Sunday, September 8, 2024

Latest Posts

ಚಳಿಗಾಲದಲ್ಲಿ ಖಂಡಿತ ಕುಡಿಯಿರಿ ಈ ಹೆಲ್ದಿ ಡ್ರಿಂಕ್..

- Advertisement -

ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಬೇಕು ಅಂತಾ ವೈದ್ಯರು ಹೇಳ್ತಾರೆ. ಅಂದ್ರೆ ಬಿಸಿ ಬಿಸಿ ಪದಾರ್ಥಗಳನ್ನ ತಿನ್ನಬೇಕು. ಹೆಚ್ಚು ಉಷ್ಣವಲ್ಲದಿದ್ದರೂ, ಕೊಂಚ ಉಷ್ಣ ಪದಾರ್ಥ ತಿನ್ನಬೇಕು. ಇದರಿಂದ ದೇಹದಲ್ಲಿ ಉಷ್ಣ ಮತ್ತು ತಂಪಿನ ಪ್ರಮಾಣ ಸಮವಾಗಿದ್ದು, ಆರೋಗ್ಯ ಉತ್ತಮವಾಗಿರುತ್ತದೆ ಅಂತಾ ಹೇಳಲಾಗತ್ತೆ. ಹಾಗಾಗಿ ನಾವಿಂದು ಹೆಲ್ದಿ ಡ್ರಿಂಕ್ ತಯಾರು ಮಾಡೋದು ಹೇಗೆ..? ಅದಕ್ಕೆ ಬೇಕಾಗಿರುವ ಸಾಮಗ್ರಿಗಳೇನು ಅಂತಾ ತಿಳಿಯೋಣ ಬನ್ನಿ..

ಚಳಿಗಾಲದಲ್ಲಿ ತಣ್ಣೀರು ಕುಡಿಯುತ್ತಿದ್ದೀರಾ..? ಆದರೆ ಇದು ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ..!

ಬೇಕಾಗುವ ಸಾಮಗ್ರಿ: 10 ಗೇರುಬೀಜ, 10 ಬಾದಾಮಿ, 10 ಪಿಸ್ತಾ, 10 ಒಣ ಖರ್ಜೂರ, ಕಾಲು ಗ್ಲಾಸ್ ನೀರು, ಮುಕ್ಕಾಲು ಗ್ಲಾಸ್ ಹಾಲು, ಚಿಕ್ಕ ತುಂಡು ಚಕ್ಕೆ, ಚಿಟಿಕೆ ಏಲಕ್ಕಿ ಪುಡಿ, ಮತ್ತು ಚಿಟಿಕೆ ಅರಿಶಿನ.

ಮಾಡುವ ವಿಧಾನ: ಕೊಂಚ ಬಿಸಿ ಹಾಲಿನಲ್ಲಿ ಖರ್ಜೂರವನ್ನು ಅರ್ಧ ಗಂಟೆ ನೆನೆಸಿಡಿ. ನಂತರ ಖರ್ಜೂರದ ಬೀಜ ತೆಗೆದು, ಖರ್ಜೂರದ ಪೇಸ್ಟ್ ತಯಾರಿಸಿ. ಹಾಲು ಮತ್ತು ನೀರನ್ನು ಮಿಕ್ಸ್ ಮಾಡಿ, ಕುದಿಸಿ. ಇದು ಅರ್ಧ ಕುದಿ ಬಂದ ನಂತರ, ಮಂದ ಉರಿಯಲ್ಲಿ ಹಾಲು ಕಾಯಿಸಿ. ಈ ವೇಳೆ ಚಕ್ಕೆ, ಒಂದು ಸ್ಪೂನ್ ಖರ್ಜೂರದ ಪೇಸ್ಟ್, ಚಿಟಿಕೆ ಏಲಕ್ಕಿ, ಅರಿಶಿನ, ಹಾಕಿ ಮಿಕ್ಸ್ ಮಾಡಿ. ನಂತರ ಗೇರುಬೀಜ, ಬಾದಾಮಿ, ಪಿಸ್ತಾವನ್ನು ತರಿ ತರಿಯಾಗಿ ಪುಡಿ ಮಾಡಿ, ಹಾಲಿಗೆ ಸೇರಿಸಿ, ಚೆನ್ನಾಗಿ ಕುದಿಸಿದರೆ, ಹೆಲ್ದಿ ಡ್ರಿಂಕ್ ರೆಡಿ.

ಲೆಮನ್ ಟೀಯಿಂದ ಲೆಕ್ಕವಿಲ್ಲದಷ್ಟು ಆರೋಗ್ಯಕಾರಿ ಲಾಭಗಳು..!

ಇದಾದ ಬಳಿಕ ಹಾಲಿಗೆ ಹಾಕಿದ್ದ ಚಕ್ಕೆಯನ್ನು ತೆಗಿಯಿರಿ. ನಿಮಗೆ ಇನ್ನೂ ಸಿಹಿ ಬೇಕಾದ್ದಲ್ಲಿ ಬೆಲ್ಲವನ್ನ ಸೇರಿಸಿ. ಈ ಹಾಲನ್ನು ಪ್ರತಿದಿನ ಲಿಮಿಟಿನಲ್ಲಿ ಕುಡಿಯುವುದರಿಂದ, ನಿಮ್ಮ ದೇಹ ಶಕ್ತಿಯುತವಾಗಿರುತ್ತದೆ. ಕೈ ಕಾಲು, ಮೂಳೆ ಗಟ್ಟಿಮುಟ್ಟಾಗಿರುತ್ತದೆ. ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇದು ಸಹಕಾರಿಯಾಗಿದೆ.

- Advertisement -

Latest Posts

Don't Miss