Friday, May 17, 2024

Latest Posts

ಭೀಮನು ಹೇಗೆ ಇಷ್ಟು ಬಲಶಾಲಿಯಾದ..?

- Advertisement -

ಮಹಾಭಾರತದಲ್ಲಿ ಬರುವ ಕಥೆಗಳಲ್ಲಿ ಭೀಮ ಬಲಶಾಲಿಯಾಗಿದ್ದ. ಪಾಂಡವರಲ್ಲಿ ನಾಲ್ವರು ತಿನ್ನುವ ಆಹಾರವನ್ನ ಇವನೊಬ್ಬನೇ ತಿನ್ನುತ್ತಿದ್ದ. ಹಾಗಾಗಿ ಅವನಲ್ಲಿ ಹತ್ತು ಸಾವಿರ ಆನೆಗಳ ಶಕ್ತಿ ಇತ್ತು. ಆದರೆ ಭೀಮನಿಗೆ ಅಷ್ಟೊಂದು ಬಲ ಬಂದಿದ್ದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಪಾಂಡುರಾಜನ ಮರಣವಾದ ಮೇಲೆ, ಕುಂತಿ ಮತ್ತು ಪಾಂಡವರು ಕಾಡಿನಲ್ಲೇ ವಾಸಿಸುತ್ತಿದ್ದರು. ಈ ವಿಷಯ ತಿಳಿದ ಭೀಷ್ಮ, ಪಾಂಡವರನ್ನು ಮತ್ತು ಕುಂತಿಯನ್ನು ಹಸ್ತಿನಾಪುರಕ್ಕೆ ಕರೆದುಕೊಂಡು ಬಂದರು. ಭೀಮ ವಾಯುಪುತ್ರನಾದ್ದರಿಂದ, ಮೊದಲೆ ಬಲಶಾಲಿಯಾಗಿದ್ದ. ಚಿಕ್ಕಂದಿನಲ್ಲಿ ಪಾಂಡವರು ಕೌರವರು ಒಟ್ಟಿಗೆ ಆಟವಾಡುತ್ತಿದ್ದರು.

ಮರಣಕ್ಕೂ ಮುನ್ನ ಭೀಷ್ಮ ಕರ್ಣನ ಬಳಿ ಹೇಳಿದ ಸತ್ಯಗಳಿವು..

ಈ ವೇಳೆ ಭೀಮ ಎಲ್ಲ ಆಟದಲ್ಲೂ ಕೌರವರನ್ನು ಸೋಲಿಸುತ್ತಿದ್ದ. ಆದರೂ ಕೌರವರು ಮತ್ತು ಪಾಂಡವರು ಅನ್ಯೋನ್ಯವಾಗಿದ್ದರು. ಆದರೆ ಶಕುನಿ ಭೀಮನ ವಿರುದ್ಧ ದುರ್ಯೋಧನನ ಮನಸ್ಸಿನಲ್ಲಿ ದ್ವೇಷ ತುಂಬಿದ. ನೀನು ಪಾಂಡವರನ್ನು ಈ ಅರಮನೆಯಿಂದ ದೂರವಿರಿಸು. ಇಲ್ಲದಿದ್ದಲ್ಲಿ, ಅವರು ನಿನ್ನ ಸಿಂಹಾಸನವನ್ನು ಕಸಿದುಕೊಳ್ಳುತ್ತಾರೆಂದು ಹೇಳಿದ.

ಹಾಗಾಗಿ ದುರ್ಯೋಧನನಿಗೆ ಪಾಂಡವರ ಬಗ್ಗೆ ದ್ವೇಷ ಶುರುವಾಯಿತು. ಭೀಮನನ್ನು ಹತ್ಯೆಗೈದರೆ, ಉಳಿದವರನ್ನ ಸಲೀಸಾಗಿ ಸೋಲಿಸಬಹುದು ಎಂದು ಯೋಚಿಸಿದ. ನದಿಯ ಪಕ್ಕದಲ್ಲಿ ಭೋಜನದ ತಯಾರಿ ಮಾಡಿದ. ಪಾಂಡವರನ್ನು ಆಡಲು ಕರೆದ. ಅಲ್ಲದೇ ಭೀಮನಿಗೆ ವಿಶೇಷ ಭೋಜನ ಮಾಡಿ, ತಿನ್ನಲು ಹೇಳಿದ. ಯಾಕಂದ್ರೆ ಭೀಮನಿಗೆ ತಿನ್ನುವುದೆಂದರೆ ಬಲು ಇಷ್ಟವೆಂದು ದುರ್ಯೋಧನನಿಗೆ ಗೊತ್ತಿತ್ತು.

