Spiritual: ವಿಜ್ಞಾನ ಎಷ್ಟು ಮುಂದುವರೆದಿದೆ ಅಂದ್ರೆ, ಹೊಟೇಲ್, ಮನೆ, ನ್ಯೂಸ್ ಚಾನೆಲ್ ಎಲ್ಲ ಕಡೆಯೂ ರೋಬೋಟ್ ತಂದು ನಿಲ್ಲಿಸಬಹುದು. ಅಷ್ಟು ಮುಂದುವರೆದಿದೆ. ಆದ್ರೆ ಭಾರತದ ಪ್ರಥಮ ರೊಬೋಟಿಕ್ ಆನೆಯನ್ನು ಕೇರಳದ ತ್ರಿಶೂರಿನ ದೇವಸ್ಥಾನದಲ್ಲಿ ತಂದು ನಿಲ್ಲಿಸಲಾಗಿದೆ. ಇದು ನೋಡಲು ಥೇಟ್ ಜೀವಂತ ಆನೆಯ ರೀತಿಯೇ ಇದ್ದು, ಎಲ್ಲರ ಗಮನ ಸೆಳೆದಿದೆ.
ತ್ರಿಶೂರಿನಲ್ಲಿರುವ ಶ್ರೀಕೃಷ್ಣ ದೇವಸ್ಥಾನದಲ್ಲಿ ಈ ಆನೆ ಇದೆ. ಇದಕ್ಕೆ ರಾಮನ್ ಎಂದು ಹೆಸರಿಡಲಾಗಿದೆ. 800 ಕಿಲೋ ತೂಕದ ಈ ಆನೆ, 11 ಅಡಿ ಎತ್ತರವಿದ್ದು, ಇದರ ಚಲನವಲನ, ಬಣ್ಣವೆಲ್ಲ ಥೇಟ್ ಆನೆಯಂತೆ ಇದೆ. ದೇವಸ್ಥಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವಿದ್ದ ಸಂದರ್ಭದಲ್ಲಿ, ಈ ಆನೆಯನ್ನು ಬಳಸಬಹುದು. ಜೀವಂತ ಆನೆಯಾದರೆ, ಪಟಾಕಿ ಸದ್ದಿಗೆ, ಸಂಗೀತ ವಾದ್ಯದ ಸದ್ದಿಗೆ ಹೆದರುತ್ತದೆ.
ಆದರೆ ರೋಬೋಟಿಕ್ ಆನೆ, ಈ ರೀತಿ ಹೆದರುವುದಿಲ್ಲ. ಮತ್ತು ರೊಬೋಟಿಕ್ ಆನೆ ಭಾರ ಹೊರಲು ಶಕ್ತವಾಗಿರುತ್ತದೆ. ಜೀವಂತ ಆನೆಯಾದರೆ, ತುಂಬ ಹೊತ್ತು ಭಾರ ಹೊರಬೇಕಾಗುತ್ತದೆ ಅನ್ನುವುದು ಹಲವರ ಅಭಿಪ್ರಾಯ. ಆದರೆ ಇದು ಹಿಂದೂ ಸಂಸ್ಕೃತಿಗೆ ಮಾರಕವೆಂಬುದು ಹಲವರ ಮಾತು.
ದೇವರ ದಯೆ ಇಲ್ಲದಿದ್ದರೆ, ಹುಲ್ಲುಕಡ್ಡಿಯೂ ಅಲ್ಲಾಡುವುದಿಲ್ಲ ಅಂತಾ ಹೇಳುವುದ್ಯಾಕೆ..?




