆ ಹಲವರಿಗೆ ಕನ್‌ಫ್ಯೂಶನ್‌ಗಳಿದೆ.

ಹದಿಹರೆಯದ ವಯಸ್ಸಿನಲ್ಲಿ ಹಸ್ತಮೈಥುನ ಮಾಡಿಕೊಳ್ಳುವ ಬಯಕೆ ಶುರುವಾಗುತ್ತದೆ. ಇದು ಸ್ವಾಭಾವಿಕ. ಆದರೆ ನಿಗ್ರಹ ಹೊಂದರೆ, ಪದೇ ಪದೇ ಹಸ್ತ ಮೈಥುನ ಮಾಡಿಕೊಳ್ಳುವವರು, ಖಿನ್ನತೆಗೆ ಒಳಗಾಗುತ್ತಾರೆ. ಮುಂದಿನ ಭವಿಷ್ಯದ ಬಗ್ಗೆ ಚಿಂತಿಸುತ್ತಾರೆ. ಆದರೆ ವೈದ್ಯರು ಹೇಳುವ ಪ್ರಕಾರ, ಈ ರೀತಿ ಏನೂ ಆಗುವುದಿಲ್ಲ.

ಇದರಿಂದ ವೀರ್ಯ ಉತ್ಪತ್ತಿಯಾಗುವುದಿಲ್ಲ ಅನ್ನೋ ಮಾತು ಸತ್ಯಕ್ಕೆ ದೂರವಾಗಿದ್ದು. ಪುರುಷ ಬದುಕಿರುವವರೆಗೂ ಪುರುಷನ ದೇಹದಲ್ಲಿ ವೀರ್ಯ ಉತ್ಪತ್ತಿಯಾಗುತ್ತಲೇ ಇರುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ..

- Advertisement -

Latest Posts

Don't Miss