Saturday, April 19, 2025

Latest Posts

ಬಾಯಿ ವಾಸನೆ ತಡೆಗಟ್ಟಲು ಇಲ್ಲಿದೆ ನೋಡಿ ಉತ್ತಮ ಪರಿಹಾರ..

- Advertisement -

ನಾವು ಯಾರ ಜೊತೆಯಾದರೂ ಮಾತನಾಡುವಾಗ, ನಮ್ಮ ಮಾತು ಸರಿಯಾಗಿ ಇರುವುದರ ಜೊತೆಗೆ, ನಮ್ಮ ಬಾಯಿ ಕೂಡ ಸ್ವಚ್ಛವಾಗಿರಬೇಕು. ನಿಮ್ಮ ಮಾತು ಎಷ್ಟು ಚಂದವಿದ್ದರೂ, ನೀವು ನೋಡಲು ಎಷ್ಟೇ ಅಂದವಿದ್ದರೂ, ನಿಮ್ಮ ಬಾಯಿಯಿಂದ ದುರ್ನಾತ ಬರುತ್ತಿದ್ದಲ್ಲಿ, ಎದುರಿನವರಿಗೆ ನಿಮ್ಮ ಬಗೆಗಿನ ಅಭಿಪ್ರಾಯವೇ ಚೇಂಜ್ ಆಗಿ ಬಿಡುತ್ತದೆ. ಹಾಗಾಗಿ ಬಾಯಿಯಿಂದ ದುರ್ನಾತ ಬರದ ಹಾಗೆ ನೀವು ನೋಡಿಕೊಳ್ಳಬೇಕು. ಹಾಗಾದ್ರೆ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..

ಮೊದಲನೇಯ ಟಿಪ್ಸ್ ಅಂದ್ರೆ, ಯಾರನ್ನಾದರೂ ಭೇಟಿಯಾಗಲು ಹೋಗುವುದಿದ್ದರೆ, ಅಥವಾ ಆಫೀಸಿಗೆ ಹೋಗುವುದಿದ್ದರೆ, ಹೊಟ್ಟೆತುಂಬ ಊಟ ಮಾಡಿ, ಸ್ವಚ್ಛವಾಗಿ ಬಾಯಿ ಮುಕ್ಕಳಿಸಿ, ನೀರು ಕುಡಿದು ಹೊರಡಿ. ಯಾಕಂದ್ರೆ ಹೊಟ್ಟೆ ಹಸಿವಿನಿಂದ ಇದ್ದಾಗಲೂ ಬಾಯಿಯಿಂದ ವಾಸನೆ ಬರುತ್ತದೆ. ಊಟ ಮಾಡಿ, ಬಾಯಿ ಮುಕ್ಕಳಿಸದಿದ್ದಲ್ಲಿಯೂ ಬಾಯಿ ವಾಸನೆ ಬರುತ್ತದೆ. ಹಾಗಾಗಿ ಎಲ್ಲಿ ಹೋಗುವುದಿದ್ದರೂ, ಯಾರನ್ನ ಭೇಟಿಯಾಗುವುದಿದ್ದರೂ ಹೊಟ್ಟೆ ತುಂಬ ಉಂಡು, ಬಾಯಿ ಸ್ವಚ್ಛ ಮಾಡಿಯೇ ಹೊರಡಿ.

ಎರಡನೇಯದಾಗಿ ಯಾರನ್ನಾದರೂ ಮೀಟ್ ಮಾಡಲು ಹೋಗುವಾಗ, ಲವಂಗ, ಅಥವಾ ಸೋಂಪು ಅಥವಾ ಹಸಿ ಸೌತೇಕಾಯಿ ಸೇವನೆ ಮಾಡಿ ಹೋಗಿ. ಹೀಗೆ ಮಾಡುವುದರಿಂದ ಬಾಯಿ ವಾಸನೆ ಬರುವುದಿಲ್ಲ. ಅದೆಲ್ಲದಕ್ಕಿಂತ ಮುಖ್ಯವಾಗಿ ನೀವು ಬ್ರಶ್ ಮಾಡಿ, ನೀರು ಕುಡಿದೇ ಮನೆಯಿಂದ ಹೊರಡುವುದು ಮುಖ್ಯ. ನೀರು ಕುಡಿದಷ್ಟು ಬಾಯಿಯ ದುರ್ನಾತ ಕಡಿಮೆಯಾಗುತ್ತದೆ.

ಇನ್ನು ಮುಖ್ಯವಾದ ವಿಷಯ ಅಂದ್ರೆ, ಹೊರಹೋಗುವ ಮುನ್ನ ಈರುಳ್ಳಿ, ಬೆಳ್ಳುಳ್ಳಿ ಸೇವಿಸಲೇಬೇಡಿ. ಏನೇ ಸೇವಿಸಿದರೂ, ಬ್ರಶ್ ಮಾಡಿಕೊಂಡೇ ಹೊರಡಿ. ನೀವು ಮೌತ್ ಫ್ರೆಶ್‌ನರ್ ಬಳಸುವುದು ತಪ್ಪಲ್ಲ. ಆದರೆ ಮನೆಯಲ್ಲೇ ಸೌತೇಕಾಯಿ, ಲವಂಗ, ಸೋಂಪಿನಂಥ ಉತ್ತಮ ಪರಿಹಾರವಿರಬೇಕಾದರೆ, ಮೌತ್ ಫ್ರೆಶ್ನರ್ ಅವಶ್ಯಕತೆ ಇಲ್ಲ.

ಹಸುವಿನ ಶುದ್ಧ ತುಪ್ಪ ಸೇವಿಸುವುದು ಆರೋಗ್ಯಕ್ಕೆ ಲಾಭವೋ..? ನಷ್ಟವೋ..?

ಬಾಳೆಹಣ್ಣಿನ ಸಿಪ್ಪೆ ಬಳಸಿ ಕಣ್ಣಿನ ಸುತ್ತಲಾಗುವ ಕಪ್ಪು ಕಲೆ ಓಡಿಸಿ..

ಶೂಸ್ ಬಳಕೆಯಿಂದ ಪಾದದಲ್ಲಿ ಬರುವ ದುರ್ನಾತವನ್ನು ಹೀಗೆ ತಡೆಯಿರಿ..

- Advertisement -

Latest Posts

Don't Miss