Sunday, September 8, 2024

Latest Posts

ಹೃದಯದ ಆರೋಗ್ಯವನ್ನ ಸರಿಯಾಗಿ ಇಟ್ಟುಕೊಳ್ಳಲು ಟಿಪ್ಸ್..

- Advertisement -

ಹೃದಯ ಆರೋಗ್ಯ ಎಷ್ಟು ಇಂಪಾರ್ಟೆಂಟ್ ಅನ್ನೋದು ಇತ್ತೀಚೆಗೆ ಹಲವರಿಗೆ ಗೊತ್ತಾಗಿದೆ. ಇದಕ್ಕೆ ಕಾರಣ, ಎಷ್ಟೋ ಚಿಕ್ಕ ವಯಸ್ಸಿನವರೆಲ್ಲ ಹಾರ್ಟ್ ಅಟ್ಯಾಕ್ ಆಗಿ ಸಾಯುತ್ತಿದ್ದಾರೆ. ಹಾಗಾಗಿ ಹೃದಯದ ಆರೋಗ್ಯವನ್ನ ಸರಿಯಾಗಿ ಇಟ್ಟುಕೊಳ್ಳುವುದು ತುಂಬಾ ಮುಖ್ಯ. ಹಾಗಾದ್ರೆ ಹೃದಯ ಆರೋಗ್ಯ ಕಾಪಾಡುವ ಟಿಪ್ಸ್ ಯಾವುದು ಅಂತಾ ತಿಳಿಯೋಣ ಬನ್ನಿ..

ಯಾಕೆ ನಾವು ಬ್ರೆಡ್ ತಿನ್ನಬಾರದು ಗೊತ್ತಾ..?

ಮೊದಲನೇಯ ಟಿಪ್ಸ್ ನಿಮ್ಮ ಆಹಾರ ಪದ್ಧತಿ ಸರಿಯಾಗಿ ಇರಲಿ. ನೀವು ಮದ್ಯಪಾನ, ಧೂಮಪಾನ ಸೇವನೆ, ಗುಟ್ಕಾ ಸೇವನೆ, ಅತೀಯಾದ ಜಂಕ್ ಫುಡ್ ಸೇವನೆ, ನಿನ್ನೆ ಮೊನ್ನೆಯ ಆಹಾರವನ್ನು ಫ್ರಿಜ್‌ನಲ್ಲಿಟ್ಟು ಸೇವಿಸುವ ಚಟ ನಿಮಗಿದ್ದರೆ, ಅದನ್ನ ಇಂದೇ ಬಿಟ್ಟುಬಿಡಿ. ಏನೇ ತಿನ್ನುವುದಿದ್ದರೂ, ಫ್ರೆಶ್ ಆಗಿ ತಿನ್ನಿ. ಫ್ರೆಶ್ ಆಗಿರುವ ಫ್ರೂಟ್ ಜ್ಯೂಸ್, ತರಕಾರಿ, ಅಡುಗೆ, ತಿಂಡಿ, ಡ್ರೈಫ್ರೂಟ್ಸ್ ಎಲ್ಲವನ್ನೂ ತಿನ್ನಿ. ಕರಿದ ಆಹಾರ ಲಿಮಿಟ್‌ನಲ್ಲಿ ತಿನ್ನಿ. ಮನೆಯಡುಗೆ ತಿಂದರೆ ಇನ್ನೂ ಉತ್ತಮ. ಉತ್ತಮ ಎಣ್ಣೆಯಿಂದ ಮಾಡಿದ ಅಡುಗೆಯನ್ನೇ ಸೇವಿಸಬೇಕು.

ಎರಡನೇಯ ಟಿಪ್ಸ್ ಪ್ರತಿದಿನ ವ್ಯಾಯಾಮ ಮಾಡುವುದು, ವಾಕಿಂಗ್ ಹೋಗುವುದು ತುಂಬಾ ಮುಖ್ಯ. ಆದ್ರೆ ಅತೀಯಾದ ನಡಿಗೆ ಮತ್ತು ವ್ಯಾಯಮದಿಂದಲೂ ಹಾರ್ಟ್ ಅಟ್ಯಾಕ್ ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತ ಮರಣ ಹೊಂದಿದವರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ವ್ಯಾಯಾಮ ಮಾಡುವಾಗಲೂ ಲಿಮಿಟ್‌ನಲ್ಲೇ ಮಾಡಿ.

ಗರ್ಭಿಣಿಯರು ಈ ಹಣ್ಣು ಮತ್ತು ತರಕಾರಿಯನ್ನು ಸೇವಿಸಬಾರದು..

ಮೂರನೇಯ ಟಿಪ್ಸ್ ಯಾವುದೇ ವಿಷಯಗಳ ಬಗ್ಗೆ ಹೆಚ್ಚು ಟೆನ್ಶನ್ ತೆಗೆದುಕೊಳ್ಳಬೇಡಿ. ಮನೆಯಲ್ಲಿ ನಡೆಯುವ ಜಗಳ, ಆಫೀಸ್ ಟೆನ್ಶನ್ ಇದ್ದರೆ ಕೂಲ್ ಆಗಿ ಹ್ಯಾಂಡಲ್ ಮಾಡಿ, ಯಾಕಂದ್ರೆ ಟೆನ್ಶನ್ ನಮ್ಮ ಆರೋಗ್ಯವನ್ನ ಹಾಳು ಮಾಡುವ ಅಸ್ತ್ರವಾಗಿದೆ. ಈ ಅಸ್ತ್ರಕ್ಕೆ ತಾಳ್ಮೆ, ಸಮಾಧಾನವೇ ಪ್ರತ್ಯಸ್ತ್ರವಾದಾಗ, ನಿಮ್ಮ ಆರೋಗ್ಯವೂ ಅತ್ಯುತ್ತಮವಾಗಿರುತ್ತದೆ.

ನಾಲ್ಕನೇಯ ಟಿಪ್ಸ್, ನಿಮ್ಮ ಫ್ಯಾಮಿಲಿ ಡಾಕ್ಟರ್‌ ಬಳಿ ಕೇಳಿ, ಹೃದಯಕ್ಕೆ ಸಂಬಂಧಿಸಿದ ಔಷಧಿಯನ್ನ ತೆಗೆದುಕೊಳ್ಳಿ. ಆಯುರ್ವೇದದಲ್ಲಿ ಬರುವ ಕೆಲ ಟಾನಿಕ್‌ಗಳು ಹೃದಯದ ಆರೋಗ್ಯವನ್ನ ಚೆನ್ನಾಗಿ ಇಡುತ್ತದೆ. ಆ ಬಗ್ಗೆ ವೈದ್ಯರಲ್ಲಿ ವಿಚಾರಿಸಿ ತೆಗೆದುಕೊಳ್ಳಿ. ಎಲ್ಲಕ್ಕಿಂತ ಮುಖ್ಯವಾಗಿ, ಉತ್ತಮ ಆಹಾರ, ಒಳ್ಳೆಯ ನಿದ್ದೆ, ಖುಷಿ ಖುಷಿಯಾದ ಜೀವನವೇ ಹೃದಯದ ಆರೋಗ್ಯವನ್ನ ಉತ್ತಮವಾಗಿಡುತ್ತದೆ.

- Advertisement -

Latest Posts

Don't Miss