Health Tips: ಪ್ರತೀ ತಂದೆ ತಾಯಿಗೂ ತಮ್ಮ ಮಗು ಸದಾ ಆರೋಗ್ಯವಾಗಿರಲಿ, ನೋಡಲು ಸುಂದರವಾಗಿರಲಿ, ಚುರುಕಾಗಿರಲಿ ಎಂಬ ಆಸೆ ಇರುತ್ತದೆ. ಹಾಗೆ ಆರೋಗ್ಯಕರವಾದ ಮಗು ಜನಿಸಬೇಕು ಅಂದ್ರೆ, ತಾಯಿಯಾದವಳು ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಇನ್ನು ಮಗುವನ್ನು ನೋಡಿದ ತಕ್ಷಣ ಮಗು ಆರೋಗ್ಯಕರವಾಗಿ ಇದೆಯಾ ಇಲ್ಲವಾ ಅನ್ನೋದನ್ನ ನೀವು ತಿಳಿಯಬಹುದು. ಈ ಬಗ್ಗೆ ವೈದ್ಯರು ಏನು ಹೇಳಿದ್ದಾರೆಂದು ತಿಳಿಯೋಣ ಬನ್ನಿ..
ಮಕ್ಕಳ ತಜ್ಞರಾದ ಡಾ.ಸುರೇಂದ್ರ ಹುಟ್ಟಿದ ಮಕ್ಕಳು ಆರೋಗ್ಯಕರವಾಗಿ ಇದ್ದಾರಾ ಇಲ್ಲವಾ ಅಂತಾ ಹೇಗೆ ತಿಳಿಯುವುದು ಅನ್ನುವುದರ ಬಗ್ಗೆ ಹೇಳಿದ್ದಾರೆ. ಮಗು ಹುಟ್ಟಿದ ತಕ್ಷಣ ವೈದ್ಯರು, ಅದರ ತಲೆಯಿಂದ ಕಾಲಿನವರೆಗೂ ಮಗು ಹೇಗಿದೆ ಎಂದು ಚೆಕ್ ಮಾಡುತ್ತಾರೆ. ಬಳಿಕ ದೇಹದೊಳಗೆ ಏನಾದರೂ ಸಮಸ್ಯೆ ಇದೆಯಾ ಎಂದು ಚೆಕ್ ಮಾಡುತ್ತಾರೆ. ಇದಾದ ಬಳಿಕ ಮಗುವಿನ ತೂಕ ನೋಡಲಾಗುತ್ತದೆ.
ಮಗುವಿನ ತೂಕ 2.8ರಿಂದ 3.2 ಇರಬೇಕಾಗುತ್ತದೆ. ಇಷ್ಟು ತೂಕವಿದ್ದಲ್ಲಿ ಮಗು ಆರೋಗ್ಯಕರ ಎಂದು ಹೇಳಲಾಗುತ್ತದೆ. ಮಗು ಗುಲಾಬಿಯಾಗಿದ್ದರೆ ಮಗು ಆರೋಗ್ಯವಾಗಿದೆ ಎಂದರ್ಥ. ಮಗು ಹಸಿವಾದಾಗ, ಮಲ ಮೂತ್ರ ವಿಸರ್ಜನೆ ಮಾಡಿದಾಗ ಮಾತ್ರ ಅಳಬೇಕು. ಹೀಗಿದ್ದಾಗ, ಮಗು ಆರೋಗ್ಯವಾಗಿದೆ ಎಂದರ್ಥ. ಆದರೆ ಮಗು ಸುಮ್ಮ ಸುಮ್ಮನೆ ಅಳುತ್ತದೆ. ಸರಿಯಾಗಿ ನಿದ್ರೆ ಮಾಡುವುದಿಲ್ಲ ಎಂದಾಗ ಆ ಮಗುವಿನ ಆರೋಗ್ಯದ ಬಗ್ಗೆ ಗಮನ ಕೊಡಬೇಕು. ಮತ್ತು ಮಗುವಿನ ದೇಹದ ಬಣ್ಣ ಹಳದಿಯಾಗಿದ್ದಲ್ಲಿ, ಅದಕ್ಕೆ ವಿಟಾಮಿನ್ ಡಿ ಕಡಿಮೆ ಇದೆ ಎಂದರ್ಥ. ಇದಕ್ಕೆ ವೈದ್ಯರು ಚಿಕಿತ್ಸೆ ನೀಡುತ್ತಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಪಡೆಯಲು ಈ ವೀಡಿಯೋ ನೋಡಿ..