ಕೂದಲಿನ ಆರೋಗ್ಯ ಅಭಿವೃದ್ಧಿ ಬಗ್ಗೆ ನಾವು ನಿಮಗೆ ಹಲವಾರು ಟಿಪ್ಸ್ ಕೊಟ್ಟಿದ್ದೇವೆ. ಕೂದಲು ಗಟ್ಟಿಯಾಗಿರಲು ಏನು ಮಾಡಬೇಕು..? ಉದುರದಿರಲು ಏನು ಮಾಡಬೇಕು..? ಶೈನಿಯಾಗಿರಲು ಏನು ಮಾಡಬೇಕು..? ಇತ್ಯಾದಿ ವಿಷಯಗಳ ಬಗ್ಗೆ ಹೇಳಿದ್ದೇವೆ. ಇಂದು ಡ್ಯಾಂಡ್ರಫ್ ಸಮಸ್ಯೆ ಇದ್ದರೆ, ಅದಕ್ಕೆ ಪರಿಹಾರವಾಗಿ ಏನು ಮಾಡ್ಬೇಕು ಎಂದು ಹೇಳಲಿದ್ದೇವೆ..
ಡ್ಯಾಂಡ್ರಫ್ ಯಾರಿಗಿರುತ್ತದೆಯೋ, ಅವರಿಗಷ್ಟೇ ಅದರಿಂದಾಗುವ ಸಮಸ್ಯೆ ಗಳ ಬಗ್ಗೆ ಅರಿವಿರುತ್ತದೆ. ಕೆಲವರಿಗಂತೂ ಇದು ಮರ್ಯಾದೆ ಪ್ರಶ್ನೆ. ಅಷ್ಟು ಡ್ಯಾಂಡ್ರಫ್ ಬಗ್ಗೆ ತಲೆಕೆಡಿಸಿಕೊಂಡಿರುತ್ತಾರೆ. ಅಂಥವರಿಗಾಗಿ ನಾವಿಂದು ಡ್ಯಾಂಡ್ರಫ್ ಇದ್ದಾಗ ಏನು ಮಾಡಬೇಕು ಎಂದು ಹೇಳಲಿದ್ದೇವೆ. ನೀವು ಮಾಡಬೇಕಾದ ಮೊದಲನೇಯ ಕೆಲಸವೆಂದರೆ, ನೀವು ತಲೆಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿ, ಒಂದು ಗಂಟೆ ಬಳಿಕ ತಲೆ ಸ್ನಾನ ಮಾಡಬೇಕು. ಅಥವಾ ರಾತ್ರಿ ತಲೆಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿ, ಮರುದಿನ ಬೆಳಿಗ್ಗೆ ತಲೆಸ್ನಾನ ಮಾಡಬೇಕು.
ಕೆಲವರಿಗೆ ತಲೆಗೆ ಯಾವಾಗಲೂ ಎಣ್ಣೆ ಇರಲೇಬೇಕು. ಇಲ್ಲದಿದ್ದಲ್ಲಿ, ಅವರಿಗೆ ತಲೆ ನೋವು ಬರುತ್ತದೆ. ಹೀಗಾಗಿ ಅಂಥವರು, ಪ್ರತಿದಿನ ಎಣ್ಣೆ ಮಸಾಜ್ ಮಾಡಿಕೊಂಡು, ಹೊರಗೆ ಹೋಗುತ್ತಾರೆ. ಹೀಗಾದಾಗ, ನಮ್ಮ ತಲೆಗೆ ಧೂಳು ಬಂದು ಅಂಟಿಕೊಳ್ಳುತ್ತದೆ. ಇದರಿಂದ ಡ್ಯಾಂಡ್ರಫ್ ಆಗುತ್ತದೆ. ಅಲ್ಲದೇ, ನಿಮ್ಮ ಕೂದಲು ಶೈನ್ ಕಳೆದುಕೊಳ್ಳುತ್ತದೆ. ಹಾಗಾಗಿ ಎಣ್ಣೆ ಮಸಾಜ್ ಮಾಡಿ, ಆದಷ್ಟು ಬೇಗ ಹೇರ್ ವಾಶ್ ಮಾಡಿ.
ನೀವು ಎಷ್ಟು ಕ್ಲೀನ್ ಆಗಿ ಹೇರ್ ವಾಶ್ ಮಾಡಬೇಕು ಅಂದ್ರೆ, ನಿಮ್ಮ ನೆತ್ತಿಗೆ ತಾಗಿದ ಎಣ್ಣೆಪಸೆ ಕ್ಲೀನ್ ಆಗಬೇಕು. ಕೆಲವರು ಎಣ್ಣೆ ಹಾಕಿ ಸ್ವಲ್ಪ ಹೊತ್ತಿಗೆ ತಲೆ ಸ್ನಾನ ಮಾಡಿದ್ರೂ, ಸರಿಯಾಗಿ ಎಣ್ಣೆ ಪಸೆ ಹೋಗಿರುವುದಿಲ್ಲ. ಹಾಗಾಗಿಯೇ ಅವರಿಗೆ ಡ್ಯಾಂಡ್ರಫ್ ಆಗುತ್ತದೆ. ನಾವು ಈಗಾಗಲೇ ತಲೆ ಕೂದಲು ಉದುರದಿರಲು, ಮನೆಯಲ್ಲೇ ತಯಾರಿಸಬಹುದಾದ ಎಣ್ಣೆ ಮತ್ತು ಶ್ಯಾಂಪೂ, ಹೇರ್ ಪ್ಯಾಕ್‌ಗಳನ್ನು ಹೇಳಿದ್ದೇವೆ. ಇನ್ನು ನೀವು ಇದರೊಂದಿಗೆ, ಚಕ್ರಾಸನ, ಅಧೋಮುಖ ಶ್ವಾನಾಸನ, ಸರ್ವಾಂಗಾಸನ ಮಾಡಿದರೆ ಇನ್ನೂ ಉತ್ತಮ.