ಅಡುಗೆ ಕೋಣೆಯಲ್ಲಿ ಆಗುವಷ್ಟು ತಪ್ಪುಗಳು, ದೊಡ್ಡ ದೊಡ್ಡ ಆಫೀಸುಗಳಲ್ಲೂ ಆಗೋದಿಲ್ಲಾ. ಅಂಥ ತಪ್ಪುಗಳಿಂದ ಕೆಲ ವಸ್ತುಗಳು ಹಾಳಾದ್ರೆ, ಕೆಲವು ಬಾರಿ ಅಡುಗೆಗಳು ಹಾಳಾಗ್ತದೆ. ಹಾಗಾಗಿ ಇಂದು ನಾವು ಕೆಲ ಉಪಯುಕ್ತವಾದ ಕಿಚನ್ ಟಿಪ್ಸ್ ಹೇಳಲಿದ್ದೇವೆ.
ಟಿಪ್ 1. ನೀವು ಸಾರು, ಸಾಂಬಾರ್ ಮಾಡಿದಾಗ, ಅದರಲ್ಲಿ ಉಪ್ಪು ಹೆಚ್ಚಾಗಿದ್ರೆ, ಒಂದು ಆಲೂಗಡ್ಡೆಯನ್ನು ಸಿಪ್ಪೆ ತೆಗೆದು ಆ ಸಾಂಬಾರಿಗೆ ಹಾಕಿ, ಕೊಂಚ ಹೊತ್ತು ಕುದಿಸಿ. ನಂತರ ಆ ಆಲೂಗಡ್ಡೆ ಸಾಂಬಾರಿನಲ್ಲಿರುವ ಹೆಚ್ಚಿನ ಉಪ್ಪನ್ನು ಹೀರಿಕೊಳ್ಳುತ್ತದೆ.
ಟಿಪ್ 2. ನೀವು ಚಾ ಮಾಡಿದಾಗ, ಗಾಳಿಸಿ ತೆಗೆದ ಚಾ ಪುಡಿಯನ್ನು ಒಟ್ಟು ಮಾಡಿ, ಗುಲಾಬಿ ಗಿಡದ ಬುಡಕ್ಕೆ ಹಾಕಿ. ಇದರಿಂದ ಗಿಡ ಚೆನ್ನಾಗಿ ಬೆಳೆಯುತ್ತದೆ. ಕಾಫಿ ಪುಡಿಯನ್ನು ನೀರಿನಲ್ಲಿ ನೆನೆಸಿಟ್ಟು, ತುಳಸಿ ಗಿಡಕ್ಕೆ ಹಾಕುವುದರಿಂದಲೂ, ತುಳಸಿ ಸೊಂಪಾಗಿ ಬೆಳೆಯುತ್ತದೆ.
ಟಿಪ್ 3. ನೀವು ಖರೀದಿಸಿ ತಂದ ಹಸಿಮೆಣಸಿನಕಾಯಿ ಬೇಗ ಹಾಳಾಗಬಾರದು ಅಂದ್ರೆ, ಅದರ ತೊಟ್ಟನ್ನು ತೆಗೆದು ಇಡಬೇಕು. ಇದರಿಂದ ಹಸಿಮೆಣಸು ಬೇಗ ಕೆಡುವುದಿಲ್ಲ. ನಿಮಗೆ ಬೇಕಾದಲ್ಲಿ ಉಪ್ಪು ಹಾಕದೇ, ಹಸಿಮೆಣಸಿನಕಾಯಿಯ ಪೇಸ್ಟ್ ತಯಾರಿಸಿ, ಫ್ರಿಡ್ಜ್‌ನಲ್ಲಿ ಇಟ್ಟು, ಬೇಕಾದಾಗ ಅಡುಗೆಗೆ ಬಳಸಬಹುದು.
ಟಿಪ್ 4. ನೀವು ಎಷ್ಟು ದಿನ ಬೇಕಾದ್ರೂ ನಿಂಬೆಹಣ್ಣನ್ನ ಪ್ರಿಜ್‌ನಲ್ಲಿ ಇರಿಸಿದರೂ, ಅದು ಹಾಳಾಗುತ್ತದೆ. ಆದ್ರೆ ನಿಂಬೆಹಣ್ಣು ಹೆಚ್ಚು ದಿನ ಹಾಳಾಗದಂತೆ ಮಾಡಲು, ಒಂದೊಂದಾಗಿ ನಿಂಬೆಹಣ್ಣನ್ನು ನ್ಯೂಸ್ ಪೇಪರ್‌ನಲ್ಲಿ ಕಟ್ಟಿ ಇಡಬೇಕು.
ಮಕ್ಕಳಲ್ಲಿ ಕ್ಯಾಲ್ಶಿಯಂ ಕಡಿಮೆ ಇದ್ದರೆ ಹೇಗೆ ಗೊತ್ತಾಗತ್ತೆ..? ಇದರ ಲಕ್ಷಣ ಮತ್ತು ಪರಿಹಾರವೇನು..?