Tuesday, October 22, 2024

Latest Posts

ಸಾಫ್ಟ್, ಸುಂದರವಾದ ಹಿಮ್ಮಡಿ ನಿಮ್ಮದಾಗಬೇಕೆಂದರೆ, ಈ ಮನೆಮದ್ದು ಬಳಸಿ..

- Advertisement -

ಹೆಣ್ಣು ಮಕ್ಕಳಿಗೆ ಇರುವ ಸೌಂದರ್ಯ ಸಮಸ್ಯೆಗಳಲ್ಲಿ ಹಿಮ್ಮಡಿ ಒಡೆಯುವ ಸಮಸ್ಯೆ ಕೂಡ ಒಂದು. ಮಾರ್ಕೇಟ್‌ನಿಂದ ಎಷ್ಟೇ ಕ್ರೀಮ್ ಹಚ್ಚಿಕೊಂಡ್ರು, ಈ ಸಮಸ್ಯೆಗೆ ಸೂಕ್ತ ಪರಿಹಾರ ಸಿಗುವುದೇ ಇಲ್ಲ. ಹಾಗಾಗಿ ನಾವಿಂದು ಹಿಮ್ಮಡಿಗೆ ಹಚ್ಚಲು, ಮನೆಯಲ್ಲೇ ಕ್ರೀಮ್ ತಯಾರಿಸುವ ರೀತಿಯನ್ನ ನಾವು ನಿಮಗಿಂದು ಹೇಳಲಿದ್ದೇವೆ.

ಒಂದು ಚಿಕ್ಕ ಕ್ಯಾಂಡಲ್, ಒಂದು ಪುಟ್ಟ ಬೌಲ್ ಸಾಸಿವೆ ಎಣ್ಣೆ, ಅದೇ ಬೌಲ್‌ನಲ್ಲಿ ನ್ಯಾಚುರಲ್ ಆ್ಯಲೋವೆರಾ ಜೆಲ್, ತೆಂಗಿನ ಎಣ್ಣೆ. ಇವಿಷ್ಟು ಕ್ರೀಮ್ ಮಾಡಲು ಬೇಕಾಗುವ ಸಾಮಗ್ರಿ. ಮೊದಲು ಕ್ಯಾಂಡಲ್ ತುರಿದು, ಅದಕ್ಕೆ ಸಾಸಿವೆ ಎಣ್ಣೆ, ಆ್ಯಲೋವೆರಾ ಜೆಲ್, ತೆಂಗಿನ ಎಣ್ಣೆ ಹಾಕಿ ಮಿಕ್ಸ್ ಮಾಡಿ. ಒಂದು ಚಿಕ್ಕ ಪ್ಯಾನ್ ಅಥವಾ ಒಗ್ಗರಣೆ ಹಾಕುವ ಸೌಟಿನಲ್ಲಿ ಇದನ್ನೆಲ್ಲ ಹಾಕಿ, ಮಂದ ಉರಿಯಲ್ಲಿ ಬಿಸಿ ಮಾಡಬೇಕು. ಇದು ಸ್ವಲ್ಪ ಗಟ್ಟಿಯಾದಂತೆ, ಗ್ಯಾಸ್ ಆಫ್ ಮಾಡಿ. ಈ ಮಿಶ್ರಣವನ್ನ ತಣಿಸಿ, ಒಂದು ಪುಟ್ಟ ಬಾಕ್ಸ್‌ಗೆ ಹಾಕಿ, ಸ್ವಲ್ಪ ಹೊತ್ತು ಬಿಟ್ಟರೆ, ವ್ಯಾಸ್ಲಿನ್ ರೀತಿಯ ಕ್ರೀಮ್ ರೆಡಿಯಾಗುತ್ತದೆ.