ಹಾಗಾಗಿ ಭೀಮನ ಊಟದಲ್ಲಿ ವಿಷ ಬೆರೆಸಿದ್ದ. ಅದನ್ನು ತಿಂದು ಭೀಮ ಸತ್ತು ಹೋದರೆ, ಅವನನ್ನು ಅಲ್ಲೇ ಇರುವ ನದಿಗೆ ಬಿಸಾಕಿ ಬರುವ ಯೋಚನೆ ಮಾಡಿದ್ದ. ಅದೇ ರೀತಿ ಭೀಮ ವಿಷಭರಿತವಾದ ಆಹಾರವನ್ನು ತಿಂದು, ಮೂರ್ಛೆ ತಪ್ಪಿದ. ಅವನನ್ನು ದುರ್ಯೋಧನ ಮತ್ತು ದುಶ್ಶಾಸನ ಸೇರಿ ನದಿಗೆ ಬಿಸಾಕಿದರು. ಭೀಮ ಪಾತಾಳಕ್ಕೆ ಹೋದ, ಅಲ್ಲಿ ನಾಗಗಳು ಭೀಮನನ್ನು ಕಚ್ಚತೊಡಗಿದವು. ಇದರಿಂದ ಭೀಮನ ದೇಹದಲ್ಲಿರುವ ವಿಷ ಇಳಿದು ಹೋಯಿತು.

ಹೆಣ್ಣಿನಲ್ಲಿ ಈ 4 ಗುಣಗಳಿದ್ದರೆ, ಆಕೆಯ ಜೀವನ ಅತ್ಯುತ್ತಮವಾಗಿರತ್ತೆ..

ಭೀಮನಿಗೆ ಎಚ್ಚರವಾದ ತಕ್ಷಣ, ಹಾವುಗಳನ್ನು ನೋಡಿ, ಭೀಮ ಹೆದರಿ, ಅವುಗಳಿಗೆ ಹೊಡೆಯ ತೊಡಗಿದ. ಇದನ್ನು ನೋಡಿದ ನಾಗರಾಜ, ತಕ್ಷಣ ಆ ಸ್ಥಳಕ್ಕೆ ಬಂದು, ಭೀಮನನ್ನು ತಡೆದ. ನಂತರ ಭೀಮ ಹೇಗೆ ಈ ನಾಗಲೋಕಕ್ಕೆ ಬಂದ ಎಂದು ಕೇಳಿದಾಗ, ತನಗೆ ದುರ್ಯೋಧನ ನೀಡಿದ ಭೋಜನದಿಂದ ಮತಿ ಇಲ್ಲದಂತಾಗಿತ್ತು. ನಂತರ ಎಚ್ಚರವಾದಾಗ ನಾನು ನಾಗಲೋಕದಲ್ಲಿದ್ದೆ ಎಂದು ಹೇಳುತ್ತಾನೆ ಭೀಮ.

ನಂತರ ವಾಸುಕಿ ಭೀಮನಿಗೆ ಒಂದು ಚಿಕ್ಕ ಬಟ್ಟಲಿನಲ್ಲಿ ಶಕ್ತಿಯುತವಾದ ರಸವನ್ನು ಕುಡಿಯಲು ಕೊಡುತ್ತಾನೆ. ಇದನ್ನು ಕುಡಿದ ತಕ್ಷಣ, ಭೀಮನಿಗೆ ಹತ್ತು ಸಾವಿರ ಆನೆಗಳ ಬಲ ಬರುತ್ತದೆ. ನಂತರ ಭೀಮ ಮರಳಿ ಹಸ್ತಿನಾಪುರಕ್ಕೆ ಹೋಗುತ್ತಾನೆ. ಈ ರೀತಿ ಭೀಮನಿಗೆ ಹತ್ತು ಸಾವಿರ ಆನೆಗಳ ಬಲ ಬರುತ್ತದೆ.

- Advertisement -

Latest Posts

Don't Miss