Health Tips: ಈಗಿನ ಕಾಲದಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಇದ್ದರೂ, ಅದಕ್ಕೆ ಬೇಕಾದ ಟ್ಯಾಬ್ಲೇಟ್, ಕ್ರೀಮ್ ಎಲ್ಲವೂ ಮಾರುಕಟ್ಟೆಯಲ್ಲಿ ಸಿಗುತ್ತದೆ. ಆದರೆ ಮೊದಲಿನ ಕಾಲದಲ್ಲಿ ಹಾಗಲ್ಲ, ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲೇ ಮದ್ದು ಮಾಡಿಕೊಳ್ಳುತ್ತಿದ್ದರು. ಮನೆಯಲ್ಲಿರುವ ಗಿಡ, ಅಡುಗೆ ಮನೆಯಲ್‌ಲಿರುವ ಪದಾರ್ಥಗಳೇ ಔಷಧಿಯಾಗಿತ್ತು. ಇಂದಿಗೂ ಹಲವರು ಇದೇ ಪದ್ಧತಿಯನ್ನು ಅನುಸರಿಸುತ್ತಾರೆ. ಹಾಗಾಗಿ ಇಂದು ನಾವು ಗರ್ಭಿಣಿಯರ ಹೊಟ್ಟೆ ಮೇಲಾಗುವ ಸ್ಟ್ರೆಚ್ ಮಾರ್ಕ್ ಸಮಸ್ಯೆಗೆ ಮನೆಯಲ್ಲೇ ಹೇಗೆ ಮದ್ದು ಮಾಡುವುದು ಎಂದು ಹೇಳಲಿದ್ದೇವೆ.
ತೆಂಗಿನ ಎಣ್ಣೆ. ಗಾಯವಾದರೆ, ಮುಖ ಸಾಫ್ಟ್ ಆಗಬೇಕು ಅಂದ್ರೆ, ತಲೆಗೂದಲು ನೀಳವಾಗಿ, ಸಧೃಡವಾಗಿ ಇರಬೇಕು ಅಂದ್ರೆ, ತುರಿಕೆ- ಕಜ್ಜಿಯಾಗಿದ್ರೆ, ಎಲ್ಲದಕ್ಕೂ ಬಳಸಬಹುದಾದ ವಸ್ತು ಅಂದ್ರೆ, ಅದು ತೆಂಗಿನ ಎಣ್ಣೆ. ಶುದ್ಧವಾದ ತೆಂಗಿನ ಎಣ್ಣೆ ಔಷಧಿಯಾಗಿ ಕೆಲಸ ಮಾಡುತ್ತದೆ. ನಿಮ್ಮ ಹೊಟ್ಟೆಯ ಮೇಲೆ ಸ್ಟ್ರೆಚ್ ಮಾರ್ಕ್ ಬರಲು ಶುರುವಾದ ಬಳಿಕ, ಪ್ರತಿದಿನ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿ. ಮಗುವಾಗಿ 6 ತಿಂಗಳವರೆಗೂ ನೀವು ತೆಂಗಿನ ಎಣ್ಣೆಯಿಂದ ಹೊಟ್ಟೆಗೆ ಮಸಾಜ್ ಮಾಡಬಹುದು.
ಆ್ಯಲೋವೆರಾ ಜೆಲ್. ಸೌಂದರ್ಯ ಮತ್ತು ಆರೋಗ್ಯ ಎರಡನ್ನೂ ಅಭಿವೃದ್ಧಿಪಡಿಸುವಲ್ಲಿ ಆ್ಯಲೋವೆರಾ ಜೆಲ್ ಸಹಕಾರಿಯಾಗಿದೆ. ಇದು ನಿಮ್ಮ ಮುಖದ ಮೇಲಿನ ಮೊಡವೆ, ಮೊಡವೆ ಕಲೆ ಸರಿದೂಗಿಸುತ್ತದೆ. ಹಿಮ್ಮಡಿಯನ್ನು ಸಾಫ್ಟ್ ಮಾಡುವಲ್ಲಿ ಸಹಕಾರಿಯಾಗಿದೆ. ಕೂದಲ ಬುಡಕ್ಕೆ ಆ್ಯಲೋವೆರಾದಿಂದ ಮಸಾಜ್ ಮಾಡಿದರೆ, ಕೂದಲು ಗಟ್ಟಿಮುಟ್ಟಾಗುತ್ತದೆ. ಅದೇ ರೀತಿ, ಗರ್ಭಿಣಿಯರಿಗೆ ಸ್ಟ್ರೆಚ್ ಮಾರ್ಕ್ ಮೂಡಲು ಶುರುವಾದಾಗಿನಿಂದ ಪ್ರತಿದಿನ ಆ್ಯಲೋವೆರಾದಿಂದ ಮಸಾಜ್ ಮಾಡಿ. ಇದರಿಂದ ಸ್ಟ್ರೆಚ್ ಮಾರ್ಕ್ ಕಡಿಮೆಯಾಗಿ, ನಿಮ್ಮ ಹೊಟ್ಟೆಯ ಸ್ಕಿನ್ ಸಾಫ್ಟ್ ಆಗುತ್ತದೆ.
Digestion-Indigestion ಅಂದ್ರೆ ಏನು? ಆರೋಗ್ಯಕ್ಕೆ ಯಾವ ಆಹಾರಗಳು ಉತ್ತಮ?