ಕ್ರೀಮ್ ರೆಡಿಯಾಗಿದೆ. ಇದನ್ನ ಅಪ್ಲೈ ಮಾಡೋದು ಹೇಗೆ ಅಂದ್ರೆ. ಬೆಳಿಗ್ಗೆ ಸ್ನಾನದ ಬಳಿಕ, ನಿಮ್ಮ ಕಾಲಿನ ಚರ್ಮ ಸಾಫ್ಟ್ ಆಗಿರುತ್ತದೆ. ಹಾಗಾಗಿ ಆ ವೇಳೆ ನೀವು ಸ್ಕ್ರಬರ್ ಸಹಾಯದಿಂದ, ನಿಮ್ಮ ಪಾದವನ್ನು ಸ್ಕ್ರಬ್ ಮಾಡಬೇಕು. ನಂತರ ನಿಮ್ಮ ಪಾದ, ಹಿಮ್ಮಡಿಗೆ ಈ ಕ್ರೀಮ್ ಹಚ್ಚಬೇಕು. ನಂತರ ಸಾಕ್ಸ್‌ನಿಂದ ನಿಮ್ಮ ಕಾಲನ್ನ ಕವರ್ ಮಾಡಬೇಕು. ಈ ಕ್ರೀಮ್ ಹಚ್ಚಿದ ಬಳಿಕ, ಹೆಚ್ಚು ನೀರು ತಾಕಿಸಬಾರದು.

ನಂತರ ರಾತ್ರಿ ಹೊತ್ತು ಕೂಡ, ಕಾಲು ತೊಳೆದು, ಬಟ್ಟೆಯಿಂದ ಒರೆಸಿ, ಒಣಗಿಸಿ, ಕ್ರೀಮ್ ಅಪ್ಲೈ ಮಾಡಿ, ಸಾಕ್ಸ್ ಧರಿಸಿ ಮಲಗಿ. ಹೀಗೆ ಮಾಡುವುದರಿಂದ ಎರಡೇ ವಾರದೊಳಗೆ ನಿಮ್ಮ ಹಿಮ್ಮಡಿ, ಸಾಫ್ಟ್ ಆಗುತ್ತದೆ. ನಿಮ್ಮ ಕಾಲು ಸುಂದರವಾಗಿ ಕಾಣುತ್ತದೆ. ನೀವು ಪ್ರತಿದಿನ ಸ್ಕ್ರಬ್ ಮಾಡಬೇಕೆಂದಿಲ್ಲ. ಎರಡು ದಿನಕ್ಕೊಮ್ಮೆ ಮಾಡಿದರೂ ಸಾಕು.

ವಾರಕ್ಕೊಮ್ಮೆ ಉಗುರು ಬೆಚ್ಚಗಿನ ನೀರಿಗೆ, ಅರ್ಧ ನಿಂಬೆಹಣ್ಣಿನ ರಸ, ಒಂದು ಸ್ಪೂನ್ ದಪ್ಪ ಉಪ್ಪು, ಎರಡು ಸ್ಪೂನ್ ರೋಸ್ ವಾಟರ್ ಹಾಕಿ, ಅದರಲ್ಲಿ 15 ನಿಮಿಷ ಕಾಲು ನೆನೆಸಿಡಿ. ನಂತರ ಸ್ವಚ್ಛವಾದ ಬಟ್ಟೆಯಿಂದ ಕಾಲನ್ನ ಒರೆಸಿ, ಈ ಕ್ರೀಮ್ ಹಚ್ಚಿ, ಸಾಕ್ಸ್ ಹಾಕಿಕೊಳ್ಳಿ. ಇದೆಲ್ಲ ಮಾಡುವ ಮೊದಲು ಸ್ವಚ್ಛವಾಗಿ ಕಾಲು ತೊಳೆದುಕೊಳ್ಳಿ. ಬ್ಯೂಟಿಪಾರ್ಲರ್‌ಗೆ ಹೋಗಿ, ಮೆನಿಕ್ಯೂರ್, ಪೆಡಿಕ್ಯೂರ್ ಮಾಡಿಸಿಕೊಳ್ಳುವ ಬದಲು, ಈ ರೀತಿ ನೀವು ಮನೆಯಲ್ಲೇ ಕಾಲನ್ನ ಕ್ಲೀನ್ ಮಾಡಿಕೊಳ್ಳುವುದು ಬೆಸ್ಟ್.

- Advertisement -

Latest Posts

Don't Miss