Health Tips: ಬೇಸಿಗೆಕಾಲ ಶುರುವಾಗಿದೆ. ಬರೀ ಮಳೆಗಾಲ, ಚಳಿಗಾಲದಲ್ಲಷ್ಟೇ ಅಲ್ಲ. ಬೇಸಿಗೆಯಲ್ಲೂ ಮಾರಕ ರೋಗಗಳು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಬೇಸಿಗೆಯಲ್ಲೂ ನಾವು ನಮ್ಮ ಆರೋಗ್ಯದ ಬಗ್ಗೆ ಗಮನ ಕೊಡುವುದು ತುಂಬಾ ಮುಖ್ಯ. ಆಹಾರ ಸೇವಿಸುವಾಗ, ತಂಪು ಪಾನೀಯಗಳ ಸೇವನೆ ಮಾಡುವಾಗ ನಾವು ಎಚ್ಚರಿಕೆ ವಹಿಸಬೇಕಾಗುತ್ತದೆ. ಬೇಸಿಗೆಯಲ್ಲಿಯೂ ಡೆಂಗ್ಯೂ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಬಗ್ಗೆ ವೈದ್ಯರಾದ ಡಾ.ಪವನ್ ಕುಮಾರ್ ವಿವರಿಸಿದ್ದಾರೆ ನೋಡಿ.
ಡೆಂಗ್ಯೂ ಜ್ವರ ಬರುವ ಮುನ್ನ ಮೈ ಕೈ ನೋವು ಬರುತ್ತದೆ. ಅತೀ ಹೆಚ್ಚು ಬೆನ್ನು ನೋವು ಬರುತ್ತದೆ. ಕಣ್ಣಿನ ಸು್ತ ನೋವು, ಉರಿ, ದೇಹದ ಮೇಲೆ ಸಣ್ಣ ಸಣ್ಣ ಗುಳ್ಳೆಗಳಾಗುವಂಥದ್ದು ಆಗುತ್ತದೆ. ಬಳಿಕ ಜ್ವರ ಬರುತ್ತದೆ. ಹಾಗಾಗಿ ಇಂಥ ಲಕ್ಷಣಗಳು ಇದ್ದಲ್ಲಿ, ಇದನ್ನು ಸಾಮಾನ್ಯ ಜ್ವರವೆಂದು ಕಡೆಗಣೆಸದೇ, ವೈದ್ಯರ ಬಳಿ ಹೋಗಿ, ತಪಾಸಣೆ ನಡೆಸುವುದು ಅತ್ಯಗತ್ಯ.
ಇದರೊಂದಿಗೆ ಮೋಷನ್‌ನಲ್ಲಿ, ವಸಡಿನಲ್ಲಿ ರಕ್ತ ಸೋರುವಂಥದ್ದು ಇಂಥ ಲಕ್ಷಗಳು ಇರುತ್ತದೆ. ಇನ್ನು ಕೆಲವು ಬಾರಿ ಬಿಪಿ ಲೋ ಆಗುತ್ತದೆ. ದೇಹ ನಿರ್ಜಲೀಕರಣವಾಗುತ್ತದೆ. ಪ್ರಜ್ಞೆ ತಪ್ಪುತ್ತದೆ. ಪಿಡ್ಸ್ ಬರುತ್ತದೆ. ಇದೇ ರೀತಿ ಇನ್ನೂ ಹಲವು ಲಕ್ಷಣಗಳು ಕಂಡುಬರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.