Health Tips: ಕಿಡ್ನಿ ಆರೋಗ್ಯದ ಬಗ್ಗೆ ನಾವು ನಿಮಗೆ ಈಗಾಗಲೇ ಸಾಕಷ್ಟು ವಿಚಾರವನ್ನು ಹೇಳಿದ್ದೇವೆ. ಕಿಡ್ನಿ ಸಮಸ್ಯೆ ಬಂದಾಗ ಏನು ಮಾಡಬೇಕು..? ಕಿಡ್ನಿ ಸಮಸ್ಯೆ ಬರಬಾರದು ಅಂದ್ರೆ ಏನು ಮಾಡಬೇಕು..? ಕಿಡ್ನಿ ಸಮಸ್ಯೆ ಬಂದಾಗ ಯಾವ ರೀತಿಯ ಚಿಕಿತ್ಸೆ ಪಡೆಯಬೇಕು ಅಂತಾ ವೈದ್ಯರು ನಿಮಗೆ ಈಗಾಗಲೇ ವಿವರಿಸಿದ್ದಾರೆ. ಇದೀಗ ಕಿಡ್ನಿ ಫೇಲ್‌ಗೆ ಇನ್ಸೂರೆನ್ಸ್ ಮಾಡಿಸಬಹುದಾ ಅನ್ನೋ ಪ್ರಶ್ನೆಗೆ ವೈದ್ಯರೇ ಉತ್ತರಿಸಿದ್ದಾರೆ ನೋಡಿ.
ಇಂದಿನ ಕಾಲದಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಬಂಡವಾಳ ಹೂಡಬೇಕಾದ ಸ್ಥಳವೆಂದರೆ ನಮ್ಮ ದೇಹ. ನಾವು ಆರೋಗ್ಯಕರ ಆಹಾರವನ್ನು ಬಂಡವಾಳವಾಗಿ ಹಾಕಿದ್ರೆ, ಆರೋಗ್ಯವೆಂಬ ಲಾಭ ನಮಗೆ ಸಿಗುತ್ತದೆ. ಅದೇ ರೀತಿ ಅಪ್ಪಿ ತಪ್ಪಿ ಆರೋಗ್ಯ ಹಾಳಾದಾಗ, ಅದನ್ನು ಸರಿಪಡಿಸಿಕೊಳ್ಳಬೇಕು ಅಂದ್ರೆ, ಇನ್ಸೂರೆನ್ಸ್ ಮಾಡಿಸೋದು ಕೂಡ ಅಷ್ಟೇ ಮುಖ್ಯ. ಹಾಗಾಗಿ ಇನ್ಸೂರೆನ್ಸ್ ಖಂಡಿತವಾಗಿ ಮಾಡಿಸಿಕೊಳ್ಳಿ ಅಂತಾರೆ ವೈದ್ಯರು.
ಕೆಲವರು ಖಾಯಿಲೆ ಗೊತ್ತಾದ ಬಳಿಕ ಇನ್ಶೂರೆನ್ಸ್ ಮಾಡಿಸಲು ಹೋಗುತ್ತಾರೆ. ಆಗ ತೊಂದರೆಯಾಗುತ್ತದೆ. ಹಾಗಾಗಿ ಖಾಯಿಲೆ ಬರುವ ಮುನ್ನವೇ ಇನ್ಸೂರೆನ್ಸ್ ಮಾಡಿಸಿಬಿಡಿ. ನಾಳೆಯದ್ದು ನಾಳೆ ನೋಡಿದರಾಯಿತು ಎಂದು ಕೂತರೆ, ಸಮಸ್ಯೆ ಬುಡಕ್ಕೆ ಬಂದಾಗ, ಕಷ್ಟ ಅನುಭವಿಸಬೇಕಾಗುತ್ತದೆ. ಅಂಥ ಕಷ್ಟ ಪಡುವ ಬದಲು, ದುಡ್ಡು ಹೋದರೆ ಹೋಯಿತು ಎಂದು ಇನ್ಸೂರೆನ್ಸ್ ಮಾಡಿಸುವುದು, ಇಂದಿನ ಕಾಲದಲ್ಲಿ ತುಂಬಾ ಮುಖ್ಯ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.