ನಾವು ತಿನ್ನುವ ಆಹಾರದಲ್ಲಿ ಮಿಸ್ಟೇಕ್ ಆಗಿಯೋ, ಅಥವಾ ತಿಂದ ಆಹಾರ ಸರಿಯಾಗಿ ಜೀರ್ಣವಾಗದೆಯೋ, ಅಥವಾ ದೇಹದಲ್ಲಿ ಉಷ್ಣ ಹೆಚ್ಚಾದ ಕಾರಣಕ್ಕೋ, ಸರಿಯಾಗಿ ಮಲ ವಿಸರ್ಜನೆಯಾಗೋದಿಲ್ಲಾ. ಹೀಗೆ ಮಲ ಬದ್ಧತೆಯಾಗಬಾರದು ಅಂದ್ರೆ ಕೆಲ ಟಿಪ್ಸ್ ಅನುಸರಿಸಬಾರದು. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಮಲಬದ್ಧತೆಯನ್ನ ದೂರ ಮಾಡಲು ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮತ್ತು ಮಲಗುವ ಮುನ್ನ ಬೆಚ್ಚಗಿನ ನೀರು ಕುಡಿಯಬೇಕು. ಇದರೊಂದಿಗೆ ತಿಂಡಿ ತಿನ್ನುವಾಗ ಟೀ, ಕಾಫಿ ಕುಡಿಯುವ ಬದಲು, ಫ್ರೆಶ್ ಜ್ಯೂಸ್ ತಯಾರಿಸಿ ಕುಡಿಯಿರಿ. ಊಟ ಮಾಡುವಾಗ ಮಜ್ಜಿಗೆ ಕುಡಿಯಿರಿ. ಸಂಜೆ ಹಾಲು ಕುಡಿಯಿರಿ. ರಾತ್ರಿ ಸೂಪ್ ಕುಡಿಯಿರಿ. ಹೀಗೆ ದ್ರವ ಪದಾರ್ಥ ಸೇವನೆ ಹೆಚ್ಚು ಮಾಡಿದಷ್ಟು ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ.
ವಿಚಿತ್ರ ಸಂಗತಿ ಏನಂದ್ರೆ ಸಿಟ್ಟು ಮಾಡುವವರಿಗೆ, ಬರೀ ಋಣಾತ್ಮಕ ವಿಚಾರ ಮಾಡುವವರಿಗೂ ಮಲಬದ್ಧತೆ ಸಮಸ್ಯೆ ಬರುತ್ತದೆ. ಹಾಗಾಗಿ ಸದಾ ಲವಲವಿಕೆಯಿಂದ ಇರಿ. ಇನ್ನು ತಿಂದ ಅನ್ನ ಸರಿಯಾಗಿ ಜೀರ್ಣವಾದಾಗ ಮಾತ್ರ ಮಲ ವಿಸರ್‌ಜನೆ ಸರಿಯಾಗಿ ಆಗುತ್ತದೆ. ಹಾಗಾಗಿ ಅನ್ನವನ್ನ ಸರಿಯಾಗಿ ಅಗಿದು ತಿನ್ನಿ. ಅರ್ಜೆಂಟ್ ಆಗಿ ಊಟ ಮಾಡುವುದರಿಂದ ತಿಂದ ಆಹಾರ ಜೀರ್ಣವಾಗುವುದಿಲ್ಲ. ಹಾಗಾಗಿ ಯಾವುದೇ ಆಹಾರ ತಿನ್ನುವಾಗಲೂ, ಆ ಆಹಾರವನ್ನ ಸರಿಯಾಗಿ ಅಗಿದು ತಿನ್ನಿ..
ಟೇಸ್ಟಿಯಾದ ಗೋಧಿ ದೋಸೆ ಮಾಡೋದು ಹೇಗೆ ಗೊತ್ತಾ..?
ಅಲ್ಲದೇ ಕೆಲವರಿಗೆ ಟಾಯ್ಲೆಟ್‌ಗೆ ಕೂತಾಗಲೂ ಮೊಬೈಲ್ ನೋಡುವ, ಪೇಪರ್ ಓದುವ ಅಭ್ಯಾಸವಿರುತ್ತದೆ. ಅಂಥ ಅಭ್ಯಾಸವನ್ನು ಬಿಟ್ಟುಬಿಡಿ., ಇದರಿಂದಲೇ ಆರೋಗ್ಯ ಸಮಸ್ಯೆ ಎದುರಾಗೋದು. ಇದರ ಜೊತೆಗೆ ನೀವು ಸೇವಿಸುವ ಆಹಾರ ಆರೋಗ್ಯವಾಗಿರಲಿ. ಮಿತವಾಗಿರಲಿ. ಹೊರಗಿನ ತಿಂಡಿ ತಿನ್ನುವುದಕ್ಕಿಂತ, ಮನೆಯಲ್ಲೇ ತಯಾರಿಸಿದ ತಿಂಡಿ ತಿನ್ನುವುದು ಉತ್ತಮ. ನೀರನ್ನು ಕಾಯಿಸಿ, ತಣಿಸಿಯೇ ಕುಡಿಯಿರಿ.