ಗರ್ಭಿಣಿಯರಿಗೆ ಮಲವಿಸರ್ಜನೆ ಸರಿಯಾಗಿ ಆಗದಿದ್ದಲ್ಲಿ, ಈ ಆಹಾರ ಸೇವಿಸಿ..

Health Tips: ಗರ್ಭಿಣಿ ಆದಾಗ, ಆ ಹೆಣ್ಣು ಹಲವು ಕಷ್ಟಗಳನ್ನು, ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ತಲೆಸುತ್ತು ಬರುವುದು, ಪದೇ ಪದೇ ವಾಂತಿಯಾಗುವುದು, ಅನ್ನದ ಪರಿಮಳ, ಹೂವಿನ ಪರಿಮಳ, ಊದುಬತ್ತಿ ಪರಿಮಳಗಳೂ ಕಿರಿಕಿರಿಯುಂಟು ಮಾಡುವುದು. ಇದೆಲ್ಲ ಆಗುತ್ತದೆ. ಅದೇ ರೀತಿ ಇನ್ನೊಂದು ಸಮಸ್ಯೆ ಎಂದರೆ, ಮಲಬದ್ಧತೆ ಸಮಸ್ಯೆ. ಹಾಗಾಗಿ ಇಂದು ನಾವು ಗರ್ಭಣಿಯರಿಗೆ ಮಲವಿಸರ್ಜನೆ ಸರಿಯಾಗಿ ಆಗದಿದ್ದಲ್ಲಿ, ಯಾವ ಆಹಾರಗಳನ್ನು ಸೇವಿಸಬೇಕು ಎಂದು ಹೇಳಲಿದ್ದೇವೆ.

ಕಲ್ಲಂಗಡಿ ಹಣ್ಣು: ಕಲ್ಲಂಗಡಿ ಹಣ್ಣಿನ ಸೇವನೆ ಮಾಡುವುದರಿಂದ, ಗರ್ಭಿಣಿಯರಿಗೆ ಸರಿಯಾಗಿ ಮಲವಿಸರ್ಜನೆಯಾಗುತ್ತದೆ. ಮತ್ತು ಇದು ಅವರ ಆರೋಗ್ಯಕ್ಕೂ ಉತ್ತಮವಾಗಿದೆ.

ಬಾಳೆಹಣ್ಣು: ಗರ್ಭಿಣಿಗೆ ಮಲಬದ್ಧತೆಯಾಗಿದ್ದಲ್ಲಿ, ಆಕೆ ಬಾಳೆಹಣ್ಣನ್ನು ಸೇವಿಸಬೇಕು. ಆದರೆ ಯಾವುದೇ ಕಾರಣಕ್ಕೂ ಹೈಬ್ರೀಡ್ ಬಾಳೆಹಣ್ಣು, ಚುಕ್ಕೆ ಬಾಳೆಹಣ್ಣನ್ನು ಮಾತ್ರ ಸೇವಿಸಬಾರದು. ಇದರಿಂದ ಮಲವಿಸರ್ಜನೆಯಾದರೂ, ಮಗುವಿನ ಆರೋಗ್ಯಕ್ಕೆ ಹೊಡೆತ ಬೀಳುತ್ತದೆ. ಹಾಗಾಗಿ, ಚಿಕ್ಕ ಚಿಕ್ಕ ಬಾಳೆಹಣ್ಣುಗಳನ್ನು ನೀವು ಸೇವಿಸಬಹುದು.

ಸೇಬುಹಣ್ಣು: ಸೇಬುಹಣ್ಣು ರುಚಿಕರವಾದ ಮತ್ತು ಆರೋಗ್ಯಕರವಾದ ಹಣ್ಣಾಗಿದೆ. ಇದರ ಸೇವನೆಯಿಂದ ತಾಯಿ- ಮಗುವಿನ ಆರೋಗ್ಯ ಮತ್ತು ಸೌಂದರ್ಯ ಉತ್ತಮವಾಗಿರುತ್ತದೆ. ಅಲ್ಲದೇ, ತಾಯಿಗೆ ಮಲಬದ್ಧತೆ ಸಮಸ್ಯೆಯೂ ಬರುವುದಿಲ್ಲ.

ಕಿತ್ತಳೆ ಹಣ್ಣು: ಕಿತ್ತಳೆ ಹಣ್ಣಿನಲ್ಲಿ ನಾರಿನಂಶ ಇರುವ ಕಾರಣಕ್ಕೆ, ಇದು ಹಲವು ರೋಗಗಳನ್ನು ವಾಸಿ ಮಾಡಲು ಸಹಾಯ ಮಾಡುತ್ತದೆ. ಅದೇ ರೀತಿ ಮಲಬದ್ಧತೆ ಸಮಸ್ಯೆಯಿಂದಲೂ ಮುಕ್ತಿ ಕೊಡುತ್ತದೆ. ವಿಟಾಮಿನ್ ಸಿ ಅಂಶವನ್ನೊಳಗೊಂಡ ಈ ಹಣ್ಣಿನ ಸೇವನೆಯಿಂದ ಮಗುವಿಗೆ ಭರಪೂರ ಪೋಷಕಾಂಶ ಸಿಗುತ್ತದೆ. ಅಲ್ಲದೇ, ತಾಯಿಯ ಆರೋಗ್ಯವೂ ಚೆನ್ನಾಗಿರುತ್ತದೆ.

ಇನ್ನು ಮುಖ್ಯವಾದ ವಿಚಾರ ಎಂದರೆ, ಈ ಎಲ್ಲ ಹಣ್ಣು- ಹಂಪಲು ಸೇವಿಸಿಯೂ ನಿಮಗೆ ಸರಿಯಾಗಿ ಮಲವಿಸರ್ಜನೆಯಾಗದಿದ್ದಲ್ಲಿ, ಈ ಬಗ್ಗೆ ವೈದ್ಯರ ಬಳಿ ವಿಚಾರಿಸುವುದು ಉತ್ತಮ. ಇನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರು ಕುಡಿಯುವುದನ್ನು ಮಾತ್ರ ಮರಿಯಬೇಡಿ.

Digestion-Indigestion ಅಂದ್ರೆ ಏನು? ಆರೋಗ್ಯಕ್ಕೆ ಯಾವ ಆಹಾರಗಳು ಉತ್ತಮ?

Nipah Virus ಲಕ್ಷಣಗಳೇನು..? ಡಾಕ್ಟರ್ ಏನಂತಾರೆ ಗೊತ್ತಾ?

ತಾಯಿಗೆ ಮಗುವಿನ ಬಗ್ಗೆ ಏನೇನು ತಿಳಿದಿರಬೇಕು..?

About The Author