Health Tips: ಕಾಯಿಲೆಗಳು ಅನುವಂಶಿಕವಾಗಿ ಬಾರದಂತೆ ತಡೆಗಟ್ಟುವುದು ಹೇಗೆ?

Health Tips: ಹಾರ್ಟ್ ಅಟ್ಯಾಕ್, ಕಿಡ್ನಿ ಸಮಸ್ಯೆ, ಕ್ಯಾನ್ಸರ್ ಸೇರಿ ದೊಡ್ಡ ದೊಡ್ಡ ಖಾಯಿಲೆಗಳು, ಕೆಲ ಆರೋಗ್ಯ ಸಮಸ್ಯೆಗಳು ಬರೀ ನಾವು ಸೇವಿಸುವ ಆಹಾರದಿಂದ ಅಥವಾ ನಮ್ಮ ಜೀವನಶೈಲಿಯಿಂದ ಬರುವುದಿಲ್ಲ. ಬದಲಾಗಿ ಅನುವಂಶಿಕವಾಗಿಯೂ ಖಾಯಿಲೆ ಬರುತ್ತದೆ. ಹಾಗಾದ್ರೆ ಖಾಯಿಲೆಗಳು ಅನುವಂಶಿಕವಾಗಿ ಬಾರದಂತೆ ತಡೆಯುವುದು ಹೇಗೆ ಅಂತಾ ಪಾರಂಪರಿಕ ವೈದ್ಯರಾದ ಡಾ. ಪವಿತ್ರಾ ಅವರು ವಿವರಿಸಿದ್ದಾರೆ ನೋಡಿ.

ತಂದೆ ತಾಯಿಗೆ ಅಥವಾ ಅಜ್ಜಿ ತಾತನಿಗೆ ಇರುವ ಸಮಸ್ಯೆ ಮಕ್ಕಳಿಗೂ ಬರಲೇಬೇಕು ಅಂತೇನಿಲ್ಲ. ಮಕ್ಕಳು, ಮೊಮ್ಮಕ್ಕಳು ಸರಿಯಾಗಿ ಆರೋಗ್ಯ ಕಾಳಜಿ ವಹಿಸಿದರೆ, ಆ ಸಮಸ್ಯೆ ಬರಲು ಸಾಧ್ಯವೇ ಇಲ್ಲ. ಅದಕ್ಕಾಗಿ ಆರೋಗ್ಯಕರ ಜೀವನ ಶೈಲಿ ಅನುಸರಿಸಬೇಕು. ವೈದ್ಯಕೀಯ ತಪಾಾಸಣೆ ಮಾಡಿಸಿ, ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡರೆ, ಅಂಥ ಅನುವಂಶಿಕ ಅನಾರೋಗ್ಯದಿಂದ ಮುಕ್ತಿ ಪಡೆಯಬಹುದು.

ತಾತ, ಮುತ್ತಾತ, ಅಪ್ಪ ಮಾಡುವ ಕೆಲವು ಅನಾರೋಗ್ಯಕರ ತಪ್ಪುಗಳನ್ನು ಮಾಡಿದಾಗ ಮಾತ್ರ, ಅನುವಂಶಿಕ ಖಾಯಿಲೆ ಬರುತ್ತದೆ. ಹಿರಿಯರು ತೆಗೆದುಕೊಳ್ಳುವ ಅನಾರೋಗ್ಯಕರ ಆಹಾರವನ್ನು ನೀವು ಸೇವಿಸಬಾರದು. ಅವರು ಅನುಸರಿಸುತ್ತಿದ್ದ ಜೀವನಶೈಲಿಯನ್ನು ನೀವು ಅನುಸರಿಸದೇ, ಹೊತ್ತಿಗೆ ಸರಿಯಾಗಿ ಆರೋಗ್ಯಕರ ಆಹಾರ ಸೇವನೆ, ಶುದ್ಧ ನೀರಿನ ಸೇವನೆ, ಚೆನ್ನಾಗಿ ತೊಳೆದು ಸ್ವಚ್ಛ ಮಾಡಿದ ತರಕಾರಿ, ಸೊಪ್ಪು, ಹಣ್ಣು ಸೇವನೆ ಮಾಡಿದರೆ, ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.

ಜೊತೆಗೆ ವಾಕಿಂಗ್, ಯೋಗ, ನಿದ್ದೆ ಎಲ್ಲವೂ ಸರಿಯಾಗಿದ್ದರೆ, ಆರೋಗ್ಯ ಚೆನ್ನಾಗಿರುತ್ತದೆ. ಯಾವ ರೋಗ ಕೂಡ ನಿಮ್ಮ ಬಳಿ ಸುಳಿಯುವುದಿಲ್ಲ ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

About The Author