ಬೆಳಗಾವಿ ಜಿಲ್ಲೆಯ ಅಥಣಿ(Athani Section) ವಿಭಾಗದ ಹೆಸ್ಕಾಂ(HESCOM) ಅಧಿಕಾರಿಗಳು ಕೋಟ್ಯಂತರ ರೂಪಾಯಿ ಲೂಟಿ ಮಾಡಿರುವ ಆರೋಪ ಕೇಳಿಬಂದಿದ್ದು, ಈ ಕುರಿತು ಆಗಸ್ಟ್ 2021ರಲ್ಲಿ ದೂರು ದಾಖಲಾಗಿತ್ತು. ನೀರು ಸರಬರಾಜು,ದಿನದಯಾಳು ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ(DDUGJY), ಗಂಗಾ ಕಲ್ಯಾಣ(ganga kalyana scheme ), ಕಾಂಪ್ಲೆಕ್ಸ್ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳಲ್ಲಿ ಕಾಮಗಾರಿಯನ್ನು ಕೈಗೊಳ್ಳದೆ ಬಿಲ್ ಮಾಡಿ ಹಣ ಲೂಟಿ ಮಾಡಲಾಗಿದೆ ಎಂದು ದೂರು ದಾಖಲಾಗಿತ್ತು. ಈ ಬಗ್ಗೆ ದೂರು ಸ್ವೀಕರಿಸಿದ ತಕ್ಷಣ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಭಾರತಿ ಡಿ (Hescom Managing Director Bharathi D) ಪ್ರಕರಣದ ಪರಿಶೀಲನೆಗೆ ಉನ್ನತ ಅಧಿಕಾರಿಗಳ ತಂಡವನ್ನು ರಚಿಸಿ, ಆಗಸ್ಟ್ 2018 ರಿಂದ 21ರವರೆಗೆ ಲೆಕ್ಕಪರಿಶೋಧನೆಗೆ ನಿರ್ದೇಶನ ನೀಡಲಾಗಿತ್ತು. ಲೆಕ್ಕಪರಿಶೋಧನೆಯ ನಂತರ 86 ಕೋಟಿ ರೂಪಾಯಿಗಳನ್ನು ಪೂರ್ಣಗೊಳಿಸದ ಮತ್ತು ಕಾಮಗಾರಿ ತೆಗೆದುಕೊಳ್ಳದೆ ಬಿಲ್ ಮಾಡಲಾಗಿದೆ ಎಂದು ಕಂಡುಬಂದಿದೆ. ಈ ವರದಿಯನ್ನು ಇಸ್ಕಾನ ವ್ಯವಸ್ಥಾಪಕ ನಿರ್ದೇಶಕಿ ಭಾರತಿ ಡಿ ಇಂಧನ ಇಲಾಖೆಗೆ ಕಳುಹಿಸಿದ್ದಾರೆ. ಒಬ್ಬ ಪ್ರಭಾರಿ ಕಾರ್ಯಪಾಲ ಇಂಜಿನಿಯರ್, ನಾಲ್ವರು ಸಹಾಯಕ ಕಾರ್ಯಪಾಲಕ ಅಭಿಯಂತರರು, 12 ಸೆಕ್ಷನ್ ಅಧಿಕಾರಿಗಳು, ಕೆಲವು ಸಿಬ್ಬಂದಿಗಳು ನೇರವಾಗಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದು ಕಂಡುಬಂದಿದ್ದು, ಇಂಧನ ಸಚಿವ ವಿ ಸುನಿಲ್ ಕುಮಾರ್(Energy Minister V Sunil Kumar) 20 ಸಿಬ್ಬಂದಿಯನ್ನು ಅಮಾನತ್ತು ಮಾಡಿ, ಏಳು ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದಾರೆ. ಕಾಮಗಾರಿ ತೆಗೆದುಕೊಳ್ಳದೆ 29 ಕೋಟಿ ರೂ, ಅರ್ಧಕ್ಕೆ ನಿಂತ ಕಾಮಗಾರಿ ಮತ್ತು ಡಬಲ್ ಕಾಮಗಾರಿ ಸೇರಿದಂತೆ 57 ಕೋಟಿ ರೂ ಭ್ರಷ್ಟಾಚಾರ ನಡೆದಿರುವುದು ತಿಳಿದುಬಂದಿದೆ. ಇಂತಹ ಬ್ರಷ್ಟಾಚಾರಕ್ಕೆ ಯಾವುದೇ ರೀತಿಯಲ್ಲೂ ಬೆಂಬಲಿಸುವುದಿಲ್ಲ, ಇವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಇಂಧನ ಸಚಿವ ವಿ ಸುನೀಲ್ ಕುಮಾರ್ ತಿಳಿಸಿದ್ದಾರೆ.