Health Tips: ಮೊದಲೆಲ್ಲ ಬರೀ ವಯಸ್ಸಾದವರಿಗಷ್ಟೇ ಕಾಲು ನೋವು, ಸೊಂಟ ನೋವು, ಜಾಯಿಂಟ್ ಪೇನ್ ಬರುತ್ತಿತ್ತು. ಆದರೆ ಈಗ ಸಣ್ಣ ವಯಸ್ಸಿಗೆ ಜಾಯಿಂಟ್ ಪೇನ್ ಬರಲು ಶುರುವಾಗಿದೆ. ಹಾಗಾಗಿ ವೈದ್ಯರು ಇದಕ್ಕಾಗಿ ಏನೇನು ಮನೆಮದ್ದು ಬಳಸಬಹುದು ಅಂತಾ ಹೇಳಿದ್ದಾರೆ. ಅದೇನೆಂದು ತಿಳಿಯೋಣ ಬನ್ನಿ..
ವೈದ್ಯರು ಹೇಳುವ ಪ್ರಕಾರ, ಮಹಿಳೆಯರಲ್ಲಿ ಸಂಧಿವಾತ ಸರ್ವೇಸಾಮಾನ್ಯ. ದಪ್ಪಗಿರುವ, ಹೆಚ್ಚು ಕೆಲಸ ಮಾಡದೇ, ಸೋಮಾರಿಯಂತೆ ಇರುವವರಿಗೆ ಹೆಚ್ಚು ಸಂಧಿವಾತ ಬರುತ್ತದೆ. ಕೆಲವರಿಗೆ ಚಟ್ಟೆ ಮುಟ್ಟೆ ಹಾಕಿ ಕೂರಲು, ಮಂಡಿಯೂರಿ ಪ್ರಾರ್ಥಿಸಲು, ಕೂಡ ಆಗುವುದಿಲ್ಲ. ಅಷ್ಟು ನೋವಾಗುತ್ತದೆ.
ಅದಕ್ಕಾಗಿ ವೈದ್ಯರು ಮನೆ ಮದ್ದೊಂದನ್ನು ಹೇಳಿದ್ದಾರೆ. ನೀಲಗಿರಿ ಎಣ್ಣೆ ಕೊಂಚ ಪಚ್ಚ ಕರ್ಪೂರ, ಹರಳೆಣ್ಣೆ, ಚಿಟಿಕೆ ಸೈಂಧವ ಲವಣ ಹಾಕಿ. ಒಂದು ಪಾತ್ರೆಯಲ್ಲಿ ನೀರು ಬಿಸಿ ಮಾಡಿ, ಅದರಲ್ಲಿ ಚಿಕ್ಕ ಬೌಲ್ ಇಟ್ಟು, ಅದರಲ್ಲಿ ಈ ಎಣ್ಣೆ ಮಿಶ್ರಣವನ್ನಿಟ್ಟು, ಎಣ್ಣೆಯನ್ನು ಇಂಡೈರೆಕ್ಟ್ ಆಗಿ ಬಿಸಿ ಮಾಡಿ. ಈ ಎಣ್ಣೆ ಕೊಂಚ ಬಿಸಿಯಿರುವಾಗಲೇ, ಇದರಿಂದ ಮಂಡಿಗೆ ಮಸಾಜ್ ಮಾಡಿಕೊಳ್ಳಿ.
ಮುಖ್ಯವಾದ ವಿಷಯ ಅಂದ್ರೆ, ಈ ಎಣ್ಣೆಯನ್ನು ಡೈರೆಕ್ಟ್ ಆಗಿ ಬಿಸಿ ಮಾಡಬಾರದು. ಹಾಗೆ ಮಾಡಿದ್ದಲ್ಲಿ, ಇದರ ಸತ್ವಗಳು ಹಾಳಾಗಿ ಹೋಗುತ್ತದೆ. ಈ ಬಗ್ಗೆ ವೈದ್ಯರು ಇನ್ನೂ ಹೆಚ್ಚು ಟಿಪ್ಸ್ ಹೇಳಿದ್ದಾರೆ. ಈ ಬಗ್ಗೆ ತಿಳಿಯಲು ಈ ವೀಡಿಯೋ ನೋಡಿ..