Health Tips: ನಾವು ಜೀವಂತವಿರಲು ಆಕ್ಸಿಜನ್ ಮತ್ತು ಆಹಾರ ಎರಡೂ ತುಂಬ ಮುಖ್ಯ. ಎರಡರಲ್ಲಿ ಒಂದರ ಪೂರೈಕೆ ನಿಂತರೂ, ನಮ್ಮ ಜೀವವೂ ನಿಲ್ಲುತ್ತದೆ. ಅಂಥ ಜೀವ ನಿಲ್ಲದೇ, ಸರಿಯಾಗಿ ಇರಬೇಕು ಅಂದ್ರೆ, ಹೃದಯ ಆರೋಗ್ಯ ಚೆನ್ನಾಗಿರುವುದು ಮುಖ್ಯ. ಇನ್ನು ಹೃದಯದ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ, ರಕ್ತನಾಳದಲ್ಲಿ ರಕ್ತ ಸಂಚಾರ ಸರಿಯಾಗಿ ಆಗಬೇಕು. ಈ ಬಗ್ಗೆ ಡಾ.ಆಂಜೀನಪ್ಪ ವಿವರಿಸಿದ್ದಾರೆ.
ಹೆಚ್ಚು ತೂಕ ಹೊಂದಿರುವವರಿಗೆ ಹೃದಯಾಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಏಕೆಂದರೆ, ಬೊಜ್ಜಿನ ಸಮಸ್ಯೆ ಉಂಟಾದರೆ, ನಮ್ಮ ದೇಹದಲ್ಲಿ ರಕ್ತ ಸಂಚಾರಕ್ಕೆ ಅಡ್ಡಿಯಾಗುತ್ತದೆ. ರಕ್ತ ನಾಳಗಳು ಬ್ಲಾಕ್ ಆಗಿ, ಹೃದಯಕ್ಕೆ ಸರಿಯಾಗಿ ರಕ್ತಸಂಚಾರವಾಗದೇ, ಆಕ್ಸಿಜನ್ ಸಪ್ಲೈ ಆಗದೇ, ಹಾರ್ಟ್ ಅಟ್ಯಾಕ್ ಆಗುವ ಸಂಭವವಿರುತ್ತದೆ.
ಅಲ್ಲದೇ ನಾವು ಆರೋಗ್ಯಕರ ಆಹಾರ, ಆರೋಗ್ಯಕರ ಪೇಯ, ಶುದ್ಧ ನೀರಿನ ಸೇವನೆ ಮಾಡದೇ, ಜಂಕ್ ಫುಡ್ ಸೇವನೆ, ಮಸಾಲೆ ಭರಿತ ಆಹಾರ, ನಾನ್‌ವೆಜ್, ಬೇಕರಿ ತಿಂಡಿ ಹೆಚ್ಚು ತಿಂದರೆ, ನಮ್ಮ ರಕ್ತನಾಳ ತುಕ್ಕು ಹಿಡಿಯಲು ಆರಂಭವಾಗುತ್ತದೆ. ಈ ವೇಳೆಯೇ ಹೃದಯದ ಆರೋಗ್ಯ ಸಂಪೂರ್ಣ ಹಾಳಾಗುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.